ನೆರೆ ಸಂತ್ರಸ್ತರಿಗೆ ಕೊಲ್ಲೂರು ದೇವಳದಿಂದ 1 ಕೋಟಿ ರು. ನೆರವು

By Kannadaprabha News  |  First Published Aug 16, 2019, 8:16 AM IST

ಕರಾವಳಿ ಸೇರಿ ರಾಜ್ಯದ ಹಲವು ಭಾಗಗಳಲ್ಲಿ ಸಂಭವಿಸಿದ ನೆರೆಯಿಂದಾಗ ಬಹಳಷ್ಟು ಜನ ಮನೆ, ತೋಟ ಬದುಕು ಹಳೆದುಕೊಂಡಿದ್ಧಾರೆ. ನೆರೆ ಸಂತ್ರಸ್ತರಿಗಾಗಿ ಜನರು ಸಾಮಾಗ್ರಿಗಳನ್ನು ಕಳುಹಿಸಿಕೊಡುತ್ತಿದ್ದಾರೆ. ಕೊಲ್ಲೂರಿನ ಮೂಕಾಂಬಿಕಾ ದೇವಾಲಯವೂ ಸಂತ್ರಸ್ತರಿಗಾಗಿ 1ಕೋಟಿ ರೂಪಾಯಿ ನೀಡುತ್ತಿದೆ.


ಮಂಗಳೂರು(ಆ.16): ಕರಾವಳಿ ಸೇರಿ ರಾಜ್ಯದ ಹಲವು ಭಾಗಗಳಲ್ಲಿ ಸಂಭವಿಸಿದ ನೆರೆಯಿಂದಾಗ ಬಹಳಷ್ಟು ಜನ ಮನೆ, ತೋಟ ಬದುಕು ಹಳೆದುಕೊಂಡಿದ್ಧಾರೆ. ನೆರೆ ಸಂತ್ರಸ್ತರಿಗಾಗಿ ಜನರು ಸಾಮಾಗ್ರಿಗಳನ್ನು ಕಳುಹಿಸಿಕೊಡುತ್ತಿದ್ದಾರೆ. ಕೊಲ್ಲೂರಿನ ಮೂಕಾಂಬಿಕಾ ದೇವಾಲಯವೂ ಸಂತ್ರಸ್ತರಿಗಾಗಿ 1ಕೋಟಿ ರೂಪಾಯಿ ನೀಡುತ್ತಿದೆ.

ರಾಜ್ಯದಲ್ಲಿ ಸುರಿದ ಭಾರಿ ಮಳೆ, ಪ್ರವಾಹ, ಭೂ ಕುಸಿತಕ್ಕೆ ಅಪಾರ ನಷ್ಟಸಂಭವಿಸಿದ್ದು ಸಂತ್ರಸ್ತರಿಗೆ ನೆರವು ನೀಡುವ ನಿಟ್ಟಿನಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ರು. ನೀಡಲಾಗುವುದು ಎಂದು ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್‌ ಕುಮಾರ್‌ ಎಂ. ಶೆಟ್ಟಿಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tap to resize

Latest Videos

undefined

ಕುಕ್ಕೆ ದೇಗುಲದಿಂದ 1 ಕೋಟಿ ನೆರವು

ರಾಜ್ಯದೆಲ್ಲೆಡೆಯಿಂದ ಸಂತ್ರಸ್ತರಿಗಾಗಿ ಬಟ್ಟೆ, ಆಹಾರ ಸೇರಿ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಪೋರೈಕೆ ಮಾಡಲಾಗುತ್ತಿದೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

click me!