ಸದ್ದಿಲ್ಲದೇ ಶ್ರೀರಾಮ ಶೋಭಾಯಾತ್ರೆಯಲ್ಲಿ ಮುತಾಲಿಕ್ ಪ್ರತ್ಯಕ್ಷ, ಪೊಲೀಸ್ರು ತಬ್ಬಿಬ್ಬು

By Suvarna NewsFirst Published Apr 10, 2022, 11:17 PM IST
Highlights

* ಶ್ರೀರಾಮಸೇನೆ ಕಾರ್ಯಕರ್ತರ ಮೇಲೆ ಎಸ್ಪಿ ಗರಂ
* ಶ್ರೀರಾಮನ ಶೋಭಾಯಾತ್ರೆಗೆ ಚಾಲನೆ ನೀಡಿದ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್,
* ಮತ್ತೊಂದೆಡೆ ಮುತಾಲಿಕ್ ಅವರನ್ನು ಸುತ್ತುವರೆದು ಎಚ್ಚರಿಕೆ ನೀಡಿದ ಕೋಲಾರ ಎಸ್ಪಿ, 

ವರದಿ ; ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್,ಕೋಲಾರ.

ಕೋಲಾರ, (ಏ.10): ಶ್ರೀರಾಮನವಮಿ ಅಂಗವಾಗಿ ಕೋಲಾರದಲ್ಲಿ ಹಲವು ವಿವಾದಗಳ ನಡುವೆ, ಆತಂಕದ ಮಧ್ಯೆ ಶ್ರೀರಾಮ ಶೋಭಾಯಾತ್ರೆ ನಡೆಯಿತು. ಪೊಲೀಸ್ ಬಿಗಿ ಬಂದೋಬಸ್ತ್ ನಡುವೆ ಶ್ರೀರಾಮನ ಭಕ್ತರು ಶೋಭಾಯಾತ್ರೆಯಲ್ಲಿ ಕುಣಿದು ಕುಪ್ಪಳಿಸಿದ್ರೆ, ಮುತಾಲಿಕ್ ಆಗಮನ ಪೊಲೀಸ್ ಇಲಾಖೆಯನ್ನ ತಬ್ಬಿಬ್ಬಾಗುವಂತೆ ಮಾಡಿತ್ತು.

ಹೌದು ಇವತ್ತು ಶ್ರೀರಾಮನವಮಿ ಪ್ರಯುಕ್ತ ಶ್ರೀರಾಮಸೇನೆ ಶ್ರೀರಾಮನಿಗೆ ವಿಶೇಷ ಪೂಜೆ ಹಾಗೂ ಶೋಭಾಯಾತ್ರೆ ಆಯೋಜನೆ ಮಾಡಿತ್ತು. ಆದರೆ ಶುಕ್ರವಾರ ಮುಳಬಾಗಿಲಿನಲ್ಲಿ ಶೋಭಾಯಾತ್ರೆ ಮೇಲೆ ದುಷ್ಕರ್ಮಿಗಳು ಕಲ್ಲುತೂರಾಟ ಪ್ರಕರಣವಾದ ಕಾರಣ ಶೋಭಾಯಾತ್ರೆಗೆ ನೀಡಿದ್ದ ಅನುಮತಿಯನ್ನು ಪೊಲೀಸರು ವಾಪಸ್ ಪಡೆದಿದ್ದರು. ಅದರೆ ಮತ್ತೆ ಶ್ರೀರಾಮಸೇನೆ ಮುಖಂಡರು ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡ ನಂತರ ಶೋಭಾಯಾತ್ರೆಗೆ ಅನುಮತಿ ನೀಡಲಾಯಿತು. 

ಧ್ವಜ ಹಾರಿಸಿದ್ದು, ದೇಶ ದ್ರೋಹ ಅಂದ್ರೆ ಪ್ರತಿ ದಿವಸ ದೇಶದ್ರೋಹ ಕೆಲಸ ಮಾಡ್ತೇನೆ: ಸಂಸದ ಮುನಿಸ್ವಾಮಿ

ಆದರೆ ಶೋಭಾಯಾತ್ರೆ ಇನ್ನೇನು ಆರಂಭವಾಗಬೇಕು ಎನ್ನುವಷ್ಟರಲ್ಲಿ ಯಾವುದೇ ಮುನ್ಸೂಚನೆ ನೀಡದೆ, ಅನುಮತಿ ಪಡೆಯದೆ ಶೋಭಾಯಾತ್ರೆ ಆಯೋಜನೆ ಮಾಡಿದ್ದ ಕೋಲಾರ ನಗರದ ಎಂ.ಜಿ.ರಸ್ತೆಯಲ್ಲಿ ಪ್ರಮೋದ್ ಮುತಾಲಿಕ್ ಪ್ರತ್ಯಕ್ಷವಾಗಿದ್ರು. ಪ್ರಮೋದ್ ಮುತಾಲಿಕ್‌ರನ್ನು ಕಂಡ ಅಲ್ಲಿದ್ದ ಪೊಲೀಸರು ಸೇರಿ ಎಲ್ಲರೂ ಆಶ್ಚರ್ಯಗೊಂಡರು. ಆದರೆ ಈ ಹಿಂದೆ ಪ್ರಮೋದ್ ಮುತಾಲಿಕ್ ಅವರಿಗೆ ಜಿಲ್ಲೆಯ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಭಂದ ವಿಧಿಸಿದ್ದ ಕಾರಣ ಅವರಿಗೆ ಶೋಭಾಯಾತ್ರೆಯಲ್ಲಿ ಭಾಗವಹಿಸಲು ಅವಕಾಶ ನೀಡದೆ ಕೇವಲ ಶ್ರೀರಾಮನಿಗೆ ಪೂಜೆ ಸಲ್ಲಿಸಿ 20 ನಿಮಿಷಗಳ ಕಾಲವಾಕಾಶ ಕೊಟ್ಟು ಪೊಲೀಸರು ವಾಪಸ್ ತೆರವಳುವಂತೆ ಸೂಚನೆ ನೀಡಿದ್ರು. 

ಮುತಾಲಿಕ್ ಶ್ರೀರಾಮನಿಗೆ ಪೂಜೆ ಸಲ್ಲಿಸಿ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕೇಸರಿ ಬಾವುಟ ಹಾರಿಸಿ ಭಾರತ್ ಮಾತಾಕಿ ಜೈ ಘೋಷಣೆ ಕೂಗಿ ಹೊರಟರು. ಇದೇ ವೇಳೆ ಮಾತನಾಡಿದ ಮುತಾಲಿಕ್, ಕೋಲಾರ ಪಾಕಿಸ್ತಾನದಲ್ಲಿಲ್ಲ ನಾನು ಕೋಲಾರಕ್ಕೆ ಬಾರದಂತೆ ನಿರ್ಭಂದ ವಿಧಿಸಲಾಗಿದೆ ಇದು ತಪ್ಪು ಯಾರು ಸಂಚು ಮಾಡಿ ಗಲಭೆ ಸೃಷ್ಟಿಸುತ್ತಾರೋ ಅವರನ್ನು ಬಂಧಿಸಬೇಕು ಎಂದರು.

 ಇನ್ನು ಪೊಲೀಸರ ಸೂಚನೆ ಮೇರೆಗೆ ಕೋಲಾರದಿಂದ ಪ್ರಮೋದ್ ಮುತಾಲಿಕ್ ವಾಪಸ್ ತೆರಳಿದ್ರು. ಅಷ್ಟೊತ್ತಿಗಾಗಲೇ ಶೋಭಾಯಾತ್ರೆಗೆ ಮಾಡಿಕೊಂಡಿದ್ದ ಸಿದ್ದತೆ ಹಿನ್ನೆಲೆ ಹಾಗೂ ನಗರದ ಎಂ.ಜಿ.ರಸ್ತೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ಮಾಡಿದ್ದ ಶ್ರೀರಾಮ ಮೂರ್ತಿಯನ್ನು ವಿಸರ್ಜನೆ ಮಾಡುವ ಸಲುವಾಗಿ ಎಂ.ಜಿ ರಸ್ತೆ ಮೂಲಕ, ಗಾಂಧಿ ಚೌಕ್, ಕಾಲೇಜು ವೃತ್ತ, ಬಂಗಾರಪೇಟೆ ವೃತ್ತದ ಮೂಲಕ ಶ್ರೀರಾಮ ಮೂರ್ತಿಯ ಮೆರವಣಿಗೆ ಹಾಗೂ ಶೋಭಾಯಾತ್ರೆ ನಡೆಯಿತು.

 ಕೋಲಾರ ಎಸ್ಪಿ ಡಿ.ದೇವರಾಜ್ ಸ್ವತ: ಬಂದೋಬಸ್ತ್ ಉಸ್ತುವಾರಿ ವಹಿಸಿಕೊಂಡು ಶೋಭಾಯಾತ್ರೆಗೆ ಅನುವು ಮಾಡಿಕೊಟ್ಟರು. ಈವೇಳೆ ಅಲ್ಲಿದ್ದ ಶ್ರೀರಾಮ ಸೇನೆ ಕಾರ್ಯಕರ್ತರು ಕುಣಿದು ಕುಪ್ಪಳಿಸಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು. ಶೋಭಾಯಾತ್ರೆ ಮದ್ಯದಲ್ಲಿ ಸಂಸದ ಮುನಿಸ್ವಾಮಿ ಹಾಗೂ ಶಾಸಕ ರಾಜೂಗೌಡ ಕೂಡ ಶಾಭಾಯಾತ್ರೆಯಲ್ಲಿ ಕೆಲ ಕಾಲ ಭಾಗವಹಿಸಿ ನಂತರ ನಿರ್ಗಮಿಸಿದರು. ಏನೇ ಆದ್ರೂ ಕಳೆದ ಮೂರು ದಿನಗಳಿಂದ ಕೋಲಾರ ಜಿಲ್ಲೆಯಲ್ಲಿ ಶೋಭಯಾತ್ರೆ ವಿವಾದ ಸಾಕಷ್ಟು ಆತಂಕಕ್ಕೆ ಕಾರಣವಾಗಿದ್ದು ಸಧ್ಯ ಕೋಲಾರ ಬೂದಿ ಮುಚ್ಚಿದ ಕೆಂಡದಂತ್ತಾಗಿದೆ.

ಇನ್ನು ಶೋಭಯಾತ್ರೆ ಯಲ್ಲಿ ಭಾಗವಹಿಸಲು ಅನುಮತಿ ನೀಡದೆ ವಾಪಸ್ಸು ಕಳುಹಿಸಿದಕ್ಕೆ ಪ್ರಮೋದ್ ಮುತಾಲಿಕ್ ಪೊಲೀಸರ ವಿರುದ್ಧ ಕಿಡಿಕಾರಿದ್ರು.ಕೋಲಾರ ಬಿಟ್ಟು ಹೊರಡುವ ವೇಳೆ ಮಾತನಾಡಿದ ಪ್ರಮೋದ್ ಮುತಾಲಿಕ್ ,ಕೋಲಾರ ಏನೂ ಪಾಕಿಸ್ತಾನದಲ್ಲಿ ಇಲ್ಲ.ಇದು ಸೂಕ್ಷ್ಮ ಪ್ರದೇಶ ಸಹ ಅಲ್ಲ. ಪಾಕಿಸ್ತಾನ ಏಜಂಟ್ ಇದ್ದ ಭಟ್ಕಳದಲ್ಲೇ ನಾನು ಸಭೆ ಮಾಡಿದ್ದೇನೆ.ನನ್ನನು ತಡೆಯುವ ಹಿಂದೆ ಯಾವುದೋ ಒಂದು ಶಕ್ತಿ ಇದೆ.ನನ್ನ ಜೊತೆ ಪೊಲೀಸರು ವರ್ತಿಸುತ್ತಿರೋದು ಸರಿ ಇಲ್ಲ. ಮುಂದಿನ ದಿನಗಳಲ್ಲಿ ಇದು ನಿಮ್ಮನ್ನು ನುಂಗುತ್ತೆ.ನೀವು ದೇಶ ಭಕ್ತಿ, ಸ್ವಾತಂತ್ರ್ಯ ಹಾಗೂ ಸಂವಿಧಾನವನ್ನು ತಡೆಯುತ್ತಿದೀರಿ.ನಿಮ್ಮ ದಾದಗಿರಿ ಹಾಗೂ ಮಾನಸಿಕ ಸ್ಥಿತಿ ಸರಿ ಇಲ್ಲ.ಮುಂದಿನ ದಿನಗಳಲ್ಲಿ ಬಹಳ ದೊಡ್ಡ ಹೋರಾಟ ಮಾಡ್ತೇನೆ ಎಂದು ಪೊಲೀಸರ ವಿರುದ್ಧ ಅಕ್ರೋಶ ಹೊರ ಹಾಕಿ ಪೊಲೀಸ್ ಭದ್ರತೆಯಲ್ಲಿ ಬೆಂಗಳೂರಿನ ಕಡೆ ತೆರಳಿದ್ರು.

ಒಟ್ನಲ್ಲಿ ಕಳೆದ 2 ದಿನಗಳಿಂದ ಹಲವು ವಿದಾದ ಗೊಂದಲಗಳನ್ನು ಸೃಷ್ಟಿ ಮಾಡಿದ್ದ ಕೋಲಾರದ ಶೋಭಾಯಾತ್ರೆ ಕೊನೆಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಡೆಯಿತು. ಕ್ಷಣ ಕ್ಷಣದ ಬದಲಾವಣೆಗಳನ್ನು ಪೊಲೀಸರು ಮಾತ್ರ ಅತಿ ಬುದ್ದಿವಂತಿಕೆಯಿಂದ ನಿಭಾಯಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದು ವಿಶೇಷ.

click me!