ಮಡಿಕೇರಿ ದಸರೆಯಲ್ಲಿ ‘ಕುಂಗ್‌ ಫು’ ಸಮರಾಂಗಣ

By Kannadaprabha News  |  First Published Sep 30, 2019, 9:30 AM IST

ಮಡಿಕೇರಿ ಜನೋತ್ಸವ ದಸರಾದಲ್ಲಿ ಈ ಬಾರಿ ಕುಂಗ್ ಫೈಟಿಂಗ್ ಜನರನ್ನು ರಂಜಿಸಿತು. ಮಡಿಕೇರಿ ದಸರಾಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿರುವಂತೆಯೇ, ನವರಾತ್ರಿ ಉತ್ಸವ ಅಂಗವಾಗಿ ನಗರದಲ್ಲಿ ಕುಂಗ್‌ ಫು (ವುಶು) ಸಮರ ಕಲೆ ಪ್ರದರ್ಶನ, ನೆರೆದವರ ಮೈರೋಮಾಂಚನಗೊಳಿಸಿತು.


ಮಡಿಕೇರಿ(ಸೆ.30): ಮಡಿಕೇರಿ ದಸರಾಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿರುವಂತೆಯೇ, ನವರಾತ್ರಿ ಉತ್ಸವ ಅಂಗವಾಗಿ ನಗರದಲ್ಲಿ ಕುಂಗ್‌ ಫು (ವುಶು) ಸಮರ ಕಲೆ ಪ್ರದರ್ಶನ, ನೆರೆದವರ ಮೈರೋಮಾಂಚನಗೊಳಿಸಿತು. ನಗರ ದಸರಾ ಸಮಿತಿ, ದಸರಾ ಕ್ರೀಡಾ ಸಮಿತಿ ಮತ್ತು ಕೊಡಗು ಜಿಲ್ಲಾ ವುಶು ಸಂಸ್ಥೆ ಸಹಭಾಗಿತ್ವದಲ್ಲಿ ನಗರದ ಮೈತ್ರಿ ಸಮುದಾಯ ಭವನದಲ್ಲಿ ಶನಿವಾರ ಕಾರ್ಯಕ್ರಮ ನಡೆಯಿತು.

ದಸರಾ ಸಮಿತಿ ಕಾರ್ಯಾಧ್ಯಕ್ಷ ರಾಬಿನ್‌ ದೇವಯ್ಯ ಉದ್ಘಾಟಿಸಿ, ದಸರಾ ಉತ್ಸವದಲ್ಲಿ ನಾಡಿನ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ನಾಗರಿಕರಾದ ಎಲ್ಲರ ಜವಾಬ್ದಾರಿ. ಸೋಲೇ ಗೆಲುವಿನ ಮೆಟ್ಟಿಲಾಗಿದ್ದು, ಯಾವುದೇ ಸ್ಪರ್ಧೆಗಳಲ್ಲಿ ಸೋತಾಗ ಎದೆಗುಂದದೆ ಮುನ್ನುಗ್ಗಬೇಕು ಎಂದು ಕರೆ ನೀಡಿದರು.

Tap to resize

Latest Videos

ಮಂಗಳೂರು ದಸರಾಕ್ಕೆ ವೈಭವದ ಚಾಲನೆ

ವುಶು ಸಂಸ್ಥೆ ಜಿಲ್ಲಾಧ್ಯಕ್ಷ ಪಿ.ಕೆ.ರಮೇಶ್‌, ಕುಂಗ್‌ ಫು ಸಮರ ಕಲೆಯ ಬಗ್ಗೆ ಮಾಹಿತಿ ನೀಡಿದರು. ಈ ಕಲೆಯಲ್ಲಿ ಸಾಧನೆ ಮಾಡಿದವರಿಗೆ ಉದ್ಯೋಗ ಮತ್ತು ಉನ್ನತ ವ್ಯಾಸಂಗದಲ್ಲೂ ಮೀಸಲಾತಿ ಇದೆ. 1989ರಲ್ಲಿ ಕರ್ನಾಟಕಕ್ಕೆ ಪರಿಚಯವಾದ ವುಶು ಕಲೆ, 2002ರಲ್ಲಿ ಕುಂಬುಗೌಡನ ಜಗದೀಪ್‌ ಅವರಿಂದ ಕೊಡಗಿನಲ್ಲೂ ಪ್ರಚಲಿತವಾಯಿತು. ಈಗ ಜಿಲ್ಲೆಯಲ್ಲಿ 700ಕ್ಕೂ ಹೆಚ್ಚು ಮಂದಿ ತರಬೇತಿ ಪಡೆದು ಸಾಧನೆ ಮಾಡಿದ್ದಾರೆ ಎಂದರು.

ರಾಷ್ಟ್ರೀಯ ವುಶು ಪಟುಗಳಾದ ಐಮನ್‌ ಮತ್ತು ಕಾರ್ತಿಕ್‌ ಮಧ್ಯೆ ಕುಂಗ್‌ಫು ಪ್ರದರ್ಶನ ಪಂದ್ಯ ನಡೆಯಿತು. ಎದುರಾಳಿಯನ್ನು ನೆಲಕ್ಕೆ ಕುಕ್ಕುವ, ಅಡ್ಡಗಾಲು ಹಾಕಿ ಬೀಳಿಸುವ, ಅವಕಾಶ ನೋಡಿ ಕಿಕ್‌ ನೀಡುವ ಪರಿ ನೋಡುಗರಲ್ಲಿ ಹೊಸ ಅನುಭವ ನೀಡಿತು. ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಜಗದೀಶ್‌, ಕವಿಗೋಷ್ಠಿ ಸಮಿತಿ ಅಧ್ಯಕ್ಷ ಚಿ.ನಾ.ಸೋಮೇಶ್‌, ವುಶು ತರಬೇತುದಾರ ನಿತಿನ್‌ ಸುವರ್ಣ ಮತ್ತಿತರರು ಹಾಜರಿದ್ದರು.

ಮಡಿಕೇರಿ ದಸರಾ ಜನೋತ್ಸವಕ್ಕೆ ವಿದ್ಯುಕ್ತ ಚಾಲನೆ

click me!