ಕೊರೋನಾ ಓಡಿಸಲು ಕೊಳ್ಳೆಗಾಲದ ಜನರು ಮಾಡಿದ ಪ್ಲಾನ್ ಇದು

Kannadaprabha News   | Asianet News
Published : Sep 22, 2020, 03:19 PM IST
ಕೊರೋನಾ ಓಡಿಸಲು ಕೊಳ್ಳೆಗಾಲದ ಜನರು ಮಾಡಿದ ಪ್ಲಾನ್ ಇದು

ಸಾರಾಂಶ

ಕೊರೋನಾ ಓಡಿಸಲು ಈ ಊರಿನವರೇ ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದಾರೆ. ಈ ಮೂಲಕ ಕೋವಿಡ್‌ನಿಂದ ದೂರ ಉಳಿಯಲು ಎಚ್ಚೆತ್ತುಕೊಂಡಿದ್ದಾರೆ.

 ಕೊಳ್ಳೇಗಾಲ (ಸೆ.22): ಕೊರೋನಾ ಮಹಾಮಾರಿ ಎಫೆಕ್ಟ್ನಿಂದಾಗಿ ಕೊಳ್ಳೇಗಾಲ ಜನರಲ್‌ ಮರ್ಚೆಂಟ್ಸ್‌ ಅಸೋಸಿಯೇಷನ್‌ ವರ್ತಕರೆಲ್ಲರೂ ಮಧ್ಯಾಹ್ನದಿಂದಲೇ ಮುಂಜಾಗ್ರತೆ ಕ್ರಮಕೈಗೊಂಡು ಲಾಕ್‌ಡೌನ್‌ಗೆ ಮುಂದಾಗಿದ್ದಾರೆ.

ಕೊಳ್ಳೇಗಾಲ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಿಂದ ಕೊಳ್ಳೇಗಾಲಕ್ಕೆ ವ್ಯಾಪಾರಕ್ಕಾಗಿ ಬರುವ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳ ಕಾಣುತ್ತಿದೆ. 

ಏತನ್ಮದ್ಯೆ ಮಹಾಮಾರಿ ಕೊರೋನಾ ವೈರಸ್‌ ಸಹ ಕೊಳ್ಳೇಗಾಲದಲ್ಲಿ ಹೆಚ್ಚಳ ಕಾಣುತ್ತಿರುವ ಹಿನ್ನೆಲೆ ಹಾಗೂ ಕೊರೋನಾ ತಡೆಗಟ್ಟುವ ಮುಂಜಾಗ್ರತೆ ಹಿನ್ನೆಲೆಯಲ್ಲಿ ವರ್ತಕರು ಸಹಾ ಸಭೆ ಸೇರಿ ಬೆಳಗ್ಗೆ 8ರಿಂದ ಮಧ್ಯಾಹ್ನ 2.30ಕ್ಕೆ ವ್ಯಾಪಾರ, ವಹಿವಾಟು ಸ್ಥಗಿತಗೊಳಿಸಲು ತೀರ್ಮಾನಿಸಿದ್ದಾರೆ.

ಕರ್ನಾಟಕದಲ್ಲಿ ಕೊಂಚ ತಗ್ಗಿದ ಕೊರೋನಾ: ಸೋಮವಾರ ಗುಣಮುಖರಾದವರ ಸಂಖ್ಯೆಯೇ ಹೆಚ್ಚು..!

 ಈ ಸಂಬಂಧ ಸೋಮವಾರದಿಂದಲೇ ಎಲ್ಲ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿದ್ದಾರೆ. ಸೆ.21ರಿಂದ ಅಕ್ಟೋಬರ್‌ 4ತನಕ ಈ ನಿರ್ಣಯವನ್ನು ಚಾಚು ತಪ್ಪದೆ ಪಾಲಿಸಲು ಸಂಘದ ಸಭೆ ನಿರ್ಣಯಿಸಿದೆ. ಕೊರೋನಾ ತಡೆಗೆ ಸ್ವಯಂ ಪ್ರೇರಿತರಾಗಿ ವರ್ತಕರು ಕೈಗೊಂಡ ತೀರ್ಮಾನಕ್ಕೆ ನಾಗರೀಕರು ಹಾಗೂ ಜಿಲ್ಲಾಡಳಿತದಿಂದಲೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

PREV
click me!

Recommended Stories

ಧರ್ಮಸ್ಥಳ ನೂರಾರು ಶವ ಹೂಳಿದ ಕೇಸ್: ಬುರುಡೆ ಗ್ಯಾಂಗ್ ಷಡ್ಯಂತ್ರ ಬಯಲು - SIT ವರದಿಯಲ್ಲಿ ಒಬ್ಬರಿಗೆ ಕ್ಲೀನ್ ಚಿಟ್!
ಚಿಕ್ಕಬಳ್ಳಾಪುರದಲ್ಲಿ ಮಾನವ ಹಕ್ಕುಗಳ ದಿನಾಚರಣೆ: ಸಾವಿರಾರು ಜನರಲ್ಲಿ ನಾಯಕತ್ವ ಬಿತ್ತಿದ ನವಶಕ್ತಿ ನಾಟಕ