ಧಾರವಾಡ: ಕೋಟಿ ಕಂಠ ಗಾಯನಕ್ಕೆ ಅಭೂತಪೂರ್ವ ಸ್ಪಂದನೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

By Suvarna News  |  First Published Oct 28, 2022, 2:00 PM IST

Koti Kantha Gayana Dharwad: ಕನ್ನಡ ರಾಜ್ಯೋತ್ಸವ ನಿಮಿತ್ತ ನಡೆದ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ಸಚಿವ ಹಾಲಪ್ಪ ಆಚಾರ್‌ ಕನ್ನಡ ಗೀತೆಗಳನ್ನು ಹಾಡಿದರು


ವರದಿ: ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ 

ಧಾರವಾಡ (ಅ. 28): ಕನ್ನಡ ರಾಜ್ಯೋತ್ಸವ ನಿಮಿತ್ತ ನಡೆದ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ (Koti Kantha Gayana) ಕೇಂದ್ರ ಸಂಸದೀಯ ವ್ಯವಹಾರಗಳ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ (Pralhad Joshi) ಮತ್ತು ಗಣಿ, ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವರು ಮತ್ತು ಧಾರವಾಡ ಜಿಲ್ಲಾ ಉಸ್ತವಾರಿ ಸಚಿವರಾದ ಹಾಲಪ್ಪ ಆಚಾರ್‌ (Halappa Achar) ಕನ್ನಡ ಗೀತೆಗಳನ್ನು ಹಾಡಿದರು. ಕರ್ನಾಟಕ ಕಾಲೇಜು ಮುಂಭಾಗದಲ್ಲಿ ಆಯೋಜಿಸಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ನಾಡಗೀತೆ ಜೊತೆಗೆ ಉದಯವಾಗಲಿ ನಮ್ಮ ಚೆಲುವ ನಾಡು, ಕನ್ನಡ ಡಿಂಡಿಮ, ಹಚ್ಚೆವು ಕನ್ನಡದ ದೀಪ, ವಿಶ್ವ ವಿನೂತನ, ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಹಾಡುಗಳನ್ನು ಹಾಡಿದರು. ಕಾರ್ಯಕ್ರಮದಲ್ಲಿ ನಗರದ ನಾನಾ ಭಾಗಗಳಿಂದ ಆಗಮಿಸಿದ್ದ ಕನ್ನಡ ಸಂಘಟನೆಗಳು, ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಹಸ್ರಾರು ಸಂಖ್ಯೆಯಲ್ಲಿದ್ದ ಸಾರ್ವಜನಿಕರು ಸಹ ಕೋಟಿ ಕಂಠ ಗಾಯನಕ್ಕೆ ಧ್ವನಿಗೂಡಿಸಿದರು. 

Latest Videos

undefined

ಕಾರ್ಯಕ್ರಮದ ಬಳಿಕ ಮಾಧ್ಯಮದವರೊಂದಿಗೆ ಕೇಂದ್ರ ಸಚಿವರು ಮಾತನಾಡಿ ಕೋಠಿ ಕಂಠ ಗಾಯನದ ಮೂಲಕ ಸಚಿವ  ಸುನಿಲ್ ಕುಮಾರ್ ನಾಡು-ನುಡಿ, ಭಾಷೆಯ ಅಭಿಮಾನ ಹೆಚ್ಚಿಸಿದ್ದಾರೆ, ಸುನಿಲ್‌ಕುಮಾರ ಅವರಿಗೆ ಅಭಿನಂದನೆ ಸಲ್ಲಿಸುತ್ತೆನೆ ಎಂದರು. ಜಗತ್ತಿನಾದ್ಯಂತ 1 ಕೋಟಿ 42 ಲಕ್ಷ ಜನರು ಅಧಿಕೃತವಾಗಿ ನೊಂದಣಿ ಮಾಡಿಕ್ಕೊಂಡಿದ್ದಾರೆ. ಜನರು ಬಾಷೆ ನಾಡು ನುಡಿಗಾಗಿ ಶ್ರಮಿಸಬೇಕು. ನಾನು ನನ್ನ ಕ್ಷೆತ್ರದಲ್ಲಿ ಬರುವ ಎಲ್ಲ ಶಾಲೆಗಳಿಗೆ ಬಣ್ಣ ಹಚ್ಚುವ ಕೆಲಸವನ್ನ ಮಾಡಿಸುತ್ತಿದ್ದೆನೆ. ಎಲ್ಲ ಶಾಲೆ ಕಾಲೇಜುಗಳಿಗೆ ಬಣ್ಣ ಹಚ್ಚುವ ಕೆಲಸಕ್ಕೆ‌ ಕೈ ಹಾಕಿದ್ದೆನೆ. ವಿವಿಧ ಕಂಪನಿಗಳು ಬ್ರಷ್, ಬಣ್ಣಗಳನ್ನು ದಾನವಾಗಿ ಕೊಟ್ಟಿವೆ. ಶಾಲಾ ಸುಧಾರಣಾ ಸಮಿತಿಗಳಿಗೆ ಶ್ರಮದಾನ ಮಾಡಲಿಕ್ಕೆ ವಿನಂತಿ ಮಾಡಿದ್ದೆನೆ ಎಂದು ಜೋಶಿ ತಿಳಿಸಿದರು. 

ಇದನ್ನೂ ಓದಿ: ಕೋಟಿ ಕಂಠ ಗಾಯನ, ಕಂಠೀರವ ಸ್ಟೇಡಿಯಂನಲ್ಲಿ 50 ಸಾವಿರ ಮಂದಿ ಗಾನ ಸುಧೆ

ಹಿಂದಿ ಹೇರಿಕೆ ವಿಚಾರವಾಗಿ ಮಾತನಾಡಿದ ಅವರು ಭಾರತ ಸರಕಾರ ಎನ್‌ಇಪಿಯಲ್ಲಿ ಕನ್ನಡ  ಭಾಷೆಯಲ್ಲಿ ಇಂಜಿನಿಯರಿಂಗ್‌, ಮೆಡಿಕಲ್ ಸೇರಿದಂತೆ ಎಲ್ಲ ಕೋರ್ಸಗಳನ್ನ ಕನ್ನಡದಲ್ಲಿ ಕಲಿಸಲು ಅವಕಾಶ ನೀಡಿದೆ. ಮೆಡಿಕಲ್ ಸೇರಿದಂತೆ ಎಲ್ಲ ಕೋರ್ಸ್‌ಗಳು ಕನ್ನಡ ಭಾಷೆಯಲ್ಲಿ ಲಭ್ಯವಾಗಿಸಲು ಕೇಂದ್ರ ಸರಕಾರ ಆದ್ಯತೆ ಕೊಡುತ್ತಿದೆ. ಕೆಲವರಿಗೆ ಮಾಡಲಿಕ್ಕೆ ಕೆಲಸವಿಲ್ಲ, ಅವರಿಗೆ ಬೇರೆ ವಿಚಾರಗಳಿಲ್ಲ, ಅನಗತ್ಯವಾಗಿ ಹಿಂದಿ ಹೇರಿಕೆ ಅಂತಾರೆ, ಹಿಂದಿ ಹೇರಿಕೆ ನೆಪದಲ್ಲಿ ಇಂಗ್ಲೀಷ್‌ಗೆ ಪ್ರಾತಿನಿಧ್ಯ ಕೊಡ್ತಾ ಇದಾರೆ. ಕನ್ನಡ ಬೆಳೆಯಲಿಕ್ಕೆ ಬಿಡ್ತಾ ಇಲ್ಲ‌ ಎಂದು ಜೋಶಿ ಕಿಡಿಕಾರಿದರು.

ಅಭೂತಪೂರ್ವ ಸ್ಪಂದನೆ: ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಕಾರ್ಯಕ್ರಮಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಂಡಿದ್ದರು. ವಿದ್ಯಾರ್ಥಿಗಳು, ಜನಪ್ರತಿನಿಧಿಗಳು, ಕನ್ನಡ ಸಂಘಗಳ ಸದಸ್ಯರು ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಯಶಸ್ವಿಯಾಗಿ ಕಾರ್ಯಕ್ರಮ ನೆರವೇರಿದೆ ಎಂದು ಜೋಶಿ ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕರಾದ  ಅರವಿಂದ ಬೆಲ್ಲದ, ಅಮೃತ ದೇಸಾಯಿ, ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ,  ಜಿಪಂ ಸಿಇಒ ಡಾ.ಸುರೇಶ ಇಟ್ನಾಳ, ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್, ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ ಯಶಪಾಲ ಕ್ಷೀರಸಾಗರ, ಉಪವಿಭಾಗಾಧಿಕಾರಿ ಅಶೋಕ ತೇಲಿ, ತಹಸಿಲ್ದಾರ ಸಂತೋಷ ಹಿರೇಮಠ, ಸರಕಾರಿ ನೌಕರ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಎಫ್.ಸಿದ್ದನಗೌಡರ, ಪ್ರಧಾನ ಕಾರ್ಯದರ್ಶಿ ಎಸ್.ಜಿ.ಸುಬ್ಬಾಪುರಮಠ, ಕೆಸಿಡಿ ಪ್ರಾಚಾರ್ಯಡಾ.ಡಿ.ಬಿ.ಕರಡೋಣಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಮುಖಂಡರು  ಉಪಸ್ಥಿತರಿದ್ದರು.

click me!