ಬಿಜೆಪಿ ನಿಯೋಜಿತ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ನ.18 ರಂದು ನಾಮಪತ್ರ ಸಲ್ಲಿಸಲಿರುವ ಹಿನ್ನೆಲೆಯಲ್ಲಿ ತಮ್ಮ ಮನೆದೇವರು ಕೈಗೋನಹಳ್ಳಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನ ಮತ್ತು ಚನ್ನರಾಯಪಟ್ಟಣ ತಾಲೂಕಿನ ದಢೀಘಟ್ಟದ ಶ್ರೀಚಿಕ್ಕಮ್ಮದೊಡ್ಡಮ್ಮನವರ ದೇವಸ್ಥಾನದಲ್ಲಿ ಬಿ.ಫಾರಂ ಇಟ್ಟು ಪತ್ನಿ ದೇವಕಿಯೊಂದಿಗೆ ಪೂಜೆ ಸಲ್ಲಿಸಿದ್ದಾರೆ.
ಮಂಡ್ಯ(ನ.16): ಬಿಜೆಪಿ ನಿಯೋಜಿತ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ನ.18 ರಂದು ನಾಮಪತ್ರ ಸಲ್ಲಿಸಲಿರುವ ಹಿನ್ನೆಲೆಯಲ್ಲಿ ತಮ್ಮ ಮನೆದೇವರು ಕೈಗೋನಹಳ್ಳಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನ ಮತ್ತು ಚನ್ನರಾಯಪಟ್ಟಣ ತಾಲೂಕಿನ ದಢೀಘಟ್ಟದ ಶ್ರೀಚಿಕ್ಕಮ್ಮದೊಡ್ಡಮ್ಮನವರ ದೇವಸ್ಥಾನದಲ್ಲಿ ಬಿ.ಫಾರಂ ಇಟ್ಟು ಪತ್ನಿ ದೇವಕಿಯೊಂದಿಗೆ ಪೂಜೆ ಸಲ್ಲಿಸಿದ್ದಾರೆ.
ಹುಟ್ಟೂರು ಕೈಗೋನಹಳ್ಳಿಗೆ ಆಗಮಿಸಿದ ವೇಳೆ ಅದ್ದೂರಿಯಾಗಿ ನಾರಾಯಣಗೌಡರನ್ನು ಬರಮಾಡಿಕೊಂಡರು. ಈ ವೇಳೆ ವೀರಭದ್ರಸ್ವಾಮಿನ ಪಾದತಳದಲ್ಲಿ ಬಿ ಫಾರಂ ಇಟ್ಟು ಪೂಜೆ ಸಲ್ಲಿಸಿದರು. ನಂತರ ಚನ್ನರಾಯಪಟ್ಟಣ ತಾಲೂಕಿನ ದಢೀಘಟ್ಟಗ್ರಾಮದ ಶ್ರೀಚಿಕ್ಕಮ್ಮ ಮತ್ತು ಶ್ರೀದೊಡ್ಡಮ್ಮ ನವರ ದೇವಸ್ಥಾನದಲ್ಲಿಯೂ ವಿಶೇಷ ಪೂಜೆ ಸಲ್ಲಿಸಲು ತೆರಳಿದ್ದಾರೆ.
undefined
ನ.18 ರಂದು ಬಿಜೆಪಿ ನಾಯಕರ ಆಗಮನ:
ನ.18 ರಂದು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಪಟ್ಟಣದ ಮಿನಿ ವಿಧಾನಸೌಧಕ್ಕೆ ತೆರಳಿ ನಾನು ನಾಮಪತ್ರವನ್ನು ಸಲ್ಲಿಸಲಿದ್ದೇನೆ. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್ .ಅಶೋಕ್, ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ, ಕಾನೂನು ಸಚಿವ ಜಿ.ಸಿ.ಮಾಧುಸ್ವಾಮಿ, ಬಿ.ವೈ.ವಿಜಯೇಂದ್ರ ಮತ್ತು ಹಾಸನ ಕ್ಷೇತ್ರದ ಶಾಸಕ ಪ್ರೀತಂಗೌಡ ಭಾಗವಹಿಸುವರು ಎಂದರು. ಈ ವೇಳೆ ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್ , ತಾಲೂಕು ಬಿಜೆಪಿ ಅಧ್ಯಕ್ಷ ಬೂಕಹಳ್ಳಿ ಮಂಜು, ಹಿರಿಕಳಲೆ ಗ್ರಾ.ಪಂ ಅಧ್ಯಕ್ಷ ಸುರೇಶ್ ಉಪಸ್ಥಿತರಿದ್ದರು.
ಮಾಜಿ ಸ್ಪೀಕರ್ ಕಾಲಿಗೆ ಬಿದ್ದು ಆಶಿರ್ವಾದ ಪಡೆದ ನಾರಾಯಣಗೌಡ