
ಬೆಂಗಳೂರು (ಅ.08): ರಾಜರಾಜೇಶ್ವರಿ ನಗರ ವಿಧಾನಸಭೆ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಅವರು, ತಮ್ಮ ದಿವಂಗತ ಪತಿ, ಐಎಎಸ್ ಅಧಿಕಾರಿ ಡಿ.ಕೆ. ರವಿ ಹೆಸರನ್ನು ಬುಧವಾರ ಎಲ್ಲೂ ಪ್ರಸ್ತಾಪಿಸಲಿಲ್ಲ.
ಆರ್.ಆರ್. ನಗರ ಉಪಚುನಾವಣೆಗೆ ಸಂಬಂಧಿ ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಇಡೀ ಕ್ಷೇತ್ರದ ಜನರ ಸಂಕಷ್ಟನನಗೆ ತಿಳಿದಿದೆ. ಇದಕ್ಕೆಲ್ಲಾ ಪರಿಹಾರ ಕಂಡುಕೊಳ್ಳಬೇಕಾಗಿದ್ದು, ನಿಮ್ಮೆಲ್ಲರ ಆಶೀರ್ವಾದ ಬೇಕಾಗಿದೆ. ನನಗೆ ದೊಡ್ಡ ಬೆಂಬಲ ನೀಡಬೇಕು’ ಎಂದು ಮತದಾರರಲ್ಲಿ ಮನವಿ ಮಾಡಿದರು.
ಡಿ.ಕೆ ರವಿ ತಾಯಿ ಹೇಳಿಕೆಗೆ ಕುಸುಮಾ ಮೊದಲ ರಿಯಾಕ್ಷನ್ ...
ತಮ್ಮ ಭಾಷಣದಲ್ಲಿ ಎಲ್ಲಿಯೂ ದಿವಂಗತ ಪತಿ ಡಿ.ಕೆ.ರವಿ ಹೆಸರನ್ನು ಪ್ರಸ್ತಾಪಿಸಲಿಲ್ಲ. ‘ರವಿ ಹೆಸರು ಪ್ರಸ್ತಾಪಿಸಕೂಡದು’ ಎಂದು ಇತ್ತೀಚೆಗೆ ಅವರ ತಾಯಿ ಎಚ್ಚರಿಸಿದ್ದು ಇಲ್ಲಿ ಗಮನಾರ್ಹ.