ಪಕ್ಷಾಂತರ ಪರ್ವ : ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರಿದ ಕುರುಬ ಮುಖಂಡರು

Kannadaprabha News   | Asianet News
Published : Oct 05, 2020, 03:34 PM IST
ಪಕ್ಷಾಂತರ ಪರ್ವ : ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರಿದ ಕುರುಬ ಮುಖಂಡರು

ಸಾರಾಂಶ

ಕುರುಬ ಸಮುದಾಯ ಪ್ರಮುಖ ಮುಖಂಡರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ

ಗುಂಡ್ಲುಪೇಟೆ (ಅ.05): ತಾಲೂಕಿನ ಕಬ್ಬಹಳ್ಳಿ ಗ್ರಾಮದಲ್ಲಿ ಕುರುಬ ಸಮಾಜದ ಹಲವಾರು ಮುಖಂಡರು ಕಾಂಗ್ರೆಸ್‌ ತೊರೆದು ಶಾಸಕ ಸಿ.ಎಸ್‌.ನಿರಂಜನ್‌ಕುಮಾರ್‌ ನಾಯಕತ್ವ ಮೆಚ್ಚಿ ಬಿಜೆಪಿ ಸೇರಿದರು. 

ಗ್ರಾಮದ ಕನಕ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಕುರುಬ ಸಮಾಜದ ಮುಖಂಡ ಗ್ರಾಪಂ ಮಾಜಿ ಅಧ್ಯಕ್ಷ ರಾಜೇಗೌಡ, ಮಾಜಿ ಸದಸ್ಯ ಚಿದನಂದ, ಮುಖಂಡ ಚಿನ್ನೇಗೌಡ ನೇತೃತ್ವದಲ್ಲಿ ಹಲವರು ಕಾಂಗ್ರೆಸ್‌ ತೊರೆದರು. ಪಕ್ಷದ ಆಗಮಿಸಿದ ಮುಖಂಡರನ್ನು ಶಾಸಕ ಸಿ.ಎಸ್‌. ನಿರಂಜನ್‌ ಕುಮಾರ್‌ ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಸ್ವಾಗತಿಸಿ ಬರಮಾಡಿಕೊಂಡರು. 

‘ಸಿದ್ದುಗಿಂತ ಡಿಕೆಶಿ ದೊಡ್ಡ ನಾಯಕನಲ್ಲ, ಆದ್ರೂ ಅವರ ಮೇಲೆಯೇ ಸಿಬಿಐ ಏಕೆ ದಾಳಿ ಮಾಡಿದ್ರು?’

ಈ ಸಮಯದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಡಿ.ಪಿ.ಜಗದೀಶ್‌, ಕಬ್ಬಹಳ್ಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮಹದೇವಪ್ರಸಾದ್‌, ಮಂಡಲ ಉಪಾಧ್ಯಕ್ಷ ಕಲ್ಲಹಳ್ಳಿಮಹೇಶ್‌, ಪ್ರಧಾನ ಕಾರ್ಯದರ್ಶಿ ಬಿ.ಎಂ.ನಂದೀಶ್‌, ತಾಪಂ ಸದಸ್ಯ ಕೆ.ಎಸ್‌.ರೇವಣ್ಣ, ಮುಖಂಡರಾದ ವೃಷಬೇಂದ್ರಪ್ಪ, ಮಲ್ಲಣ್ಣ, ಮಹೇಶ್‌ ಸೇರಿದಂತೆ ಹಲವರು ಇದ್ದರು.
 

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!