ಕುಣಿಗಲ್: ಬಡ ಮಹಿಳೆಗೆ ಸ್ವತಃ ಶಸ್ತ್ರಚಿಕಿತ್ಸೆ ಮಾಡಿ ಮಾನವೀಯತೆ ಮೆರೆದ ಶಾಸಕ ಡಾ.ರಂಗನಾಥ್

By Girish Goudar  |  First Published Jun 27, 2023, 11:48 AM IST

ಕೀಲು ಮೂಳೆ ಸಮಸ್ಯೆ ಇದ್ದ 23 ಮಹಿಳೆಯ ಉಚಿತ ಶಸ್ತ್ರಚಿಕಿತ್ಸೆಗೆ ಮುಂದಾದ ಶಾಸಕ ಡಾ.ರಂಗನಾಥ್, ಶಾಸಕರು  ಮೂಲತಃ ಆರ್ಥೋಪೆಡಿಕ್ ವೈದ್ಯರಾಗಿದ್ದಾರೆ. ಬಡವ ಮಹಿಳೆಗೆ ಉಚಿತ ವೈದ್ಯಕೀಯ ಸೇವೆ ನೀಡಿದ ಶಾಸಕರ ಸೇವೆಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ. 


ತುಮಕೂರು(ಜೂ.27): ತುಮಕೂರು ಜಿಲ್ಲೆಯ ಕುಣಿಗಲ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ಅವರು ಬಡ ಮಹಿಳೆಗೆ ಸ್ವತಃ ತಾವೇ ಶಸ್ತ್ರಚಿಕಿತ್ಸೆ ಮಾಡಿ ಮಾನವೀಯತೆ ಮೆರೆದಿದ್ದಾರೆ.  ಕುಣಿಗಲ್ ತಾಲೂಕಿನ ಕುಂದೂರು ಗ್ರಾಮದ ಆಶಾ ಎಂಬ ಮಹಿಳೆಯ ಕೀಲು ಡಿಸ್ ಲೊಕೆಟ್ ಆಗಿತ್ತು. ಶಸ್ತ್ರಚಿಕಿತ್ಸೆ ಮಾಡಲು 4-5 ಲಕ್ಷ ರೂ ಖರ್ಚಾಗುತಿತ್ತು. ಶಾಸಕರ ಬಳಿ ಬಂದು ಮಹಿಳೆ ನೋವು ತೋಡಿಕೊಂಡಿದ್ದರು. 

ಹೀಗಾಗಿ ಮಹಿಳೆಯನ್ನು ಬೋರಿಂಗ್ ಆಸ್ಪತ್ರೆಗೆ ದಾಖಲಿಸಿ ಶಾಸಕ ರಂಗನಾಥ್ ಅವರು ಉಚಿತವಾಗಿ ಸ್ವತಃ ತಾವೇ ಆಪರೇಷನ್ ಮಾಡಿದ್ದಾರೆ. ಆಶಾ ಅವರು ಕಳೆದ 10 ವರ್ಷಗಳ ಹಿಂದೆ ಯಶಸ್ವಿನಿ ಯೋಜನೆಯಲ್ಲಿ ಕೀಲು ಆಪರೇಷನ್ ಮಾಡಿಕೊಂಡಿದ್ದರು. ಆದರೆ ಈಗ ಮತ್ತೆ ಡಿಸ್ ಲೊಕೆಟ್ ಆಗಿತ್ತು. ಸರ್ಕಾರದ ಉಚಿತ ಯೋಜನೆಯಲ್ಲಿ ಒಂದೇ ಕಾಯಿಲೆಗೆ ಎರಡು ಬಾರಿ ಸರ್ಜರಿಗೆ ಅವಕಾಶ ಇರಲಿಲ್ಲ. 

Tap to resize

Latest Videos

ಕಾಂಗ್ರೆಸ್‌ ಪಕ್ಷಕ್ಕೆ ವೋಟು ಮಾಡಿದ್ದಕ್ಕೆ ಪಡಿತರ ನೀಡಲು ನಿರಾಕರಿಸಿದ ಸೊಸೈಟಿ ಸಿಬ್ಬಂದಿ!

ಸ್ವತಃ ರೋಗಿಗಳೇ ಹಣ ಸಂದಾಯ ಮಾಡಿ ಆಪರೇಷನ್ ಮಾಡಿಸಿಕೊಳ್ಳಬೇಕಿತ್ತು. ಇದನ್ನರಿತು ಈ ರೀತಿಯ ಕೀಲು ಮೂಳೆ ಸಮಸ್ಯೆ ಇದ್ದ 23 ಮಹಿಳೆಯ ಉಚಿತ ಶಸ್ತ್ರಚಿಕಿತ್ಸೆಗೆ ಶಾಸಕ ಡಾ.ರಂಗನಾಥ್ ಅವರು ಮುಂದಾಗಿದ್ದಾರೆ. ಶಾಸಕ ರಂಗನಾಥ್ ಅವರು ಮೂಲತಃ ಆರ್ಥೋಪೆಡಿಕ್ ವೈದ್ಯರಾಗಿದ್ದಾರೆ. ಬಡವ ಮಹಿಳೆಗೆ ಉಚಿತ ವೈದ್ಯಕೀಯ ಸೇವೆ ನೀಡಿದ ಶಾಸಕರ ಸೇವೆಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ. 

click me!