ಕೋಲಾರ:  ಹೇಗೆ ಸತ್ತರೂ ಕರೋನಾ,  ಶರೀರ ಮಣ್ಣು ಮಾಡಲು ಬಿಡದ ಗ್ರಾಮಸ್ಥರು!

By Suvarna NewsFirst Published May 18, 2020, 5:12 PM IST
Highlights

ಮಹಿಳೆ ಪಾರ್ಥಿವ ಶರೀರ ಮಣ್ಣು ಮಾಡಲು ಬಿಡಲು ಗ್ರಾಮಸ್ಥರು/ ಕೋಲಾರ ಜಿಲ್ಲೆಯಲ್ಲಿ ಘಟನೆ/ ಬೆಂಗಳೂರಿನಲ್ಲಿ ಮೃತಪಟ್ಟಿದ್ದ ಮಹಿಳೆ/ ಹೃದಯಾಘಾತದಿಂದ ಸಾವನ್ನಪ್ಪಿದ್ದರು

ಕೋಲಾರ (ಮೇ 18)  ಕೋಲಾರ ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ನಡೆದುಹೋಗಿದೆ.  ಕೊರೊನಾ ಬಂದು ಸತ್ತಿದ್ದಾರೆ ಎಂದು ಪಾರ್ಥಿವ ಶರೀರವನ್ನು ಗ್ರಾಮಸ್ಥರು  ಮಣ್ಣು ಮಾಡಲು ಬಿಟ್ಟಿಲ್ಲ.  ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಅಡಕೆರೆ ಹಾಗೂ ಚೊಕ್ಕರೆಡ್ಡಿಪಲ್ಲಿ ಗ್ರಾಮಗಳಲ್ಲಿ ಘಟನೆ ನಡೆದಿದೆ.

ಹೃದಯಾಘಾತದಿಂದ ಮೃತ ಪಟ್ಟ ಮಹಿಳೆಯನ್ನು ಮಣ್ಣು ಮಾಡಲು ಗ್ರಾಮಸ್ಥರು ಬಿಟ್ಟಿಲ್ಲ.  ಕೊರೋನಾದಿಂದ ಮೃತ ಪಟ್ಟಿದ್ದಾಳೆ ಎಂದು ಶಂಕಿಸಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.  ಬೆಂಗಳೂರು ನಿವಾಸಿ ಅರುಣ(43) ಹೃದಯಾಘಾತದಿಂದ ಸಾವನ್ನಪ್ಪಿದ್ದರು.

ಲಾಕ್ ಡೌನ್ 4, ಕರ್ನಾಟಕದಲ್ಲಿ ಏನಿರುತ್ತೆ? ಏನಿರಲ್ಲ? 

ಮೊದಲು ಗಂಡನ ಮನೆ ಅಡಕೆರೆ ಗ್ರಾಮಕ್ಕೆ ಪಾರ್ಥಿವ ಶರೀರ ತಂದಾಗ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.  ಬಳಿಕ ಮೃತ ಅರುಣ ತವರು ಮನೆ ಚೊಕ್ಕರೆಡ್ಡಿಪಲ್ಲಿ ಗ್ರಾಮಕ್ಕೆ ಕರೆತಂದಾಗಲು ಇಲ್ಲೂ ಗ್ರಾಮಸ್ಥರು ವಿರೋಧಿಸಿದ್ದಾರೆ.  ಡೆತ್ ಸರ್ಟಿಫಿಕೇಟ್ ತೋರಿಸಿದರೂ ಗ್ರಾಮಗಳಲ್ಲಿ ಆಂಬ್ಯುಲೆನ್ಸ್ ನಿಲುಗಡೆಗೂ ಗ್ರಾಮಸ್ಥರು ಬಿಟ್ಟಿಲ್ಲ.

ಕೊನೆಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ವೈದ್ಯರು, ನರ್ಸ್ ಗಳು ಬಂದು ಮಣ್ಣು ಮಾಡಲು ಅವಕಾಶ. ಮೃತ ಮಹಿಳೆಯ ಪತಿ ಬೆಂಗಳೂರು HAL ನೌಕರ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.

click me!