ಬಡ ವ್ಯಕ್ತಿಯ ಮನವಿಗೆ ತುರ್ತಾಗಿ ಸ್ಪಂದಿಸಿದ ಶಾಸಕ ಡಾ.ರಂಗನಾಥ್, ರೋಗಿಯನ್ನು ಪರೀಕ್ಷಿಸಿ, ರೋಗಿಗೆ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ನಿರ್ಧರಿಸಿದರು. ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡುವ ಸಲುವಾಗಿ ಸಕಲ ಸಿದ್ಧತೆಯನ್ನು ಮಾಡಿಕೊಂಡರು. ರೋಗಿಗೆ ಉಚಿತವಾಗಿ ವೈದ್ಯರ ತಂಡಗಳನ್ನು ಒಟ್ಟುಗೂಡಿಸಿಕೊಂಡು, ಬುಧವಾರ ತಾವೇ ಖುದ್ದು ಮಂಡಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ.
ಕುಣಿಗಲ್(ಜು.27): ಚಿಕಿತ್ಸೆಗೆ ಹಣವಿಲ್ಲದೆ ಸಹಾಯ ಕೋರಿ ಬಂದಿದ್ದ ತಾಲೂಕಿನ ಬಡ ವ್ಯಕ್ತಿಗೆ ತಾವೇ ಸ್ವತ: ಮಂಡಿ ನೋವಿನ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಶಾಸಕ ಡಾ.ರಂಗನಾಥ್ ಅವರು ಮಾನವೀಯತೆ ಮೆರೆದಿದ್ದಾರೆ. ಅಲ್ಲದೆ, ಸ್ವತಃ ವೈದ್ಯರಾಗಿ ತಮ್ಮ ಕರ್ತವ್ಯಪ್ರಜ್ಞೆ ತೋರಿದ್ದಾರೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಅಮೃತೂರು ಹೋಬಳಿಯ ಯಡವಾಣಿ ಗ್ರಾಮದ ಶಿವನಂಜಯ್ಯ ಎಂಬುವರು ಹಲವಾರು ದಿನಗಳಿಂದ ಮಂಡಿ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ, ಅವರ ಬಳಿ ಚಿಕಿತ್ಸೆಗೆ ಹಣವಿರಲಿಲ್ಲ. ಈ ವಿಚಾರವಾಗಿ ಶಾಸಕರಿಗೆ ಮನವಿ ಮಾಡಿ, ಚಿಕಿತ್ಸೆಗೆ ಸಹಾಯ ಮಾಡುವಂತೆ ಕೋರಿದ್ದರು.
ಬಡ ಮಹಿಳೆಗೆ ಸ್ವತಃ ಶಾಸಕನಿಂದಲೇ ಶಸ್ತ್ರಚಿಕಿತ್ಸೆ. ಜರ್ಮನಿಯಿಂದ ಕೃತಕ ಕೀಲು ತರಿಸಿ ಸಹಾಯಹಸ್ತ
ಬಡ ವ್ಯಕ್ತಿಯ ಈ ಮನವಿಗೆ ತುರ್ತಾಗಿ ಸ್ಪಂದಿಸಿದ ಶಾಸಕರು, ರೋಗಿಯನ್ನು ಪರೀಕ್ಷಿಸಿ, ರೋಗಿಗೆ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ನಿರ್ಧರಿಸಿದರು. ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡುವ ಸಲುವಾಗಿ ಸಕಲ ಸಿದ್ಧತೆಯನ್ನು ಮಾಡಿಕೊಂಡರು. ರೋಗಿಗೆ ಉಚಿತವಾಗಿ ವೈದ್ಯರ ತಂಡಗಳನ್ನು ಒಟ್ಟುಗೂಡಿಸಿಕೊಂಡು, ಬುಧವಾರ ತಾವೇ ಖುದ್ದು ಮಂಡಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ.
ಈ ಹಿಂದೆ, ಜೂನ್ 27ರಂದು ಕೀಲು ಜಾರಿದ (ಡಿಸ್‌ಲೊಕೇಟ್) ಸಮಸ್ಯೆಯಿಂದ ಬಳಲುತ್ತಿದ್ದ ಕುಣಿಗಲ್ ತಾಲೂಕು ಕುಂದೂರು ಗ್ರಾಮದ ಬಡ ಮಹಿಳೆಗೆ ಜರ್ಮನಿಯಿಂದ ಕೃತಕ ಕೀಲು ತರಿಸಿ ಅವರೇ ಶಸ್ತ್ರಚಿಕಿತ್ಸೆ ನಡೆಸಿದ್ದರು.