ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಗೋಳು ಕೇಳೋರೇ ಇಲ್ಲ..!

By Girish Goudar  |  First Published Nov 4, 2023, 3:30 AM IST

ನಿವೃತ್ತಿಯಾದ ಬಳಿಕ ಬಾರದ ಸೌಲಭ್ಯಗಳು...ಅತಂತ್ರವಾದ ನಿವೃತ್ತ ಕೆಎಸ್​ಆರ್​ಟಿಸಿ ಸಿಬ್ಬಂದಿ...ಕುಟುಂಬ ಸಮೇತ ಉಪವಾಸ ಸತ್ಯಾಗ್ರಹದ ಎಚ್ಚರಿಕೆ, ಸಂಕಷ್ಟದಲ್ಲಿ ವಾಯುವ್ಯ ಸಾರಿಗೆ ಸಂಸ್ಥೆಯ ನಿವೃತ್ತ ಕೆಎಸ್ಆರ್​ಟಿಸಿ ಅಧಿಕಾರಿ & ಸಿಬ್ಬಂದಿಗಳು....ಅನುದಾನ ಇಲ್ಲದೆ ಬಾರದ ಸೌಲಭ್ಯ & ಬಾಕಿ ವೇತನ. 


ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ

ಬಾಗಲಕೋಟೆ​(ನ.04): ಅವರೆಲ್ಲಾ ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿ ನೌಕರಿ ಮಾಡಿದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು, ನೌಕರಿ ಮಾಡಿ ಇನ್ನೇನು ನಿವೃತ್ತಿಯಾದ ಬಳಿಕ ನೆಮ್ಮದಿ ಜೀವನ ಕಳೆಯಬೇಕಂದ್ರೆ ಸಾಧ್ಯವಾಗುತ್ತಿಲ್ಲ, ಯಾಕಂದ್ರೆ ಸಾರಿಗೆ ಸಂಸ್ಥೆ ಇವರಿಗೆ ನಿವೃತ್ತಿ ನಂತರದ ಆರ್ಥಿಕ ಸೌಲಭ್ಯಗಳನ್ನ ನೀಡುತ್ತಿಲ್ಲ, ಇದ್ರಿಂದ ನೊಂದು ಹೋಗಿರೋ ನಿವೃತ್ತ ನೌಕರರು ಇದೀಗ ಡಿಸೆಂಬರ್ ತಿಂಗಳ ಡೆಡ್​​ಲೈನ್​ ನೀಡಿದ್ದಾರೆ. ಈ ಕುರಿತ ವರದಿ ಇಲ್ಲಿದೆ...

Tap to resize

Latest Videos

undefined

ಹೌದು, ಒಂದೆಡೆ ನಿವೃತ್ತಿ ಬಳಿಕ ಬಾರದ ಆರ್ಥಿಕ ಸೌಲಭ್ಯಗಳು ಮತ್ತೊಂದೆಡೆ ಸೌಲಭ್ಯಗಳು ಬಾರದ ಹಿನ್ನೆಲೆಯಲ್ಲಿ ಮನೆ ಮುನ್ನಡೆಸುವ ಚಿಂತೆಯಲ್ಲಿರೋ ನಿವೃತ್ತ ನೌಕರರು, ಇವುಗಳ ಮಧ್ಯೆ ಅನುದಾನ ನೀಡದ ಸರ್ಕಾರದ ವಿರುದ್ದ ಧಿಕ್ಕಾರ ಕೂಗುತ್ತಿರೋ ನೊಂದ ಕೆಎಸ್​ಆರ್​ಟಿಸಿ ನಿವೃತ್ತ ನೌಕರರು, ಅಂದಹಾಗೆ ಇಂತಹವೊಂದು ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲೆಯಲ್ಲಿ. ಹೌದು, ಸಾರಿಗೆ ಇಲಾಖೆಯ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಸೇವೆಗೆ ಸೇರಿ ನಿಷ್ಠೆಯಿಂದ ಕೆಲ್ಸ ಮಾಡಿ ನಿವೃತ್ತಿಯಾದ ಬಳಿಕ ಇವರಿಗೆ ನೆಮ್ಮದಿ ಜೀವನ ಕಳೆಯಲಾಗುತ್ತಿಲ್ಲ. ಯಾಕಂದ್ರೆ ನಿವೃತ್ತಿ ಹೊಂದಿರೋ ಅಧಿಕಾರಿಗಳು ಮತ್ತು ಸಿಬ್ಬಂದಿವರಿಗೆ ನಿವೃತ್ತಿ ನಂತರದ ಆರ್ಥಿಕ ಸೌಲಭ್ಯಗಳಾದ ಉಪಧನ ಮತ್ತು ರಜೆಗಳ ನಗದೀಕರಣ ಹಣವನ್ನ ನೀಡಲಾಗುತ್ತಿಲ್ಲ, ಸಾಲದ್ದಕ್ಕೆ ನಾಲ್ಕೈದು ವರ್ಷ ಕಳೆದ್ರೂ ಸಮವಸ್ತ್ರಗಳ ಬಿಲ್​​ ಸಹ ನೀಡಿರುವುದಿಲ್ಲ, ಮೇಲಾಗಿ ಭವಿಷ್ಯನಿಧಿ ಹಣವನ್ನೂ ಕೂಡ ನೀಡಿಲ್ಲವಂತೆ, ಇದ್ರಿಂದ ನೊಂದು ಹೋಗಿರೋ ವಾಯುವ್ಯ ಸಾರಿಗೆ ಸಂಸ್ಥೆಯ ನಿವೃತ್ತ ನೌಕರರು ಪ್ರತಿಭಟನೆಯನ್ನ ನಡೆಸುವ ಮೂಲಕ ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ಮನವಿಯನ್ನ ನೀಡಿದ್ದು, ಒಂದೊಮ್ಮೆ ನವಂಬರ್ ತಿಂಗಳಲ್ಲಿ ಬಾಕಿ ಹಣದ ಸಮಸ್ಯೆ ಬಗೆಹರಿಸದೇ ಹೋದ್ರೆ ಡಿಸೆಂಬರ್​ ತಿಂಗಳಲ್ಲಿ ಕುಟುಂಬ ಸಮೇತ ಉಪವಾಸ ಸತ್ಯಾಗ್ರಹಕ್ಕೆ ಕೂರುತ್ತೇವೆ ಅಂತ ಡೆಡ್​ಲೈನ್ ನೀಡಿದ್ದಾರೆ (ನಿವೃತ್ತ ನೌಕರರ ಮುಖಂಡರಾದ ಆರ್.ಎಸ್​.ಕುಲಕರ್ಣಿ.

ಕತ್ತಲೆಯಲ್ಲಿ ಮುಳುಗಿದ ಬಾಗಲಕೋಟೆಯ ನವನಗರ: ಕರೆಂಟ್​ ಬಂದ್​, ನಳ ಬಂದ್​, ಎಲ್ಲವೂ ಬಂದ್‌..!

ಆದಾಯ ಇದ್ದರೂ ನಿವೃತ್ತ ನೌಕರರಿಗೆ ಸಿಗದ ಆರ್ಥಿಕ ಸೌಲಭ್ಯಗಳು...

ಇನ್ನು ರಾಜ್ಯದಲ್ಲಿ ಈಗ ಶಕ್ತಿ ಯೋಜನೆ ಜಾರಿಗೊಳಿಸಿದ ಬಳಿಕ ಕೋಟಿ ಕೋಟಿ ಆದಾಯ ಬರ್ತಿದೆ, ಮೇಲಾಗಿ ಶಕ್ತಿ  ಯೋಜನೆ ಪೂರ್ವದಲ್ಲಿಯೂ ಸಹ ವಾಯುವ್ಯ ಸಾರಿಗೆ ಸಂಸ್ಥೆ ರಾಜ್ಯದಲ್ಲಿಯೇ ಅತಿ ಹೆಚ್ಚು ಆದಾಯವನ್ನ ಹೊಂದಿತ್ತು, ಈ ಸಮಯದಲ್ಲಿ ವಾಯುವ್ಯ ಸಾರಿಗೆ ಸಂಸ್ಥೆಯ ಹಣವನ್ನೇ ಪಡೆದು ಉಳಿದು ಸಾರಿಗೆ ಸಂಸ್ಥೆಗಳ ಸಿಬ್ಬಂದಿಗಳಿಗೆ ವೇತನ ಮಾಡಲಾಗುತ್ತಿತ್ತು. ಹೀಗಿರುವಾಗ ಅಂದು ದುಡಿದು ಹಣ ನೀಡಿದ್ದ ವಾಯುವ್ಯ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಗೆ ಅನುದಾನ ನೀಡುತ್ತಿಲ್ಲ ಅನ್ನೋದು ದುರಂತದ ಸಂಗತಿಯಾಗಿದ್ದು, ಈ ಮಧ್ಯೆ ವಯಸ್ಸಾದ ನಂತರ ಸಿಬ್ಬಂದಿ ಮತ್ತು ಅವರ ಕುಟುಂಬಗಳು ವಯೋಸಹಜ ಖಾಯಿಲೆ ಸೇರಿದಂತೆ ಮನೆ ನಡೆಸುವುದು ದುಸ್ತರವಾಗಿದ್ದು, ಕೂಡಲೇ ಸರ್ಕಾರ ವಾಯುವ್ಯ ಸಾರಿಗೆ ಸಂಸ್ಥೆಗೆ ಅನುದಾನ ಬಿಡುಗಡೆ ಮಾಡಿ ತಮಗೆ ಬರಬೇಕಾದ ನಿವೃತ್ತಿ ನಂತರದ ಆರ್ಥಿಕ ಸೌಲಭ್ಯಗಳನ್ನ ನೀಡಲಿ ಅಂತಾರೆ ನಿವೃತ್ತ ನೌಕರ ಬಸವರಾಜ್.

ಒಟ್ಟಿನಲ್ಲಿ ವಾಯುವ್ಯ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ನಿವೃತ್ತಿ ನಂತರದ ಆರ್ಥಿಕ ಸೌಲಭ್ಯಗಳು ಬಾರದೇ ಅತಂತ್ರವಾಗಿದ್ದು, ಇನ್ನಾದ್ರೂ ಸಂಬಂದಪಟ್ಟವರು ಅನುದಾನ ಬಿಡುಗಡೆ ಮಾಡಿ ಇವರ ಸಮಸ್ಯೆ ಬಗೆ ಹರಿಸ್ತಾರಾ ಅಂತ ಕಾದು ನೋಡಬೇಕಿದೆ.

click me!