ತ್ರಿಡಿ ಮ್ಯಾಪಿಂಗ್‌ನಲ್ಲಿ ಬಣ್ಣದ ಚಿತ್ತಾರದ ಮೂಲಕ ರಾತ್ರಿ 7 ಗಂಟೆಯಿಂದ 10 ಗಂಟೆವರೆಗೂ ಪ್ರತಿ ಹತ್ತು ನಿಮಿಷಗಳಿಗೊಮ್ಮೆ ಕೆಆರ್‌ಎಸ್ ಅಣೆಕಟ್ಟೆಇತಿಹಾಸವನ್ನು ಪ್ರವಾಸಿಗರಿಗೆ ತಿಳಿಸಿಕೊಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಅಣೆಕಟ್ಟು ನಿರ್ಮಾಣದ ಹಿಂದಿನ ಚರಿತ್ರೆಯನ್ನು ಈ ತ್ರಿಡಿ ಮ್ಯಾಪಿಂಗ್ ತೋರಿಸಿಕೊಡುತ್ತದೆ.
ಮೈಸೂರು(ಅ.06): ಶ್ರೀರಂಗಪಟ್ಟಣ, ಮೈಸೂರು ದಸರಾ ಮಹೋತ್ಸವ ಅಂಗವಾಗಿ ಕೆಆರ್‌ಎಸ್‌ನಲ್ಲಿ ಅ.8 ರವರೆಗೆ ಆಯೋಜಿಸಿರುವ ವಿದ್ಯುತ್ ದೀಪಗಳ ಅಲಂಕಾರದಲ್ಲಿ ಕಾವೇರಿ ಪ್ರತಿಮೆ ಬಳಿಯ ತ್ರಿಡಿ ಮ್ಯಾಪಿಂಗ್ ಜನರ ಗಮನ ಸೆಳೆಯುತ್ತಿದೆ.
ತ್ರಿಡಿ ಮ್ಯಾಪಿಂಗ್‌ನಲ್ಲಿ ಬಣ್ಣದ ಚಿತ್ತಾರದ ಮೂಲಕ ರಾತ್ರಿ 7 ಗಂಟೆಯಿಂದ 10 ಗಂಟೆವರೆಗೂ ಪ್ರತಿ ಹತ್ತು ನಿಮಿಷಗಳಿಗೊಮ್ಮೆ ಕೆಆರ್‌ಎಸ್ ಅಣೆಕಟ್ಟೆಇತಿಹಾಸವನ್ನು ಪ್ರವಾಸಿಗರಿಗೆ ತಿಳಿಸಿಕೊಡುವ ವ್ಯವಸ್ಥೆಯನ್ನು ಮಾಡಲಾಗಿದೆ.
ಮೈಸೂರು ದಸರಾ: ಅರಮನೆಯಲ್ಲಿ ಯೋಗ ಸರಪಳಿ
ಅಣೆಕಟ್ಟೆನಿರ್ಮಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ, ಅವರ ತಾಯಿ ಕೆಂಪನಂಜಮ್ಮಣಿ ಅವರು ಅರಮನೆಯಲ್ಲಿದ್ದ ಬಂಗಾರದ ಒಡವೆಯನ್ನು ಮಾರಾಟ ಮಾಡಿ ಅಣೆಕಟ್ಟೆನಿರ್ಮಿಸಲು ಹಣ ಕೊಟ್ಟಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮದ್ರಾಸ್ ಇಂಜಿನಿಯರ್ ಆಗಿದ್ದ ಸರ್.ಎಂ ವಿಶ್ವೇಶ್ವರಯ್ಯ ಅವರನ್ನು ಮೈಸೂರು ಸಂಸ್ಥಾನಕ್ಕೆ ಕರೆಸಿಕೊಂಡು, ದಿವಾನರಾಗಿ ನೇಮಕ ಮಾಡಿಕೊಂಡಿದ್ದು. ನಂತರ ದಿವಾನ್ ಪೂರ್ಣಯ್ಯ ಅವರು ಅಣೆಕಟ್ಟೆನಿರ್ಮಾಣಕ್ಕೆ ನೀಲಿ ನಕ್ಷೆ ತಯಾರಿಸಿ ಕೊಟ್ಟು ನಾಲ್ವಡಿ ಅವರ ಜೊತೆ ಅಣೆಕಟ್ಟೆನಿರ್ಮಾಣ ಹಾಗೂ ಅಣೆಕಟ್ಟೆಕೆಳಭಾಗದಲ್ಲಿರುವ ಜಮೀನುಗಳಿಗೆ ನೀರುಣಿಸಲು ಕಾಲುವೆಗಳನ್ನು ತೊಡಿಸಿದ್ದು ಸೇರಿದಂತೆ 10 ನಿಮಿಷದಲ್ಲಿ ಅಣೆಕಟ್ಟೆಇತಿಹಾಸವನ್ನು ತಿಳಿಸಿಕೊಡುವ ವ್ಯವಸ್ಥೆಯನ್ನು ಮಾಡಿಕೊಡಲಾಗಿದೆ.
ರಾಜೇಶ್ ಕೃಷ್ಣನ್ ಸಂಗೀತ:
ನಾಲ್ವಡಿ ಕೃಷ್ಣರಾಜ ಒಡೆಯರ್ ಪುತ್ಥಳ ಎದುರು ಇರುವ ಸಭಾಂಗಣದಲ್ಲಿ ರಾಜೇಶ್ ಕೃಷ್ಣನ್ ಸಂಗೀತ ಕಾರ್ಯಕ್ರಮದಲ್ಲಿ ಪ್ರೇಕ್ಷಕರು ರಸ ಸಂಜೆಯಲ್ಲಿ ತೇಲಾಡಿದರು. ಶನಿವಾರ ಜಿ ಟಿವಿಯ ಸರಿಗಮಪ ಸಿಂಗರ್ಸ್ ತಮ್ಮ ಕಂಠ ಸಿರಿಯಿಂದ ಇಲ್ಲಿಗೆ ಆಗಮಿಸಿದ್ದ ಪ್ರವಾಸಿಗರನ್ನು ಹಾಡು, ಡ್ಯಾನ್ಸ್ ಮೂಲಕ ರಂಜಿಸಿದರು. ಕಾವೇರಿ ನೀರಾವರಿ ನಿಗಮ ಕಾರ್ಯಪಾಲಕ ಎಂಜಿನಿಯರ್ ಎಂ.ಬಿ ರಾಜು, ಎಇಇ ವಾಸುದೇವ್ ಉಪಸ್ಥಿತರಿದ್ದರು.
ವಿದ್ಯುತ್ ದೀಪಾಲಂಕಾರದಲ್ಲಿ ಜಗಮಗಿಸುತ್ತಿದೆ KRS