ಕುವೆಂಪು ತತ್ತ್ವ ಸಿದ್ಧಾಂತ ಚಾಚೂತಪ್ಪದೆ ಪಾಲಿಸಬೇಕು- ಸಾ.ರಾ. ಮಹೇಶ್

By Kannadaprabha News  |  First Published Dec 31, 2023, 11:18 AM IST

ರಾಷ್ಟ್ರಕವಿ ಕುವೆಂಪು ಜಗತ್ತಿಗೆ ವಿಶ್ವ ಮಾನವ ಸಂದೇಶ ಸಾರಿದ ಮಹಾನ್ ಪುರುಷರಾಗಿದ್ದು ನಾವೆಲ್ಲರೂ ಅವರ ತತ್ವ ಮತ್ತು ಸಿದ್ದಾಂತಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಹೇಳಿದರು.


  ಕೆ.ಆರ್.ನಗರ :  ರಾಷ್ಟ್ರಕವಿ ಕುವೆಂಪು ಜಗತ್ತಿಗೆ ವಿಶ್ವ ಮಾನವ ಸಂದೇಶ ಸಾರಿದ ಮಹಾನ್ ಪುರುಷರಾಗಿದ್ದು ನಾವೆಲ್ಲರೂ ಅವರ ತತ್ವ ಮತ್ತು ಸಿದ್ದಾಂತಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಹೇಳಿದರು.

ಪಟ್ಟಣದ ಎಚ್.ಡಿ. ಸಮುದಾಯ ಭವನದಲ್ಲಿ ತಾಲೂಕು ಒಕ್ಕಲಿಗ ಸೌಕರರ ಸ್ನೇಹ ಬಳಗದ ವತಿಯಿಂದ ನಡೆದ ಕುವೆಂಪು ಜಯಂತಿ ಮತ್ತು ಪ್ರತಿಭಾ ಪುರಸ್ಕಾರ ಉದ್ಘಾಟಿಸಿ ಮಾತನಾಡಿದ ಅವರು, ಇದನ್ನುಸಮಾಜದವರು ಒಂದಷ್ಟು ಅನುಸರಿಸುತ್ತಿರುವುದು ಸಂತಸದ ವಿಚಾರ ಎಂದರು.

Latest Videos

undefined

ಕುಲ ಕುಲವೆಂದು ಹೊಡೆದಾಡಬೇಡಿರಿ ಎಂಬ ಸಂದೇಶವನ್ನು 500 ವರ್ಷಗಳ ಹಿಂದೆಯೇ ಭಕ್ತ ಕನಕದಾಸರು ಹೇಳಿದ್ದರು. ಅವರ ಅನುಯಾಯಿಗಳು ಎಲ್ಲದಕ್ಕೂ ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಕುರುಬ ಸಮಾಜದವರನ್ನು ಟೀಕಿಸಿದರು.

ಒಕ್ಕಲಿಗ ಕ್ರೆಡಿಟ್ ಕೋ- ಅಪರೇಟಿವ್ ಸೊಸೈಟಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್ಗೌಡ, ಎಡಿಸಿ ಆರ್. ಲೋಕನಾಥ್, ಸ್ನೇಹ ಬಳಗದ ಅಧ್ಯಕ್ಷ ಶಂಕರೇಗೌಡ ಮಾತನಾಡಿದರು.

ಈ ವೇಳೆ ಕೆ.ಆರ್. ನಗರದಿಂದ ವರ್ಗಾವಣೆಗೊಂಡ ಒಕ್ಕಲಿಗ ಸಮಾಜದ ನೌಕರರು ಮತ್ತು ಸಮಾಜದ ಸಾಧಕರನ್ನು ಸನ್ಮಾನಿಸಿ ಒಕ್ಕಲಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಅರಣ್ಯ ಮತ್ತು ವಸತಿ ವಿಹಾರ ಧಾಮಗಳ ನಿಗಮದ ಮಾಜಿ ಅಧ್ಯಕ್ಷ ವಿವೇಕಾನಂದ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗೋವಿಂದರಾಜು, ತಾಲೂಕು ಸಂಘದ ಅಧ್ಯಕ್ಷ ಅರುಣ್ ಕುಮಾರ್, ಹುಣಸೂರು ತಾಲೂಕು ಗ್ರೇಡ್- 2 ತಹಸೀಲ್ದಾರ್ ಎಂ.ಎಸ್. ಯದುಗಿರೀಶ್, ಒಕ್ಕಲಿಗ ಕ್ರೆಡಿಡ್ ಕೋ-ಅಪರೇಟಿವ್ ಸೊಸೈಟಿ ಉಪಾಧ್ಯಕ್ಷ ವಿ.ಸಿ. ಶಿವರಾಮು, ಪತ್ರಕರ್ತ ಸಂಘದ ಅಧ್ಯಕ್ಷ ಡಿ.ಜೆ. ವಿನಯ್, ಬಳಗದ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಈಶ್ವರ್, ಖಜಾಂಚಿ ಕೆ.ಪಿ. ಆನಂದ್ ಮೊದಲಾದವರು ಇದ್ದರು.

click me!