ಶಾಸಕ ವೆಂಕಟರಮಣಪ್ಪ ಅಭಿವೃದ್ಧಿ ಹಾಗೂ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಎಚ್.ವಿ.ವೆಂಕಟೇಶ್ ನಾಯಕತ್ವದ ಹಿನ್ನಲೆಯಲ್ಲಿ ತಾಲೂಕಿನಲ್ಲಿ ಕಾಂಗ್ರೆಸ್ ಸದೃಢವಾಗಿದ್ದು ಅವರ ವಿರುದ್ಧ ಇಲ್ಲಿನ ಕೆಲ ಮುಖಂಡರು ತೇಜೋವಧೆಗೆ ಮುಂದಾಗಿ ಪಕ್ಷಕ್ಕೆ ಹಾನಿ ಮಾಡಲು ಮುಂದಾಗಿದ್ದಾರೆ.
ಪಾವಗಡ (ಡಿ.30): ಶಾಸಕ ವೆಂಕಟರಮಣಪ್ಪ ಅಭಿವೃದ್ಧಿ ಹಾಗೂ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಎಚ್.ವಿ.ವೆಂಕಟೇಶ್ ನಾಯಕತ್ವದ ಹಿನ್ನಲೆಯಲ್ಲಿ ತಾಲೂಕಿನಲ್ಲಿ ಕಾಂಗ್ರೆಸ್ ಸದೃಢವಾಗಿದ್ದು ಅವರ ವಿರುದ್ಧ ಇಲ್ಲಿನ ಕೆಲ ಮುಖಂಡರು ತೇಜೋವಧೆಗೆ ಮುಂದಾಗಿ ಪಕ್ಷಕ್ಕೆ ಹಾನಿ ಮಾಡಲು ಮುಂದಾಗಿದ್ದಾರೆ. ಮೊದಲು ನಿಮ್ಮ ಪಕ್ಷ ಯಾವುದು ಸ್ಪಷ್ಟಪಡಿಸುವಂತೆ ಎಪಿಎಂಸಿ ಮಾಜಿ ಅಧ್ಯಕ್ಷ ಕರೆಕ್ಯಾತನಹಳ್ಳಿ ಮಂಜುನಾಥ್ ಅತೃಪ್ತರ ವಿರುದ್ಧ ಹಾರಿಹಾಯ್ದರು.
ಇಲ್ಲಿನ ಕೆಲ ಕಾಂಗ್ರೆಸ್‌ನ (Congress) ಬಂಡಾಯ ಮುಖಂಡರು ಮಂಗಳವಾರ ತುಮಕೂರಿಗೆ (Tumakur) ತೆರಳಿ, ಶಾಸಕ ವೆಂಕಟರಮಣಪ್ಪ ಅಭಿವೃದ್ಧಿ ಹಾಗೂ ಎಚ್.ವಿ.ವೆಂಕಟೇಶ್ ವಿರುದ್ಧ ಇಲ್ಲ ಸಲ್ಲದ ಟೀಕಾಪ್ರಹಾರ ನಡೆಸಿ, ಇಲ್ಲಿನ ಕಾಂಗ್ರೆಸ್ ಟಿಕೆಟ್ ಹೊಸಬರಿಗೆ, ನೀಡುವಂತೆ ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿಗೆ ಒತ್ತಾಯಿಸಿದ್ದರು. ಈ ಹಿನ್ನೆಲೆ ನಿಡಗಲ್ ಹೋಬಳಿ ಕಾಂಗ್ರೆಸ್ ಮುಖಂಡರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ, ಅತೃಪ್ತರ ನಡೆ ವಿರುದ್ಧ ಕಿಡಿಕಾರಿದರು.
ಜಿಪಂ ಮಾಜಿ ಸದಸ್ಯ ಪಾಪಣ್ಣ, ಹಿರಿಯ ಮುಖಂಡ ಬೋಜರಾಜಪ್ಪ, ಗ್ರಾಪಂ ಸದಸ್ಯೆ ನಾಗಮ್ಮ ಮಾತನಾಡಿದರು. ಹಿರಿಯ ಮುಖಂಡ ರಂಗೇಗೌಡರು, ತಾಪಂ ಮಾಜಿ ಅಧ್ಯಕ್ಷ ನಾಗರಾಜಪ್ಪ, ಅರಸೀಕೆರೆ ವಾಗೀಶ್, ಗೋಪಿ, ಬಿಂದುಮಾಧವ್ ರಾವ್ ಇತರೆ ಅನೇಕ ಮುಖಂಡರು ಇಲ್ಲಿನ ಅತೃಪ್ತರ ನಡೆ ವಿರುದ್ಧ ವಾಗ್ದಾಳಿ ನಡೆಸಿದರು.
ಮುಖಂಡರಾದ ತಾಪಂ ಮಾಜಿ ಸದಸ್ಯ ನಾಗೇಂದ್ರಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಶಿವಮೂರ್ತಿ, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಸುಜಿತ್, ಚಿತ್ತಗಾನಹಳ್ಳಿ ಚಂದ್ರು, ದ್ಯಾವರಹಟ್ಟಿಶಿವಣ್ಣ, ಕರಿಯಣ್ಣ, ಬಿಳಿ ನಾಗೇಂದ್ರಪ್ಪ, ಪುಟ್ಟಣ್ಣ, ಮೂರ್ತಿ, ಜಿನೇಶ್‌ಬಾಬು, ಪಾಪಣ್ಣ, ಹನುಮೇಶ್ ಸೇರಿ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾಂಗ್ರೆಸ್ ಬಲಹೊಳಿಸಲು ತಂತ್ರ
ಕಾರವಾರ (ಡಿ.28) : ವಿವಿಧ ಕಾರಣಗಳಿಗೆ ಬಿಜೆಪಿ ಕಡೆ ವಾಲಿರುವ ಹಿಂದುಳಿದ ವರ್ಗಗಳ ಮತದಾರರನ್ನು ಸೆಳೆಯಲು ಹಾಗೂ ಅವರನ್ನು ರಾಜಕೀಯವಾಗಿ ಮುಂಚೂಣಿಗೆ ತರಲು ಕಾಂಗ್ರೆಸ್ ಕಾರ್ಯತಂತ್ರ ರೂಪಿಸಿದೆ ಎಂದು ಕಾಂಗ್ರೆಸ್ ರಾಜ್ಯ ಹಿಂದುಳಿದ ವರ್ಗಗಳ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.
ಶಿರಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಾಧ್ಯಮ ಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ಕಾಂಗ್ರೆಸ್(Congress) ಪಕ್ಷದ ಶಕ್ತಿಯೇ ಹಿಂದುಳಿದ ವರ್ಗದ ಮತದಾರರಾಗಿದ್ದಾರೆ. ಆದರೆ, ಕೆಲವು ಪ್ರಮಾಣದಲ್ಲಿ ಕಾಲಕ್ರಮೇಣ ಅವರು ಬಿಜೆಪಿ(BJP) ಕಡೆ ವಾಲಿದ್ದಾರೆ. ಅಂತಹ ಮತದಾರರನ್ನು ಕಾಂಗ್ರೆಸ್ ತನ್ನತ್ತ ಸೆಳೆಯಲು ಕಾರ್ಯಕ್ರಮ ರೂಪಿಸಿದೆ. ಈಗಾಗಲೇ 22 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಅಲ್ಲಿನ ಹಿರಿಯರು, ಪಕ್ಷದ ಪದಾಧಿಕಾರಿಗಳ ಜತೆ ಚರ್ಚಿಸಿ ಸಂಘಟನಾತ್ಮಕ ನಿರ್ಣಯ ಕೈಗೊಳ್ಳಲಾಗಿದೆ. ಹಿಂದುಳಿದ ವರ್ಗಗಳ ಮತದಾರರನ್ನು ಮುಂಚೂಣಿಗೆ ತರಲು ಕ್ರಮ ತೆಗೆದುಕೊಳ್ಳುವ ಜತೆ ಪದಾಧಿಕಾರಿ ಸ್ಥಾನ ನೀಡಲು ಚಿಂತನೆ ನಡೆದಿದೆ ಎಂದರು.
ಎಲ್ಲ ಜಿಲ್ಲೆಯಲ್ಲೂ ಕಾಂಗ್ರೆಸ್ ಒಬಿಸಿ ಸಮಾವೇಶ: ಮಧು ಬಂಗಾರಪ್ಪ
ಒಬಿಸಿ(OBC) ಪುನರ್ ರಚನೆ, ಪದಾಧಿಕಾರಿಗಳ ನೇಮಕ ಶೀಘ್ರದಲ್ಲೇ ಮಾಡಲಾಗುವುದು. ಇದರ ಜತೆ ಪ್ರತಿಯೊಂದು ಜಿಲ್ಲಾ ಮಟ್ಟದಲ್ಲಿ ಒಬಿಸಿ ಸಮಾವೇಶ ಸಂಘಟಿಸಲು ತೀರ್ಮಾನಿಸಲಾಗಿದೆ. ಜ.15ರಿಂದ ಫೆ.28ರೊಳಗೆ ಆ ಸಮಾವೇಶ ಪೂರ್ಣಗೊಂಡ ನಂತರ ರಾಜ್ಯ ಸಮಾವೇಶ ಮಾಡಲಾಗುವುದು ಎಂದರು.
ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ(S Bangarappa) ಅವರು ಒಬಿಸಿ ಮತದಾರರಿಗಾಗಿ ಸಾಕಷ್ಟು ಕಾರ್ಯ ಮಾಡಿದ್ದರು. ಈಗ ಮತ್ತೆ ಆ ಕಾಲ ಸನ್ನಿಹಿತವಾಗಿದೆ ಎಂದ ಅವರು, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಆರೋಗ್ಯ, ಶಿಕ್ಷಣ, ಮಹಿಳಾ ರಕ್ಷಣೆ, ಯುವ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದರ ಜತೆ ಒಬಿಸಿ ಅಭಿವೃದ್ಧಿ ಸಂಬಂಧ ಕಾರ್ಯಕ್ರಮ ಕೂಡಾ ಇದೆ. ಕಾಂಗ್ರೆಸ್ ಜಾರಿಗೊಳಿಸಿದ್ದ ಎಲ್ಲ ಭಾಗ್ಯ ಯೋಜನೆಗಳನ್ನು ಇದು ಒಳಗೊಂಡಿದೆ ಎಂದರು. ಬಿಜೆಪಿಗರು ಅರಣ್ಯ ಅತಿಕ್ರಮಣದಾರರು ಜಾಮೀನು ಪಡೆದು ತಿರುಗುವಂಥ ಸ್ಥಿತಿ ತಂದಿದ್ದಾರೆ. ಅನ್ನ ಕೊಡುವ ರೈತರನ್ನು ಭೂಕಳ್ಳರಂತೆ ಬಿಂಬಿಸಲಾಗುತ್ತಿದೆ. ವಸತಿ ರಹಿತರಿಗೆ ಮನೆ ನೀಡಲಾಗಿಲ್ಲ. ಭಾವನಾತ್ಮಕ ವಿಷಯ ತಂದು ಚುನಾವಣೆ ಗೆಲ್ಲಲು ತಂತ್ರ ರೂಪಿಸಿದೆ ಎಂದರು.
Haveri: ಮಾರ್ಚ್‌ನಲ್ಲಿ ಹಿಂದುಳಿದ ವರ್ಗಗಳ ಕಾಂಗ್ರೆಸ್ ಸಮಾವೇಶ: ಮಧು ಬಂಗಾರಪ್ಪ
ಹಿಂದುತ್ವದ ಅಜೆಂಡಾ ಇಟ್ಟು ಚುನಾವಣೆ(Assembly election)ಗೆ ಬರುವ ಬಿಜೆಪಿಗೆ ಈ ಬಾರಿ ಜನರೇ ಪಾಠ ಕಲಿಸಲಿದ್ದಾರೆ ಎಂದರು. ಈ ವೇಳೆ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ, ಪದಾಧಿಕಾರಿಗಳಾದ ಎಸ್.ಕೆ.ಭಾಗವತ, ಜೆ.ಡಿ.ನಾಯ್ಕ, ಬಿ.ಆರ್.ನಾಯ್ಕ, ಸುಮಾ ಉಗ್ರಾಣಕರ, ಬಸವರಾಜ ದೊಡ್ಮನಿ, ಸತೀಶ ನಾಯ್ಕ, ಜಗದೀಪ ತೆಂಗೇರಿ, ಜಗದೀಶ ಗೌಡ ಮತ್ತಿತರರು ಭಾಗವಹಿಸಿದ್ದರು.