ಮನ ಪರಿವರ್ತನೆಗೆ ಕೋರ್ಟ್ ಮಾಸ್ಟರ್ ಪ್ಲಾನ್; ಕಳ್ಳರಿಗೆ ‘ಸಮಾಜ ಸೇವೆ’ ಶಿಕ್ಷೆ ಪ್ರಕಟ

Published : Oct 25, 2026, 07:58 AM IST
Rice Packet

ಸಾರಾಂಶ

ಮಾಲೂರು ಕೈಗಾರಿಕಾ ಪ್ರದೇಶದಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಅಂತಾರಾಷ್ಟ್ರೀಯ ಕಳ್ಳರನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇವರ ಮನಪರಿವರ್ತನೆಗಾಗಿ ನ್ಯಾಯಾಲಯವು ವಿಶೇಷ ಚೇತನರ ಆಶ್ರಮಕ್ಕೆ 75 ಕೆ.ಜಿ. ಅಕ್ಕಿ ನೀಡುವಂತೆ ವಿಶಿಷ್ಟ ಶಿಕ್ಷೆ ವಿಧಿಸಿದೆ.

ಕೋಲಾರ: (ಮಾಲೂರು) ಇಲ್ಲಿನ ನ್ಯಾಯಾಲಯವು ಕಳ್ಳತನ ನಡೆಸಿ ತಪ್ಪೋಪ್ಪಿಕೊಂಡ ಇಬ್ಬರು ಅಂತಾರಾಷ್ಟ್ರೀಯ ಕಳ್ಳರಿಗೆ ವಿಶೇಷ ಚೇತನರ ಆಶ್ರಮಕ್ಕೆ 75 ಕೆ.ಜಿ. ಅಕ್ಕಿ ನೀಡುವಂತೆ ಶಿಕ್ಷೆ ವಿಧಿಸಿದೆ.

ಇಲ್ಲಿನ ಕೈಗಾರಿಕಾ ಪ್ರದೇಶದ ಕಂಪನಿಯೊಂದರಲ್ಲಿ ಕಳ್ಳತನ ಮಾಡಿದ್ದ ತಮಿಳುನಾಡು ಮೂಲದ ಶಂಕರ್ ಅಲಿಯಾಸ್ ಸಂಗರ್ ಹಾಗೂ ವೀರಸ್ವಾಮಿ ಸ್ಥಳೀಯ ಪೊಲೀಸರಿಂದ ತನಿಖೆಗೆ ಒಳಗಾಗಿ ಬಂಧನದ ನಂತರ ಸ್ಥಳೀಯ ನ್ಯಾಯಾಲಯದಲ್ಲಿ ಇವರಿಬ್ಬರ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಬೆಲೆ ಬಾಳುವ ವಸ್ತುಗಳ ಕಳ್ಳತನ

ಈ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ವೇಳೆಯಲ್ಲಿ ಮಾಲೂರು ಕೈಗಾರಿಕಾ ಪ್ರದೇಶದ ಎನ್.ಪಿ.ಆರ್. ಕಂಪನಿಯ ಕಾಂಪೌಂಡ್ ಒಳಗೆ ನುಗ್ಗಿ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದರು.

ಈ ಸಂದರ್ಭದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕಿ (ಎಪಿಪಿ) ರೂಪ ಎಂ.ಎ. ಅವರು ವಾದ ಮಂಡಿಸಿ ಆರೋಪಿಗಳಿಗೆ ಪೂರ್ಣ ಪ್ರಮಾಣದ ಶಿಕ್ಷೆಯ ಜತೆಗೆ ಸಮಾಜಸೇವೆ ಮಾಡುವ ಸಮುದಾಯ ಶಿಕ್ಷೆ ವಿಧಿಸಬೇಕೆಂದು ಮನವಿ ಮಾಡಿದರು.

ಶೇಷಚೇತನ ನಂದಾದೀಪ ಟ್ರಸ್ಟ್‌ಗೆ 25 ಕೆ.ಜಿ.ಯ 3 ಅಕ್ಕಿ ಮೂಟೆ

ವಾದ- ಪ್ರತಿವಾದ ಆಲಿಸಿದ ಮಾಲೂರಿನ 2ನೇ ಹೆಚ್ಚುವರಿ ಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ನಿತೀನ್ ಕುವೆಲ್ಲೂ ಅವರು ಆ.14 ರಂದು ಆರೋಪಿಗಳು ತಮ್ಮ ತಪ್ಪಿನ ಅರಿವು ಮಾಡಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಹಾಗೂ ಅವರಲ್ಲಿ ಮನ ಪರಿವರ್ತನೆ ಉಂಟಾಗಬೇಕು ಎಂಬ ಉದ್ದೇಶದಿಂದ ಪಟ್ಟಣದ ಅಂಗವಿಕಲ ಮತ್ತು ವಿಶೇಷಚೇತನ ನಂದಾದೀಪ ಟ್ರಸ್ಟ್‌ಗೆ 25 ಕೆ.ಜಿ.ಯ 3 ಅಕ್ಕಿ ಮೂಟೆಗಳನ್ನು ನೀಡುವಂತೆ ಸಮುದಾಯದ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

ಇದನ್ನೂ ಓದಿ: ಮಾತೃತ್ವ ರಜೆಯನ್ನು ಅನಧಿಕೃತ ಗೈರುಹಾಜರಿಗೆ ಅಸ್ತ್ರವನ್ನಾಗಿ ಬಳಸುವಂತಿಲ್ಲ: ಕೋರ್ಟ್‌

PREV
Read more Articles on
click me!

Recommended Stories

ಬಿಎಂಟಿಸಿ ನೌಕರರ ಅಪಘಾತ ವಿಮಾ ಪರಿಹಾರ ಮೊತ್ತ 1 ಕೋಟಿ ರು.ಗೆ ಹೆಚ್ಚಳ; ಡೆಬಿಟ್‌ ಕಾರ್ಡಿನಿಂದ 15 ಲಕ್ಷ
ಆಂಧ್ರದಲ್ಲಿ ‘ಯಲಹಂಕ ಪ್ಯಾಲೇಸ್‌’ ಫೈಟ್‌! ಬೆಂಗಳೂರಿನ ಆಸ್ತಿಗಾಗಿ ಅಣ್ಣ-ತಂಗಿ ಫೈಟ್