ಚಿಕ್ಕಮಗಳೂರು ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಸರ್ಕಾರಿ ಬಸ್ ಪಲ್ಟಿ, 8 ಜನರಿಗೆ ಗಾಯ

Published : Mar 21, 2026, 07:39 AM IST
Bus accident

ಸಾರಾಂಶ

ಚಿಕ್ಕಮಗಳೂರು ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಸರ್ಕಾರಿ ಬಸ್ ಪಲ್ಟಿ, 8 ಜನರಿಗೆ ಗಾಯ, ಕುಕ್ಕನೂರಿನಿಂದ-ಧರ್ಮಸ್ಥಳಕ್ಕೆ ತೆರಳುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಅಪಘಾತಗೊಂಡಿದೆ. ಬಸ್‌ನಲ್ಲಿ 40 ಪ್ರಯಾಣಕರಿದ್ದರು.

ಚಿಕ್ಕಮಗಳೂರು (ಮಾ.21) ಕುಕ್ಕನೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಘಟನೆ ಚಿಕ್ಕಮಗಳೂರಿನ ಕೊಡಾಳ್ ಬಳಿ ನಡೆದಿದೆ. ಕಬ್ಬಿಣಸೇತುವೆ ಸಮೀಪದ ಕೊಡಾಳ್‌ ಗ್ರಾಮದ ಬಳಿ ಈ ಅಪಘಾತ ನಡೆದಿದೆ. 40 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್ ಏಕಾಏಕಿ ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿದೆ. ಇದರ ಪರಿಣಾಮ ಬಸ್ ಪಲ್ಟಿಯಾಗಿದೆ. 8 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಗೊಂಡ ಪ್ರಯಾಣಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿಕ್ಕಮಗಳೂರು ಟು ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರ್ಕಾರಿ ಬಸ್ ಅಪಘಾತಕ್ಕೀಡಾಗಿದೆ. ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಚಿಕ್ಕಮಗಳೂರು ಗ್ರಾಮಂತರ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ. ಸ್ಥಳೀಯರು ಹಾಗೂ ಪೊಲೀಸರು ನೆರವಿನಿಂದ ಗಾಯಾಳುಗಳನ್ನು ರಕ್ಷಣೆ ಮಾಡಲಾಗಿದೆ. ಗಾಯಗೊಂಡ ಪ್ರಯಾಣಿಕರು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕೊಪ್ಪಳದಲ್ಲಿ ಕ್ಯಾಂಟರ್ ಟಿಪ್ಪರ್ ಡಿಕ್ಕಿ

ಕೊಪ್ಪಳ ಜಿಲ್ಲೆಯ ಕುಷ್ಠಗಿಯಲ್ಲಿ ಕ್ಯಾಂಟರ್ ಹಾಗೂ ಟಿಪ್ಪರ್ ನಡುವೆ ಭೀಕರ ಅಫಘಾತ ಸಂಭವಿಸಿದೆ. ಮಾರ್ಚ್ 20 ರಂದು ನಡೆದ ಈ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕಟಿಗೆಹಳ್ಳಿ ಗ್ರಾಮದ ಹುಚ್ಚಪ್ಪ ಹಾಗೂ ಗೋವಿಂದ್ ಮೃತಪಟ್ಟಿದ್ದಾರೆ. ಸೊಲ್ಲಾಪೂರದಿಂದ ಹೊಸಪೇಟೆ ಕಡೆ ಹೊರಟಿದ್ದ ಕ್ಯಾಂಟರ್, ರಸ್ತೆ ಪಕ್ಕ ನಿಂತಿದ್ದ ಟಿಪ್ಪರ್‌ಗೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಕ್ಯಾಂಟರ್‌ನಲ್ಲಿದ್ದ ಡೀಸೆಲ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿತ್ತು. ಕುಷ್ಠಿಗೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಕಾರು ಆ್ಯಂಬುಲೆನ್ಸ್ ಅಪಘಾತ

ಶಿವಮೊಗ್ಗದ ಉಷಾ ನರ್ಸಿಂಗ್ ಹೋಂ ಸರ್ಕಲ್ ಬಳಿ ಭೀಕರ ಅಪಘಾತ ನಡೆದಿದೆ. ವಿನೋಬನಗರ ಕಡೆಯಿಂದ ಆಂಬುಲೆನ್ಸ್ ವಾಹನ ವೇಗವಾಗಿ ಆಗಮಿಸಿದೆ. ಇದೇ ವೇಳೆ ಮಾರುತಿ ಬ್ರೆಜಾ ಕಾರಿಗೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಮೂವರು ಹಾಗೂ ಆ್ಯಂಬುಲೆನ್ಸ್ ಚಾಲಕನಿಗೆ ಗಾಯವಾಗಿದೆ. ಅದೃಷ್ಠವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಪಲ್ಟಿಯಾದರೆ, ಆ್ಯಂಬುಲೆನ್ಸ್ ಗಾಜು ಸೇರದಂತೆ ಮುಂಭಾಗ ಪುಡಿ ಪುಡಿಯಾಗಿದೆ. ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

PREV
Read more Articles on
click me!

Recommended Stories

Karnataka By-Polls: ದಾವಣಗೆರೆಗೆ ಬಿಜೆಪಿಯಿಂದ ಅಚ್ಚರಿ ಅಭ್ಯರ್ಥಿ, ಎಸ್‌ಟಿ ಸಮುದಾಯದ ಶ್ರೀನಿವಾಸಗೆ ಟಿಕೆಟ್‌ ಯಾಕೆ?
ಬೆಂಗಳೂರು ರಸ್ತೆ ಬದಿಯಲ್ಲಿ ಬೇಕಾಬಿಟ್ಟಿ ವಾಹನ ನಿಲ್ಲಿಸ್ತೀರಾ - ಹುಷಾರ್ !