ವಿಪಕ್ಷದವರನ್ನು ಟಾರ್ಗೆಟ್ ಮಾಡಿ ಇಡಿ, ಐಟಿ ದಾಳಿ: ಧ್ರುವನಾರಾಯಣ ಕಿಡಿ

By Suvarna NewsFirst Published Aug 5, 2021, 1:52 PM IST
Highlights
  • ವಿರೋಧ ಪಕ್ಷದ ನಾಯಕರು, ಮುಖಂಡರನ್ನು ಟಾರ್ಗೆಟ್ ಮಾಡಿ ಕೇಂದ್ರ ಸರ್ಕಾರ ಐಟಿ, ಇಡಿ ದಾಳಿ
  • ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಆರೋಪ
  •  ಕಾನೂನುಬದ್ಧವಾಗಿ ಅವರು ದಾಳಿ  ನಡೆಸಲಿ - ಆದರೆ ಟಾರ್ಗೆಟ್ ಮಾಡಿ ಕಿರುಕುಳ

ಚಾಮರಾಜನಗರ (ಆ.05): ವಿರೋಧ ಪಕ್ಷದ ನಾಯಕರು, ಮುಖಂಡರನ್ನು ಟಾರ್ಗೆಟ್ ಮಾಡಿ ಕೇಂದ್ರ ಸರ್ಕಾರ ಐಟಿ, ಇಡಿ ದಾಳಿಗಳನ್ನು ಮಾಡಿಸುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಆರೋಪಿಸಿದರು. 

ಚಾಮರಾಜನಗರದಲ್ಲಿಂದು ಸುದ್ದಿಗಾರರೊಂದಿಗೆ ಅವರು ಕಾನೂನುಬದ್ಧವಾಗಿ ಅವರು ದಾಳಿ  ನಡೆಸಲಿ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ವಿಪಕ್ಷದವರನ್ನು ಟಾರ್ಗೆಟ್ ಮಾಡಿ ಕಿರುಕುಳ ಕೊಡುತ್ತಿದ್ದಾರೆ‌. ಕೇವಕ ವಿಪಕ್ಷದವರ ಮನೆಯ ಮೇಲೆ ದಾಳಿ ಮಾಡುತ್ತಿದ್ದಾರೆ, ವಿಪಕ್ಷದವರನ್ನು ಸದೆಬಡಿಯುವ ಕೆಲಸ ಮಾಡುತ್ತಿದೆ ಎಂದು ಶಾಸಕ ಜಮೀರ್ ಮನೆ ಮೇಲಿನ ದಾಳಿ  ಖಂಡಿಸಿದರು. 

ಜಮೀರ್‌ ಅಹಮದ್‌ಗೆ ಮುಳುವಾಯ್ತಾ 'ಅರಮನೆ'? ಐಟಿ ದಾಳಿ ಹಿಂದಿನ ರಹಸ್ಯ!

ಮೇಕೆದಾಟು ಯೋಜನೆಯನ್ನು ರಾಜ್ಯ ಸರ್ಕಾರ ಮಾಡಲೇಬೇಕು. ಯೋಜನೆಯನ್ನು ಪ್ರಶ್ನಿಸುವ ನೈತಿಕತೆ ತಮಿಳುನಾಡಿಗೆ ಇಲ್ಲ, ಅದನ್ನು ಪ್ರಶ್ನಿಸದಿರುವ ಹೃದಯ ವೈಶಾಲ್ಯತೆಯನ್ನು ಅಲ್ಲಿನ ಸರ್ಕಾರ, ವಿಪಕ್ಷಗಳು ತೋರಿಸಬೇಕು, ನೀರಾವರಿ ಮಂತ್ರಿಯೂ ಆಗಿದ್ದ ಸಿಎಂ ಬೊಮ್ಮಾಯಿ ಅವರು ಈ ಯೋಜನೆಯನ್ನು ಕಾರ್ಯಗತಗೊಳಿಸಬೇಕು ಎಂದು ಅವರು ಒತ್ತಾಯಿಸಿದರು. 

ಬೊಮ್ಮಾಯಿ ಸರ್ಕಾರದಲ್ಲಿ ಸಚಿವ ಸಂಪುಟದ ಅಸಮತೋಲನ ತುಂಬಾ ಇದೆ, ಸಿಎಂ ಸಂಪುಟ ರಚನೆಯಲ್ಲಿ ಎಡವಿದ್ದು ಬೆಂಗಳೂರಿಗೆ ಸಿಂಹಪಾಲು ಕೊಟ್ಟು 13 ಜಿಲ್ಲೆ ಕಡೆಗಣಿಸಿದ್ದಾರೆ. ಇದರಿಂದಾಗಿ, ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು ಈ ಸರ್ಕಾರ ಪೂರ್ಣಾವಧಿ ಪೂರೈಸಲಿದೆಯೇ ಎಂಬ ಅನುಮಾನ ಬಂದಿದೆ ಎಂದು ಲೇವಡಿ ಮಾಡಿದರು.

ಯಡಿಯೂರಪ್ಪ ಅವರ ಮೊದಲ ಅವಧಿಯಲ್ಲೂ ಚಾಮರಾಜನಗರಕ್ಕೆ ಬರಲಿಲ್ಲ, ಎರಡನೇ ಅವಧಿಯಲ್ಲೂ ಬರಲಿಲ್ಲ ಬಿಎಸ್ವೈ ಏನೂ ಅಧಿಕಾರದಲ್ಲಿ ಉಳಿದರಾ..? ಈಗಿನ ಸಿಎಂ ಬೊಮ್ಮಾಯಿ ಅವರಾದರೂ ಚಾಮರಾಜನಗರ ಜಿಲ್ಲಾಕೇಂದ್ರಕ್ಕೆ ಬಂದು ಪರಿಸ್ಥಿತಿ ಅವಲೋಕಿಸಿ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು ಎಂದು ಅವರು ಆಗ್ರಹಿಸಿದರು. 

ರಾಜ್ಯ ರಾಜಕಾರಣ ಬರುತ್ತಾರೆ ಎಂಬ ಮಾತಿಗೆ ಅವರು ಉತ್ತರಿಸಿ, ರಾಜ್ಯ ರಾಜಕಾರಣಕ್ಕೆ ಬರುವ ಯಾವುದೇ ಆಲೋಚನೆಗಳಿಲ್ಲ, ಪಕ್ಷ ಕಾರ್ಯಾಧ್ಯಕ್ಷ ಸ್ಥಾನ ಕೊಟ್ಟಿದ್ದು ಅದನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ಕೆಲಸ ಮಾಡುತ್ತಿದ್ದೇನೆ, ಕೊಳ್ಳೇಗಾಲ, ಗುಂಡ್ಲುಪೇಟೆಯಲ್ಲಿ ಚುನಾವಣೆಗೆ ನಿಲ್ಲುತ್ತೇನೆ ಎಂಬುದು ವದಂತಿಯಷ್ಟೇ ಎಂದು ಸ್ಪಷ್ಟಪಡಿಸಿದರು.

click me!