'ಹಿಂಸೆ ಮಾಡಲು ಪ್ರಚೋದನೆ ನೀಡಿದ್ದೇ ಯಡಿಯೂರಪ್ಪ ಸರ್ಕಾರ'

By Suvarna NewsFirst Published Dec 23, 2019, 12:27 PM IST
Highlights

ಬಿಜೆಪಿಯವರೇ ನಕಲಿ ದೇಶ ಭಕ್ತರು: ಈಶ್ವರ ಖಂಡ್ರೆ|ರೈಲ್ವೆ ಆಸ್ತಿಗೆ ಕೈ ಹಾಕಿದರೆ ಗುಂಡು ಹಾಕ್ತೇವೆ, ಕಂಡಲ್ಲಿ ಗುಂಡು ಎಂದು ಜವಾಬ್ದಾರಿ ಸ್ಥಾನದಲ್ಲಿರುವ ಮಂತ್ರಿಗೆ ನೈತಿಕತೆ ಇದೆಯಾ, ಇಂಥವರು ಮಂತ್ರಿಯಾಗಬೇಕಾ, ಸಂಸದರಾಗಬೇಕಾ? ಎಂದ ಖಂಡ್ರೆ|

ಬೀದರ್‌(ಡಿ.23): ಸರ್ಕಾರ ಧಮನಕಾರಿ ನೀತಿಯನ್ನು ಅಳವಡಿಸಿಕೊಂಡಿದೆ. ಪ್ರತಿಪಕ್ಷಗಳ ಧ್ವನಿಯನ್ನು ಮೊಟಕುಗೊಳಿಸುವ ಹುನ್ನಾರ ಸರ್ಕಾರ ನಡೆಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಆರೋಪಿಸಿದ್ದಾರೆ.

ಜಿಲ್ಲೆಯ ಭಾಲ್ಕಿಯಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ವತಿಯಿಂದ ರಮೇಶಕುಮಾರ, ಎಸ್‌.ಆರ್‌ ಪಾಟೀಲ್‌ ಅವರ ನೇತೃತ್ವದಲ್ಲಿ ಮಂಗಳೂರಿಗೆ ತೆರಳಿ ಸಂತ್ರಸ್ತರಿಗೆ ಧೈರ್ಯ ತುಂಬಲು, ಪುನರ್ವಸತಿಗೆ ಹಾಗೂ ಪೊಲೀಸ್‌ ದೌರ್ಜನ್ಯಕ್ಕೊಳಗಾದವರಿಗೆ ಸಾಂತ್ವನ ಹೇಳಲು ಹೋದವರಿಗೆ ಬಿಟ್ಟೇ ಇಲ್ಲ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರೈಲ್ವೆ ಆಸ್ತಿಗೆ ಕೈ ಹಾಕಿದರೆ ಗುಂಡು ಹಾಕ್ತೇವೆ, ಕಂಡಲ್ಲಿ ಗುಂಡು ಎಂದು ಜವಾಬ್ದಾರಿ ಸ್ಥಾನದಲ್ಲಿರುವ ಮಂತ್ರಿಗೆ ನೈತಿಕತೆ ಇದೆಯಾ, ಇಂಥವರು ಮಂತ್ರಿಯಾಗಬೇಕಾ, ಸಂಸದರಾಗಬೇಕಾ?. ಬಿಜೆಪಿ ಅಧ್ಯಕ್ಷ ಕಟೀಲ್‌ ಅವರು ಬಿಜೆಪಿ ವಿರುದ್ಧ ಮಾತನಾಡುವವರು ದೇಶದ್ರೋಹಿಗಳೆಂಬ ರೀತಿಯಲ್ಲಿ ಮಾತನಾಡ್ತಾರೆ. ಇವರೇ ನಕಲಿ ದೇಶ ಭಕ್ತರು. ಇವರಿಗೆ ದೇಶದ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ. ಮುಂಜಾಗ್ರತಾ ಕ್ರಮ ವಹಿಸದೇ ಹಿಂಸೆ ಮಾಡಲು ಪ್ರಚೋದನೆ ನೀಡಿದ್ದೇ ಸರ್ಕಾರ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಆರೋಪಿಸಿದರು.
 

click me!