ಅಯೋಧ್ಯೆಯ ಬಹುದಿನದ ಹಿಂದೂಗಳ ಕನಸಾದ ರಾಮ ಮಂದಿರ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ರಾಷ್ಟ್ರ ದ್ರೋಹಿ ಸಂಘಟನೆ ಮಂದಿರವನ್ನು ಸ್ಪೋಟಿಸುವುದಾಗಿ ಪಿಎಫ್ ಐನವರು ಬೆದರಿಕೆ ಹಾಕಿರುವುದನ್ನು ಪ್ರತಿಯೊಬ್ಬರು ಖಂಡಿಸಬೇಕು ಎಂದು ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಶಿವಮೊಗ್ಗ (ಅ.20): ಅಯೋಧ್ಯೆಯ ಬಹುದಿನದ ಹಿಂದೂಗಳ ಕನಸಾದ ರಾಮ ಮಂದಿರ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ರಾಷ್ಟ್ರ ದ್ರೋಹಿ ಸಂಘಟನೆ ಮಂದಿರವನ್ನು ಸ್ಪೋಟಿಸುವುದಾಗಿ ಪಿಎಫ್ ಐನವರು ಬೆದರಿಕೆ ಹಾಕಿದ್ದಾರೆ. ರಾವಣ ವಂಶಸ್ಥರಾಗಲಿ, ಪಿಎಫ್ ಐನವರಾಗಲಿ ಯಾರಿಂದಲೂ ಇದು ಸಾಧ್ಯವಿಲ್ಲ. ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಸುಪ್ರೀಂ ಕೋರ್ಟ್ ನ್ನು ನಂಬುವ ಪ್ರತಿಯೊಬ್ಬರೂ ಇದನ್ನು ಖಂಡಿಸಬೇಕು. ಸುಪ್ರೀಂ ಕೋರ್ಟ್ ನಲ್ಲಿ ತೀರ್ಮಾನವನ್ನು ಧಿಕ್ಕರಿಸಿ ಅಲ್ಲಿ ಬಾಬರಿ ಮಸೀದಿ ನಿರ್ಮಿಸುವುದಾಗಿ ಹೇಳಿರುವುದು ಖಂಡನೀಯ. ಇದನ್ನು ವಿಚಾರವಾದಿಗಳೂ ಸೇರಿದಂತೆ ದೇಶದ ಪ್ರತಿಯೊಬ್ಬರೂ ತೀವ್ರವಾಗಿ ಖಂಡಿಸಬೇಕು. ದೇಶದ ಪ್ರತಿಯೊಬ್ಬರಿಗೂ ಗೊತ್ತು ರಾಮ ಹುಟ್ಟಿದ್ದು ಅಯೋಧ್ಯೆಯಲ್ಲಿ ಎಂದು ಹಾಗಾಗಿ ಈ ರೀತಿಯಲ್ಲಿ ಬೆದರಿಕೆ ಹಾಕುವ ದೇಶದ್ರೋಹಿಗಳಿಗೆ ಕಾನೂನಿಗೆ ಸೂಕ್ತ ಕಾನೂನು ತಂದು ಕಠಿಣ ಶಿಕ್ಷೆ ನೀಡಬೇಕು. ಒಂದೇ ಬುಲೆಟ್ ನಲ್ಲಿ ಅವರು ಕೊನೆಯಾಗಬೇಕು. ಕೆಲವೇ ದಿನಗಳಲ್ಲಿ ಮಂದಿರ ಉದ್ಘಾಟನೆ ಹತ್ತಿರವಿರುವಾಗ ಶ್ರದ್ಧಾ ಕೇಂದ್ರಗಳ ಈ ರೀತಿಯ ಬೆದರಿಕೆ ಸಹಿಸುವುದಿಲ್ಲ. ಇಂತಹ ಘಟನೆಯನ್ನು ನಿರ್ವಹಿಸಲು ಪ್ರತ್ಯೇಕ ಕಾನೂನು ತರಬೇಕು. ಅದಕ್ಕಾಗಿ ಸಂಸತ್ ನ ತುರ್ತು ಅಧಿವೇಶನ ಕರೆಯಬೇಕು ಎಂದು ಹೇಳಿದ್ದಾರೆ.
ಅಯೋಧ್ಯೆಯ ರಾಮನಿಗೆ ಮಹಾರಾಷ್ಟ್ರದ ತೇಗ
ಸಿದ್ದರಾಮಯ್ಯ ಚುನಾವಣೆ ಸ್ಪರ್ಧೆ ಬಗ್ಗೆ: ಚುನಾವಣೆಗೆ ಸ್ಪರ್ಧಿಸುವ ಕುರಿತಾದ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಚಿವ ಈಶ್ವರಪ್ಪ ಪ್ರತಿಕ್ರಿಯೆ. ಅವರು ಮೊದಲು ತಾವು ಯಾವ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ತೀರ್ಮಾನಿಸಲಿ ಹಿಂದೂ ವಿರೋಧಿಯಾದ ಅವರು ಮೊದಲು ತಮ್ಮ ಅವಧಿಯಲ್ಲಿ ಆದ ಹಿಂದೂಗಳ ಕೊಲೆಯ ಬಗ್ಗೆ ಕ್ಷಮೆ ಯಾಚಿಸಲಿ ಕಳೆದ ಚುನಾವಣೆಯಲ್ಲಿ ಭಯದ ಕಾರಣ ಬಾದಾಮಿಯಲ್ಲಿ ಸ್ಪರ್ಧಿಸಿದ ಅವರು ಈ ಸಲವೂ ಗೊಂದಲದಲ್ಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ರಾಮಮಂದಿರ ಸ್ಫೋಟಕ್ಕೆ PFI ಸಂಚು! ಮಹಾರಾಷ್ಟ್ರ ಉಗ್ರನಿಗ್ರಹ ದಳದಿಂದ ಸ್ಫೋಟಕ ಮಾಹಿತಿ
ಕಾಂತಾರ ಸಿನಿಮಾ ವಿವಾದದ ಬಗ್ಗೆ: ಕಾಂತಾರ ಸಿನಿಮಾ ಕುರಿತಾಗಿ ನಟ ಚೇತನ್ ಹೇಳಿಕೆಗೆ ಪ್ರತಿಕ್ರಿಯೆ. ಈ ರೀತಿಯ ಹೇಳಿಕೆ ಸರಿಯಲ್ಲ. ಅವನ್ಯಾರು ಹೀಗೆ ಹೇಳಲು? ಅವನ ಒಂದೇ ಒಂದು ಚಿತ್ರ ನಾನು ನೋಡಿಲ್ಲ. ಅದಕ್ಕೆ ಹೆಚ್ಚು ಮಹತ್ವ ನೀಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ನಟ ಚೇತನ್ ಕುಮಾರ್, ರಿಷಬ್ ಹೇಳಿದ ಹಾಗೆ ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ ಎಂದು ಹೇಳುವ ಮೂಲಕ ಚರ್ಚೆ ಹುಟ್ಟು ಹಾಕಿದ್ದಾರೆ. ಚೇತನ್ ಹುಟ್ಟು ಹಾಕಿದ ಚರ್ಚೆ ಈಗ ಇದು ತುಳುನಾಡಿನ ನೆಲದ ಸಂಸ್ಕೃತಿಯ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಜೊತೆಗೆ ಚೇತನ್ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ದೈವಾರಾಧನೆ ಹಿಂದೂ ಸಂಸ್ಕೃತಿಯೇ ಅಲ್ಲ ಎಂದು ಕಾಂತಾರ ಸಿನಿಮಾದ ಬಗ್ಗೆ ಹೊಸ ವಿವಾದ ಹುಟ್ಟು ಹಾಕಿದ ನಟ ಚೇತನ್ ವಿರುದ್ದ ಕಾಂತಾರ ಸಿನಿಮಾ ತಂಡ ಗರಂ ಆಗಿದೆ.