
ಬೇಲೂರು (ಸೆ.22) : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ ಇಂದು ಕಾಂಗ್ರೆಸ್ ಪಕ್ಷ ಸದೃಢವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೈ.ಎನ್.ಕೃಷ್ಣೇಗೌಡ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರಲ್ಲಿ ಯೂತ್ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಅತಿ ಹೆಚ್ಚಿನ ಯುವಕರನ್ನು ಗುರುತಿಸಿ ಪಕ್ಷ ಸಂಘಟನೆ ಮಾಡುವ ಮೂಲಕ ಸ್ಥಳೀಯ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಹುಟ್ಟುಹಾಕಿ ಇನ್ನೂ ಹೆಚ್ಚಿನ ಶಕ್ತಿ ತುಂಬಲು ಈ ಯೂತ್ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಪ್ರಾರಂಭಿಸಿದ್ದೇವೆ ಎಂದರು.
ಇಷ್ಟು ತರಾತುರಿ ಏಕೆ? ಭೂಸುಧಾರಣೆ ವಿಧೇಯಕಕ್ಕೆ ಬಿಜೆಪಿಯಲ್ಲೇ ವಿರೋಧ
ಕಾಂಗ್ರೆಸ್ ನಾಯಕರ ಒಮ್ಮತದಂತೆ ಯುವನಾಯಕರನ್ನು ಆದಷ್ಟುಪಕ್ಷಕ್ಕೆ ಕರೆಸಿಕೊಳ್ಳುವುದರಿಂದ ಪಕ್ಷಕ್ಕೆ ಇನ್ನಷ್ಟುಬಲ ಬರುತ್ತದೆ ಎಂಬ ಕಾರಣಕ್ಕೆ ನೊಂದಾವಣಿಯನ್ನು ಎಲ್ಲ ತಾಲೂಕು, ಜಿಲ್ಲೆ,ಹಾಗೂ ರಾಜ್ಯಮಟ್ಟದಲ್ಲಿ ಮಾಡುತ್ತಿದ್ದೇವೆ. ಯುವಕರಿದ್ದರೆ ಪಕ್ಷ ಸದೇಢವಾಗಿ ಬೆಳೆಯಲು ಸಾಧ್ಯ ಎಂದು ಹೇಳಿದರು.
ಈಗಿನ ತಾಲೂಕು ಯೂತ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಪುನೀತ್ ಅವರೂ ಕೂಡ ಹೆಚ್ಚಿನ ರೀತಿಯಲ್ಲಿ ಯುವಕರನ್ನು ಒಗ್ಗೂಡಿಸಿ ಕೆಲಸ ಮಾಡುತ್ತಿದ್ದಾರೆ.ಈ ಹಿಂದೆಯೂ ಕೂಡ ಅಧ್ಯಕ್ಷರಾಗಿದ್ದಾಗ ಅವರು ಸಲ್ಲಿಸಿದ್ದ ಸೇವೆಯು ಯಾವಾತ್ತೂ ಕೂಡ ನೆನಪಿನಲ್ಲಿಡಬೇಕಾಗಿದೆ ಎಂದರು.
ಕೆಪಿಸಿಸಿ ಸದಸ್ಯ ಬಿ.ಎಲ್.ಧರ್ಮೇಗೌಡ ಮಾತನಾಡಿ, ಈ ಹಿಂದೆ ಬೋರಣ್ಣಗೌಡರ ಕಾಲದಿಂದಲೂ ಕಾಂಗ್ರೆಸ್ ಪಕ್ಷ ಎಲ್ಲಿಯೂ ಕಳೆಗುಂದಿಲ್ಲ. ಅಹಿಂದಾ ವರ್ಗ, ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರಾಗಲಿ ಕಾಂಗ್ರೆಸ್ ಪಕ್ಷವನ್ನು ಎಂದೂ ಬಿಟ್ಟುಕೊಟ್ಟಿಲ್ಲ ಎಂದರು.
ತಾಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ ಪುನೀತ್ ಗೌಡ ಮಾತನಾಡಿ, ತಾಲೂಕಿನ ಎಲ್ಲ ಹೋಬಳಿ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಯುವಕರನ್ನು ಸಂಘಟಿಸಲಾಗುವುದು. ಒಂದು ಯುವಕರ ಪಡೆಯನ್ನು ರೆಡಿ ಮಾಡಿ ಒಂದು ಕಮಿಟಿ ರಚನೆ ಮಾಡುತ್ತೇವೆ. ಒಬ್ಬ ಬೂತ್ ಸದಸ್ಯ ಹಾಗೂ ನಾಲ್ಕು ಜನರನ್ನು ಪ್ರಾಥಮಿಕ ಸದಸ್ಯರನ್ನು ನೇಮಕ ಮಾಡಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಎನ್‌ಎಸ್‌ಯುಐ ಜಿಲ್ಲಾ ಅಧ್ಯಕ್ಷ ರಂಜೀತ್, ಕಾಂಗ್ರೆಸ್ ಮುಖಂಡರಾದ ಇಮ್ತಿಯಾಜ್, ಕಾಂತರಾಜು, ದಬ್ಬೆ ಸಂತೋಷ್, ಅರೇಹಳ್ಳಿ ತುಳಸೀದಾಸ್, ಎಂಡಿ ದಿನೇಶ್, ಶಂಬುಗನಹಳ್ಳಿ ಬಾಬು, ಗೋಪಿನಾಥ್, ಜೀವನ್, ಎಸ್.ಗೌಡ, ರಾಜು, ಸಮರ್ಥ, ಅಜಿತ್ ಇನ್ನಿತರರು ಹಾಜರಿದ್ದರು.