Chamarajanagar: ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ರಾಜ್ಯದಲ್ಲಿ ಏಳನೇ ಸ್ಥಾನ

By Kannadaprabha NewsFirst Published Sep 14, 2024, 7:08 PM IST
Highlights

ಸರ್ಕಾರಿ ಉಪವಿಭಾಗೀಯ ಆಸ್ಪತ್ರೆ ದೇಶದಲ್ಲೆ 67ನೇ ಸ್ಥಾನದಲ್ಲಿದ್ದು, ರಾಜ್ಯದಲ್ಲಿ 7ನೇ ಸ್ಥಾನಕ್ಕೆ ಭಾಜನವಾಗಿರುವುದು ಸಂತಸದ ವಿಚಾರ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಚಿದಂಬರ ಹೇಳಿದರು.

ಕೊಳ್ಳೇಗಾಲ (ಸೆ.14): ಸರ್ಕಾರಿ ಉಪವಿಭಾಗೀಯ ಆಸ್ಪತ್ರೆ ದೇಶದಲ್ಲೆ 67ನೇ ಸ್ಥಾನದಲ್ಲಿದ್ದು, ರಾಜ್ಯದಲ್ಲಿ 7ನೇ ಸ್ಥಾನಕ್ಕೆ ಭಾಜನವಾಗಿರುವುದು ಸಂತಸದ ವಿಚಾರ. ಈ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ರೀತಿಯ ಸೌಲಭ್ಯ ನೀಡುವ ಸಲುವಾಗಿ ಇಲ್ಲಿನ ವೈದ್ಯರು, ಸಿಬ್ಬಂದಿ ತಂಗುವುದಕ್ಕಾಗಿ ಹಾಸ್ಟೆಲ್ ನಿರ್ಮಾಣಕ್ಕೆ ಹಿರಿಯ ಅಧಿಕಾರಿಗಳು ಚರ್ಚಿಸಿದ್ದು ಈ ಹಿನ್ನೆಲೆ ಸೂಕ್ತ ಸ್ಥಳಾವಕಾಶ ಕಲ್ಪಿಸಿಕೊಡಬೇಕಿದ್ದು ಈ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಚಿದಂಬರ ಹೇಳಿದರು.

ಕೊಳ್ಳೇಗಾಲ ಉಪವಿಭಾಗೀಯ ಆಸ್ಪತ್ರೆಯಲ್ಲಿ ಹೈಟೆಕ್ ಒವರ್ ಹೆಡ್ ಟ್ಯಾಂಕ್, ವಸತಿ ಗೃಹಗಳ ದುರಸ್ತಿ ಕಾಮಗಾರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಇದೊಂದು ದೊಡ್ಡ ಆಸ್ಪತ್ರೆಯಾಗಿದೆ. ಇಲ್ಲಿಗೆ ಮಹದೇಶ್ವರ ಬೆಟ್ಟ, ತಮಿಳುನಾಡಿನ ಪ್ರದೇಶಗಳಿಂದಲೂ, ಯಳಂದೂರು ತಾಲೂಕು ಭಾಗಗಳಿಂದಲೂ ಅಸಂಖ್ಯಾತ ರೋಗಿಗಳು ಆಗಮಿಸುತ್ತಿದ್ದಾರೆ, ಮೈಸೂರು ಆಸ್ಪತ್ರೆಗಳಲ್ಲಿ ನಡೆಯುವಂತಹ ದೊಡ್ಡ ಮಟ್ಟದ ಶಸ್ತ್ರಚಿಕಿತ್ಸೆಗಳು ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಜರುಗುತ್ತಿವೆ, ಇಲ್ಲಿ ಅನೇಕ ಸೌಲಭ್ಯಗಳಿದ್ದು ರೋಗಿಗಳು ಪಡೆದುಕೊಳ್ಳುವಂತಾಗಬೇಕು ಎಂದರು.

Latest Videos

ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಬಿಜೆಪಿ, ಜೆಡಿಎಸ್‌ನವರಿಂದಲೇ ಕೋಮುಗಲಭೆ: ಸಚಿವ ಭೋಸರಾಜ್

ವೈದ್ಯಕೀಯ ಸಿಬ್ಬಂದಿ ತಂಗುವ ವಸತಿ ಗೃಹದ ಮಾದರಿಯಲ್ಲೆ ಹಾಸ್ಟೆಲ್ ನಿರ್ಮಾಣಕ್ಕೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಾದ ಹರ್ಷಗುಪ್ತ ಅವರು ಉತ್ಸುಕರಾಗಿದ್ದಾರೆ. ನನ್ನೊಡನೆ ಚರ್ಚಿಸಿದ್ದು ಹಾಸ್ಟೆಲ್ ನಿರ್ಮಾಣಮಾಡಿ ಮಹಿಳಾ ಸಿಬ್ಬಂದಿಗೆ ಮೊದಲ ಆದ್ಯತೆ ನೀಡುವುದು. ಹಾಸ್ಟೆಲ್ ಹೊಂದಿಕೊಂಡಂತೆ ಹೊಟೇಲ್ ನಿರ್ಮಾಣಕ್ಕೂ ಚಿಂತನೆ ಇದ್ದು ಸೂಕ್ತ ಸ್ಥಳಾವಕಾಶ ಸಿಗದಿದ್ದರೆ ಆಸ್ಪತ್ರೆಯ ಪ್ರಾಂಗಣದಲ್ಲೆ ಹಾಸ್ಟೆಲ್ ನಿರ್ಮಿಸುವ ಚಿಂತನೆ ಇದೆ ಎಂದರು.

ಇಲ್ಲಿನ ಆಸ್ಪತ್ರೆಗೆ ಹೆಚ್ಚಿನ ಸೌಲಭ್ಯ ಬೇಕು ಎಂಬುದು ನಮ್ಮೆಲ್ಲರ ಅಭಿಪ್ರಾಯ, ಜಿಲ್ಲಾ ಆಸ್ಪತ್ರೆಯಂತೆಯೆ ಆಧುನಿಕರಣಗೊಳಿಸುವ ನಿಟ್ಟಿನಲ್ಲಿ ಶಾಸಕ ಕೃಷ್ಣಮೂರ್ತಿ ಅವರು ಉತ್ಸುಕರಾಗಿದ್ದಾರೆ. ಇಂತಹ ಕಾಳಜಿಯ ಶಾಸಕರಿದ್ದರೆ ಜನರಿಗೆ ಉತ್ತಮ ಆರೋಗ್ಯ ಸೇವೆಗೆ ನಾವೆಲ್ಲರೂ ಮುಂದಾಗುತ್ತೆವೆ. ಇಲ್ಲಿಗೆ ರಕ್ತಘಟಕ (ಬ್ಲಡ್ ಬ್ಯಾಂಕ್) ಅಗತ್ಯವಿದೆ ಎಂದು ಶಾಸಕರು ಕೋರಿರುವ ಹಿನ್ನೆಲೆ ಆಸ್ಪತ್ರೆಗೆ ಉನ್ನತೀಕರಣಿಸಿ ಇಲ್ಲಿನ ಸೌಲಭ್ಯ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ನಾವು ಕಟಿಬದ್ದರಾಗಿದ್ದೇವೆ. ರೋಗಿಗಳು ಇಲ್ಲಿನ ಸೌಲಭ್ಯ ಬಳಕೆ ಮಾಡಿಕೊಳ್ಳಬೇಕು ಎಂದರು.

ಆರೋಗ್ಯವಂತರನ್ನಾಗಿಸಿ ರೋಗಿಗಳನ್ನು ಬೀಳ್ಕೂಟ್ಟರೆ ನಾವೇ ದೇವರು: ಕೊಳ್ಳೇಗಾಲ ಸಾರ್ವಜನಿಕ ಉಪವಿಭಾಗೀಯ ಆಸ್ಪತ್ರೆಗೆ ಆಗಮಿಸುವ ರೋಗಿಗಳನ್ನು ದಾಖಲು ಮಾಡಿಕೊಂಡು ಅವರಿಗೆ ಉತ್ತಮ ಆರೋಗ್ಯ ಸೇವೆ ನೀಡಿ ಕಳುಹಿಸಿದರೆ ಇಲ್ಲಿನ ವೈದ್ಯರೆ ರೋಗಿಗಳ ಪಾಲಿಗೆ ದೇವರಾಗುತ್ತಾರೆ ಎಂದು ಶಾಸಕ ಎಆರ್ ಕೃಷ್ಣಮೂರ್ತಿ ಹೇಳಿದರು. ಕೊಳ್ಳೇಗಾಲ ಆಸ್ಪತ್ರೆಯ ಆವರಣದಲ್ಲಿ ಆಯೋಜಿಸಿದ್ದ ಒವರ್ ಹೆಡ್ ಟ್ಯಾಂಕ್, ವಸತಿ ಗೃಹಗಳ ದುರಸ್ತಿ ಕಾಮಗಾರಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇದು ನಮ್ಮೆಲ್ಲರ ಪಾಲಿನ ಸುದಿನ, ಬಹಳ ದಿನಗಳ ಪ್ರಯತ್ನದ ಫಲವಾಗಿ ಇಲ್ಲಿ ಹೈಟೆಕ್ ಒವರ್ ಹೆಡ್ ಟ್ಯಾಂಕ್ ನಿರ್ಮಾಣವಾಗುತ್ತಿದೆ. 

ಜಿಲ್ಲಾಸ್ಪತ್ರೆಯಂತೆ ಇಲ್ಲಿಗಾಗಮಿಸುವ ರೋಗಿಗಳಿಗೆ ಸೌಲಭ್ಯ ಸಿಗಬೇಕು ಎಂಬ ನಿಟ್ಟಿನಲ್ಲಿ ಅನೇಕ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇಲ್ಲಿ ಡಯಾಲಿಸಿಸ್ ಯಂತ್ರದ ಕೊರತೆ ಮನಗಂಡು ಅದರ ಸಮಸ್ಯೆ ನಿವಾರಿಸಲಾಗಿದೆ. ಇಲ್ಲಿ ಸಮಸ್ಯೆಗಳು ಬಹಳ ಇವೆ, ವಸತಿ ಸೌಲಭ್ಯಕ್ಕೂ ಸಹಾ ನಾನು ಸರ್ಕಾರಕ್ಕೆ ಮನವಿ ಮಾಡಿದ್ದೇನೆ, ಇಂದು 65ಲಕ್ಷ ರು.ಗಳಲ್ಲಿ ಟ್ಯಾಂಕ್ ಮತ್ತು ದುರಸ್ತಿ ಕಾಮಗಾರಿಗೆ ಟೆಂಡರ್ ಆಗಿದೆ. ಉತ್ತಮ ಗುಣಮಟ್ಟದ ಕಟ್ಟಡ ನಿರ್ಮಾಣವಾಗಲಿ ಎಂಬುದು ನನ್ನ ಆಶಯ ಎಂದರು. ಇಲ್ಲಿನ ವೈದ್ಯರು ಉತ್ತಮ ರೀತಿ ಸೇವೆ ಸಲ್ಲಿಸುತ್ತಿರುವ ವಿಚಾರ ನನ್ನ ಗಮನದಲ್ಲಿದೆ, ಆದರೆ ಕೆಲವರು ತಡವಾಗಿ ಆಸ್ಪತ್ರೆಗೆ ಆಗಮಿಸುತ್ತಾರೆಂಬ ದೂರಿದೆ. 

ಈ ಬಗ್ಗೆ ಹಲವು ಬಾರಿ ಜಿಲ್ಲಾ ಆರೋಗ್ಯಾಧಿಕಾರಿಗಳ ಜೊತೆಯೂ ಚರ್ಚಿಸಿದ್ದೇನೆ. ಮುಂದಿನ ದಿನಗಳಲ್ಲಿ ಈ ರೀತಿ ದೂರುಗಳು ಬಾರದಿರಲಿ ಎಂದರು. ಕೊಳ್ಳೇಗಾಲದಲ್ಲಿ ಆರೋಗ್ಯ ಇಲಾಖೆ ಮತ್ತು ಸಚಿವ ದಿನೇಶ್ ಗುಂಡೂರಾವ್ ಅವರ ಸಹಕಾರದೊಂದಿಗೆ ಜರುಗಿದ ಆರೋಗ್ಯ ಮೇಳ ಯಶಸ್ವಿಯಾಗಿದೆ, 12ಸಾವಿರಕ್ಕೂ ಅಧಿಕ ಮಂದಿ ಶಿಬಿರದ ಪ್ರಯೋಜನ ಪಡೆದರೆ ನಾನೂರಕ್ಕೂ ಅಧಿಕ ವೈದ್ಯಕೀಯ ಸಿಬ್ಬಂದಿ ಪಾಲ್ಗೊಂಡಿದ್ದರು. ಈ ಶಿಬಿರ ಕೊಳ್ಳೇಗಾಲದಲ್ಲಿ ಯಶಸ್ವಿಯಾಗಿದ್ದಕ್ಕೆ ಸಂತಸವಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಸಚಿವರಿಗೆ ಅಭಿನಂದನೆ ಸಲ್ಲಿಸುವೆ ಎಂದರು.

ಕಾಂಗ್ರೆಸ್ ಗ್ಯಾರಂಟಿ ಯೋಜನೆ ಬಡವರ ಆಸರೆಯ ಬೆಳಕು: ಶಾಸಕ ಬೇಳೂರು ಗೋಪಾಲಕೃಷ್ಣ

ಈ ವೇಳೆ ನಗರಸಭೆ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷ ಎ.ಪಿ.ಶಂಕರ್, ಮನೋಹರ್, ಶಾಂತರಾಜು, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚಂದ್ರು, ಡಿಎಚ್ಒ ಡಾ.ಚಿದಂಬರ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಾಜಶೇಖರ್, ಪೌರಯುಕ್ತ ರಮೇಶ್, ಎಇಇ ಅಂಬರೀಷ್, ಇರ್ಫಾನ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಕುಮಾರಸ್ವಾಮಿ, ಇನ್ನಿತರರಿದ್ದರು. ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯ ಆರೋಗ್ಯ ಸಮಿತಿಗೆ ಆರೋಗ್ಯ ಡಯಾಲಿಸಿಸ್ ಸಮಸ್ಯೆಯುಳ್ಳ ಕುಮಾರಸ್ವಾಮಿಯವರನ್ನು ನೇಮಿಸಲಾಗಿದೆ. ಇಲ್ಲಿನ ತನಕ ಸಮಸ್ಯೆಗಳನ್ನು ಅವರೇ ನನ್ನ ಗಮನಕ್ಕೆ ತರುತ್ತಾರೆ. ಇಲ್ಲಿ ಸೂಕ್ತ ರೀತಿಯ ಸೇವೆ ಸಿಗುತ್ತಿದೆ, ಆದರೆ ವೈದ್ಯರು ವಿಳಂಬವಾಗಿ ಬರುತ್ತಾರೆ ಎಂಬ ದೂರಿದ್ದು ಈ ಸಂಬಂಧ ಹಿರಿಯ ಅಧಿಕಾರಿಗಳು ಗಮನಹರಿಸಬೇಕು.

click me!