ಈ ಊರಿನ ಯುವಕರು ಡಿಜೆ ಅಬ್ಬರಕ್ಕೆ ಬೇಕ್, ಅದೇ ಹಣದಿಂದ ಸರ್ಕಾರಿ ಶಾಲೆಗೆ ಬಣ್ಣ ತುಂಬಿದರು!

Kannadaprabha News   | Kannada Prabha
Published : Sep 22, 2026, 06:56 AM IST
Kinnal youth Ganesh visarjana

ಸಾರಾಂಶ

ಕೊಪ್ಪಳದ ಕಿನ್ನಾಳ ಗ್ರಾಮದ ಯುವಕರು ಗಣೇಶೋತ್ಸವದಲ್ಲಿ ಡಿಜೆ ಮತ್ತು ಅದ್ಧೂರಿ ಮೆರವಣಿಗೆಗೆ ಹಣ ಖರ್ಚು ಮಾಡುವ ಬದಲು ವಿಭಿನ್ನವಾಗಿ ಆಚರಿಸಿದ್ದಾರೆ. ಕಾಮನಕಟ್ಟಿ ಗೆಳೆಯರ ಬಳಗದ ಯುವಕರು ಎರಡು ಸರ್ಕಾರಿ ಶಾಲೆಗಳ ಆವರಣವನ್ನು ಸ್ವಚ್ಛಗೊಳಿಸಿ, ಕಾಂಪೌಂಡ್‌ಗೆ ಬಣ್ಣ ಬಳಿದು ಮಾದರಿಯಾಗಿದ್ದಾರೆ.

ಕೊಪ್ಪಳ (ಸೆ.22): ಗಣೇಶೋತ್ಸವವೆಂದರೆ ಡಿಜೆ ಸದ್ದಿನ ಅಬ್ಬರ, ಪಟಾಕಿ, ಅದ್ಧೂರಿ ಮೆರವಣಿಗೆ ಕಣ್ಣಿಗೆ ಬರುತ್ತದೆ. ಸಣ್ಣ ಮೆರಣವಿಗೆ ಎಂದುಕೊಂಡರೂ ಸುಮಾರು ಒಂದು ಲಕ್ಷ ರೂಪಾಯಿ ಖರ್ಚಾಗುತ್ತೆ, ಇದಕ್ಕೆ ಬಹುಪಾಲು ಡಿಜೆ ಬಾಡಿಗೆಗೆ ಬೇಕು, ಗಣೇಶ ಮೂರ್ತಿ ಬೆಲೆಗಿಂತ ಡಿಜೆಗೆ ಹೆಚ್ಚು ಖರ್ಚಾಗುತ್ತೆ. ಇಷ್ಟೆಲ್ಲ ಖರ್ಚು ಮಾಡಿದ್ಮೇಲೂ ಈ ಮೆರವಣಿಗೆಯಲ್ಲಿ ನುಸುಳುವ ಕಿಡಿಗೇಡಿಗಳು ಗಲಾಟೆ ಶುರು ಮಾಡುತ್ತಾರೆ. ಇದೆಲ್ಲ ಪ್ರತಿವರ್ಷದ ಮೆರವಣಿಗೆಯಲ್ಲಿ ನೋಡುತ್ತೇವೆ.

ಕಿನ್ನಾಳ ಗ್ರಾಮದ ಯುವಕರಿಂದ ವಿಭಿನ್ನ ಆಚರಣೆ

ಆದರೆ ಕೊಪ್ಪಳದ ಕಿನ್ನಾಳ ಗ್ರಾಮದ ಯುವಕರು ಈ ಬಾರಿಯೂ ಗಣೇಶ ಹಬ್ಬವನ್ನ ವಿಭಿನ್ನವಾಗಿ ಆಚರಿಸಿದ್ದು, ಡಿಜೆಗೆ ಖರ್ಚು ಮಾಡುವ ಬದಲು ತಮ್ಮೂರಿನ ಸರ್ಕಾರಿ ಶಾಲೆಗಳ ಸ್ವಚ್ಛತೆ, ಹೊಸ ಸ್ಪರ್ಶ ನೀಡುವ ಮೂಲಕ ಮಾದರಿಯಾಗಿದ್ದಾರೆ. ಕಿನ್ನಾಳ ಗ್ರಾಮದ ಕಾಮನಕಟ್ಟಿ ಗೆಳೆಯರ ಬಳಗದ ಹಿಂದೂ ಗಜಾನನ ಮಂಡಳಿಯ ಯುವಕರು ಕಳೆದ 3 ವರ್ಷಗಳಿಂದ ಈ ರೀತಿಯ ಮಾದರಿ ಕಾರ್ಯಕ್ಕೆ ಕೈಹಾಕಿದ್ದಾರೆ.

ಕಳೆದ ವರ್ಷ ರಸ್ತೆ ನಿರ್ಮಿಸಿಕೊಂಡಿದ್ದರು. ಈ ಬಾರಿ 2 ಸರ್ಕಾರಿ ಶಾಲೆಗಳ ಆವರಣ ಸ್ವಚ್ಛಗೊಳಿಸಿ, ಕಾಂಪೌಂಡ್‌ಗೆ ಬಣ್ಣ ಬಳಿಯುವ ಮೂಲಕ ಹೊಸ ವಾತಾವರಣ ನಿರ್ಮಿಸಿದ್ದಾರೆ. ಈ ಮೂಲಕ ಹಣವನ್ನು ಸದ್ಬಳಕೆಗೆ ಮಾದರಿಯಾಗಿದ್ದಾರೆ.

PREV
Read more Articles on
click me!

Recommended Stories

ರಾಜ್ಯಕ್ಕೆ ಬರಗಾಲ ಬಂದಿದ್ರೂ ಹೇಮಾವತಿಯಿಂದ ತಮಿಳನಾಡಿಗೆ ನೀರು! ನಿಮ್ಮ ಜಿಲ್ಲೆಯ ಜಲಾಶಯದ ಇಂದಿನ ನೀರಿನ ಮಟ್ಟ ಎಷ್ಟಿದೆ?
ಜಿಬಿಎ ಡ್ರೋನ್ ಸರ್ವೇ ಯಡವಟ್ಟು: ಬೆಂಗಳೂರು ಆಸ್ತಿ ಮಾಲೀಕರಿಗೆ ಡಬಲ್ ತೆರಿಗೆ ಶಾಕ್!