ಅಯ್ಯೋ ದುರ್ವಿಧಿಯೇ.. 18 ದಿನಗಳ ಹಿಂದೆಯಷ್ಟೇ ಮದುವೆಯಾದ ಕೆಎಸ್ಆರ್‌ಪಿ ಪೇದೆ ಹೃದಯಾಘಾತದಿಂದ ನಿಧನ

Published : May 27, 2026, 05:09 PM IST
heart attack

ಸಾರಾಂಶ

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ 8ನೇ ಪಡೆಯ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಈರಣ್ಣ ಗುಡಾದಾರ್ (26) ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.‌ ಮೂಲತಃ ಬೆಳಗಾವಿ ಜಿಲ್ಲೆಯ..

ಶಿವಮೊಗ್ಗ (ಮೇ.27): ಕರ್ನಾಟಕ ರಾಜ್ಯ ಮೀಸಲು ಪೊಲೀಸ್ 8ನೇ ಪಡೆಯ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಈರಣ್ಣ ಗುಡಾದಾರ್ (26) ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.‌ ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನವರಾಗಿದ್ದು, ಕಳೆದ 7 ವರ್ಷಗಳಿಂದ ಶಿವಮೊಗ್ಗದ ಕೆಎಸ್ಆರ್‌ಪಿ 8ನೇ ಪಡೆಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ನಿನ್ನೆ ತೀವ್ರ ಹೃದಯಾಘಾತ ಸಂಭವಿಸಿದಾಗ ತಕ್ಷಣ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ. ಮೃತ ಈರಣ್ಣರಿಗೆ ಕೇವಲ 18 ದಿನಗಳ ಹಿಂದೆಯಷ್ಟೇ ವಿವಾಹವಾಗಿತ್ತು ಎನ್ನಲಾಗಿದ್ದು, ಮೃತರು ಪತ್ನಿ, ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಯುವ ಪೊಲೀಸ್ ಸಿಬ್ಬಂದಿಯ ಅಕಾಲಿಕ ನಿಧನಕ್ಕೆ ಕೆಎಸ್ಆರ್‌ಪಿ 8ನೇ ಪಡೆಯ ಕಮಾಂಡೆಂಟ್ ಆದ ಎಸ್. ಯುವಕುಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಚಲಿಸುತ್ತಿರುವಾಗಲೇ ಹೃದಯಾಘಾತ: ಬಸ್‌ ಚಾಲಕ ಮೃತ್ಯು

ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ ಸಂಭವಿಸಿ ಬಸ್ ಅಪಘಾತಕ್ಕೀಡಾದ ಘಟನೆ ಮಡಿಕೇರಿ ಸಮೀಪದ ತಾಳತ್ ಮನೆ ಬಳಿ ಮುಂಜಾನೆ 5 ಗಂಟೆ ಸುಮಾರಿಗೆ ನಡೆದಿದೆ. ಬೆಂಗಳೂರು ಮೂಲದ ಶಿವಕುಮಾರ್ (50) ಮೃತರು. ಬೆಂಗಳೂರಿನಿಂದ ಹೊರಟ ಖಾಸಗಿ ಬಸ್ ಮಡಿಕೇರಿ ಸಮೀಪದ ತಲುಪುತ್ತಿದ್ದಂತೆ ಚಾಲಕನಿಗೆ ತೀವ್ರ ಹೃದಯಾಘಾತ ಸಂಭವಿಸಿದೆ.

ಪರಿಣಾಮ ಬಸ್ ರಸ್ತೆ ಪಕ್ಕದ ಇಳಿಜಾರಿಗೆ ವಾಲಿಕೊಂಡಿದೆ. ತನಗೆ ಹೃದಯಘಾತವಾಗುತ್ತಿದ್ದಂತೆ ಚಾಲಕ ಬಸ್ ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಹೃದಯಾಘಾತ ತೀವ್ರವಾಗುತ್ತಿದ್ದಂತೆ ಚಾಲಕ ಚರಂಡಿಯ ಬಳಿ ಬಸ್ ನಿಲ್ಲಿಸಿದ್ದಾರೆ. ಈ ವೇಳೆ ಬಸ್ ಕೊಂಚ ವಾಲಿಕೊಂಡಿದೆ. ಆದರೆ ಪ್ರಯಾಣಿಕರ ಜೀವಕ್ಕೇನು ಅಪಾಯವಾಗಿಲ್ಲ. ತಕ್ಷಣವೇ ಚಾಲಕನನ್ನು ಮಡಿಕೇರಿ ಬಳಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಾಲಕ ಈ ಸಂದರ್ಭ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಮಡಿಕೇರಿ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಸ್ತೆ ಬದಿಯಲ್ಲಿ ಬಸ್ ವಾಲಿಕೊಂಡು ನಿಂತ ಕಾರಣ ಹೆದ್ದಾರಿಯಲ್ಲಿ ಇತರ ವಾಹನ ಸಂಚಾರಕ್ಕೆ ಯಾವುದೇ ಅಡೆ ತಡೆ ಆಗಿಲ್ಲ. ಇತ್ತ ಘಟನೆಯಿಂದ ಆತಂಕಗೊಂಡ ಪ್ರಯಾಣಿಕರಿಗೆ ಬೇರೆ ವಾಹನಗಳ ವ್ಯವಸ್ಥೆ ಮಾಡಲಾಗಿದೆ.

PREV
Read more Articles on
click me!

Recommended Stories

ರೈತರ ಸಮಸ್ಯೆಗೆ ಪರಿಹಾರ ಸಿಗುತ್ತಾ? ಸಚಿವ ಚಲುವರಾಯಸ್ವಾಮಿ ಹೇಳಿದ ಹೊಸ ದಾರಿ ಏನು?
ಬೆಳಗಾವಿ 4500 ಹಗರಣ: ಶಿವಾನಂದ ನೀಲಣ್ಣವರ್ ಪತ್ನಿ, ನಟ ಅಭಿಲಾಷ್ ಸೇರಿ ವ್ಯವಹಾರ ಪಾಲುದಾರರಿಗೆ ಸಿಐಡಿ ಗ್ರಿಲ್!