ರಾಯರೆಡ್ಡಿಗೆ ರಾತ್ರಿ ಕನಸಲ್ಲಿ ಆಂಜನೇಯ ಬಂದು ಜಾಡಿಸಿ ಒದೀತೀನಿ ಮಗನೇ ಅಂತಾ ಹೇಳಿರಬೇಕು: ಕೆ.ಎಸ್‌.ಈಶ್ವರಪ್ಪ ವ್ಯಂಗ್ಯ

Published : Sep 01, 2026, 12:36 PM IST
Basavaraj Rayareddy

ಸಾರಾಂಶ

ಎಲ್ಲಾ ಧರ್ಮಕ್ಕಿಂತ ಇಸ್ಲಾಂ ಧರ್ಮ ಶ್ರೇಷ್ಠ ಎಂದು ಹೇಳಿಕೆ ನೀಡಿದ್ದಾರೆ ಎನ್ನಲಾದ ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ವಿರುದ್ಧ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಯರೆಡ್ಡಿ ಮುಂಜಿ ಮಾಡಿಸಿಕೊಂಡು ಹಜ್ ಯಾತ್ರೆಗೆ ಹೋಗಲಿ ಎಂದು ವ್ಯಂಗ್ಯವಾಡಿದ ಅವರು, ಹಿಂದೂ ಧರ್ಮದ ಬಗ್ಗೆ ಟೀಕಿಸುವ ಅಧಿಕಾರ ಯಾರು ಕೊಟ್ಟರು ಎಂದು ಪ್ರಶ್ನಿಸಿದ್ದಾರೆ.

ಶಿವಮೊಗ್ಗ: ಈ ರಾಜ್ಯದ ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಅವರು ಹಜ್ ಯಾತ್ರೆಗೆ ಹೋಗೋ ಆಸೆಯಿತ್ತು. ಆದ್ರೇ ಅವಕಾಶವಿಲ್ಲ ಅಂತಾರೆ. ಯಾಕೇ ಮುಂಜಿ ಮಾಡಿಕೊಂಡಿಲ್ಲ ಅಂದರೇ ಅಲ್ಲಿ ಸೇರಿಸಲ್ವಾ ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಕಿಡಿಕಾರಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಧರ್ಮಕ್ಕಿಂತ ಇಸ್ಲಾಂ ಧರ್ಮ ಶ್ರೇಷ್ಠ ಎಂದು ಸಚಿವ ಬಸವರಾಜ್ ರಾಯರೆಡ್ಡಿ ಹೇಳ್ತಾರೆ. ಅವರು ಹೊಟ್ಟೆಗೆ ಏನು ತಿನ್ನುತ್ತಾನೋ ಗೊತ್ತಿಲ್ಲ, ಅದನ್ನು ಹೇಳಬೇಕಿತ್ತು.. ಹೊಟ್ಟೆಗೆ ಎನು ತಿಂತಾರೇ ಹೇಳಿದ್ದರೆ ಅದಕ್ಕೆ ಹೀಗೆ ಮಾತಾಡ್ತಿನಿ ಅಂತಾ ಹೇಳಬಹುದಿತ್ತು. ಅವರು ಮಠಕ್ಕೆ ಹೋಗಲಿ ಅಂತಾ ಯಾವನ್ ಕೇಳಿದ್ದು, ನಿಮ್ಮ ಮನೆಯಲ್ಲಿ ಆ ಬುದ್ಧಿ ಕಲಿಸದಿದ್ರೆ ನಾವೇನು ಮಾಡೋಣ ಎಂದು ಹರಿಹಾಯ್ದರು.

ಬಸವರಾಜ ರಾಯರೆಡ್ಡಿಯನ್ನು ಛೇಡಿಸಿದ ಈಶ್ವರಪ್ಪ

ಬಸವರಾಜ್ ರಾಯರೆಡ್ಡಿ ನಿನ್ನೆ ಹೀಗೆ ಹೇಳಿ ಇವತ್ತು ದೇವಸ್ಥಾನಕ್ಕೆ ಹೋಗಿದ್ದಾರಂತೆ. ರಾತ್ರಿ ಕನಸಲ್ಲಿ ಆಂಜನೇಯ ಬಂದು ಜಾಡಿಸಿ ಒದೀತೀನಿ ಮಗನೇ ಅಂತಾ ಹೇಳಿರಬೇಕು, ಅದಕ್ಕೆ ದೇವಾಲಯಕ್ಕೆ ಹೋಗಿದ್ದಾರೆ ಅನ್ಸುತ್ತೇ ಎಂದು ಛೇಡಿಸಿದ ಅವರು, ಇನ್ನೊಂದು ಧರ್ಮದವರಿಗೆ ನೋವಾಗುವ ಹೇಳಿಕೆಯನ್ನು ಯಾವ ಮಂತ್ರಿಯೂ ನೀಡಬಾರದು. ಇಸ್ಲಾಂ ಧರ್ಮದ ಬಗ್ಗೆ ತಪ್ಪು ಕಲ್ಪನೆಯಿದೆ. ಅಧ್ಯಯನವಾಗವೇಕು ಅಂತಾರೇ. ಹಿಂದೂ ಧರ್ಮದ ಬಗ್ಗೆ ಇವರಿಗೇನು ಗೊತ್ತು. ಸಾವಿರಾರು ವರ್ಷಗಳ ಸನಾತನ ಧರ್ಮದ ಬಗ್ಗೆ ಟೀಕೆ ಮಾಡೋ ಅಧಿಕಾರ ಕೊಟ್ಟೋರು ಯಾರು‌? ಈ ಕೂಡಲೇ ರಾಯರೆಡ್ಡಿ ಮೇಲೆ ಸುಮೋಟೋ ಕೇಸ್ ಹಾಕಬೇಕು ಎಂದು ನಾನು ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಒತ್ತಾಯ ಮಾಡುತ್ತೇನೆ ಎಂದರು.

ಹಿಂದೂ ಧರ್ಮ ವಿರೋಧಿಗಳು ಡಿಕೆಶಿ ಕ್ಯಾಬಿನೆಟ್ ಸೇರಿದ್ದಾರೆ

ಧರ್ಮಾಂಧರು, ಹಿಂದೂ ಧರ್ಮ ವಿರೋಧಿಗಳು, ನಾವು ಮುಸ್ಲಿಂ ಧರ್ಮಕ್ಕೆ ಸೇರಿದ್ದೇವೆ ಅನ್ನೊ ಭಾವನೆಯಲಿರುವ ಅನೇಕರು ಡಿ.ಕೆ.ಶಿವಕುಮಾರ್‌ ಕ್ಯಾಬಿನೆಟ್‌ ಸೇರಿಕೊಂಡಿದ್ದಾರೆ. ಇವೆಲ್ಲರೆಲ್ಲ ನಾವು ಪ್ರಬುದ್ಧರು, ವಿದ್ವಾಂಸರು ಅನ್ನೋ ಭ್ರಮೆಯಲ್ಲಿದ್ದಾರೆ. ಅಂತವರು ಸಮಾಜದಲ್ಲಿ ಧರ್ಮಗಳ ನಡುವೆ ಸಂಘರ್ಷ ತರೋ ಹೇಳಿಕೆ ಕೊಡ್ತಿದ್ದಾರೆ. ನೇರವಾಗಿ ಹಿಂದೂ ಧರ್ಮದ ಅನುಯಾಯಿಗಳಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಈ ಹಿಂದೆ ಮಹಾಪುರುಷ ಸಿದ್ದರಾಮಯ್ಯರ ಮಗ ಯತೀಂದ್ರ ಹಿಂದೂ ರಾಷ್ಟ್ರವಾಗಲು ಬಿಡಲ್ಲ ಎಂದಿದ್ದರು. ಮತ್ತೇನು ಮುಸ್ಲಿಂ ರಾಷ್ಟ್ರ ಮಾಡ್ತೀರಾ? ಈಗ ರಾಯರೆಡ್ಡಿ ಎಲ್ಲಾ ಧರ್ಮಕ್ಕಿಂತ ಮುಸ್ಲಿಂ ಧರ್ಮ ಶ್ರೇಷ್ಠ ಎಂದು ಹೇಳಿಕೆ ನೀಡಿದ್ದಾರೆ.

ರಾಯರೆಡ್ಡಿಯವರೇ ಮುಂಜಿ ಮಾಡಿಸಿಕೊಂಡು ಬಿಡಿ ಎಂದ ಅವರು, ಧರ್ಮ ಟೀಕೆ ಮಾಡಿದರೆ ಹಿಂದೂ ಯುವಕರು ಏನು ಬೇಕಾದರೂ ಕ್ರಮ ತೆಗೆದಕೊಳ್ಳಬಹುದು ಎಂದು ಎಚ್ಚರಿಕೆ ನೀಡಿದರು.

PREV
Read more Articles on
click me!

Recommended Stories

ನೀಲಿ ಸಮುದ್ರದ ಸುಂದರ ಲಕ್ಷದ್ವೀಪಕ್ಕೆ ಬೆಂಗಳೂರಿನಿಂದ ನೇರ ವಿಮಾನ: ಇಲ್ಲಿದೆ ಕಂಪ್ಲೀಟ್ ಟೂರ್ ಪ್ಯಾಕೇಜ್ ಡೀಟೇಲ್ಸ್!
4 ದಿನದಲ್ಲೇ ಎರಡು ವರ್ಗಾವಣೆ ಆದೇಶ; ಪೊಲೀಸ್ ಇನ್‌ಸ್ಪೆಕ್ಟರ್ ಕೇಸ್‌ಗೆ ಕೋರ್ಟ್ ಫುಲ್‌ಸ್ಟಾಪ್