ಬಿಎಂಟಿಸಿ ನೌಕರರ ಅಪಘಾತ ವಿಮಾ ಪರಿಹಾರ ಮೊತ್ತ 1 ಕೋಟಿ ರು.ಗೆ ಹೆಚ್ಚಳ; ಡೆಬಿಟ್‌ ಕಾರ್ಡಿನಿಂದ 15 ಲಕ್ಷ

Published : Oct 25, 2026, 07:33 AM IST
BMTC

ಸಾರಾಂಶ

ಪರಿಷ್ಕೃತ ನೂತನ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. 50 ಲಕ್ಷ ರು. ವಿಮಾ ಮೊತ್ತವನ್ನು 1 ಕೋಟಿ ರು.ಗೆ ಹೆಚ್ಚಿಸಲಾಗಿದೆ. ನೌಕರರು ಅಪಘಾತದಲ್ಲಿ ಮೃತಪಟ್ಟ ಸಂದರ್ಭದಲ್ಲಿ ಅವರ ನಾಮನಿರ್ದೇಶಿತರಿಗೆ 1 ಕೋಟಿ ರು. ವಿಮಾ ಪರಿಹಾರ ಮೊತ್ತ ದೊರೆಯುವಂತೆ ಮಾಡಲಾಗುತ್ತದೆ.

ಬೆಂಗಳೂರು: ಅಪಘಾತದಲ್ಲಿ ಮೃತಪಡುವ ಅಥವಾ ಅಂಗವಿಕಲರಾಗುವ ಬಿಎಂಟಿಸಿ ಸಿಬ್ಬಂದಿ ಮತ್ತು ಅವರ ಕುಟುಂಬದ ಅನುಕೂಲಕ್ಕಾಗಿ ಸಿಬ್ಬಂದಿ ಅಪಘಾತ ವಿಮಾ ಪರಿಹಾರ ಮೊತ್ತವನ್ನು 1 ಕೋಟಿ ರು. ಹೆಚ್ಚಳ ಮಾಡಿ ನಿಗಮವು ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.

ವಿಮಾ ಮೊತ್ತವನ್ನು 1 ಕೋಟಿಗೆ ಹೆಚ್ಚಳ

ನಿಗಮದ ನೌಕರರ ಅಪಘಾತ ವಿಮೆ ನೀಡುವ ಕುರಿತಂತೆ ಕಳೆದ 2023ರಲ್ಲಿ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಆ ವೇಳೆ ವಿಮಾ ಮೊತ್ತವನ್ನು 50 ಲಕ್ಷ ರು.ಗೆ ನಿಗದಿ ಮಾಡಲಾಗಿತ್ತು. ಇದೀಗ ಪರಿಷ್ಕೃತ ನೂತನ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. 50 ಲಕ್ಷ ರು. ವಿಮಾ ಮೊತ್ತವನ್ನು 1 ಕೋಟಿ ರು.ಗೆ ಹೆಚ್ಚಿಸಲಾಗಿದೆ. ನೌಕರರು ಅಪಘಾತದಲ್ಲಿ ಮೃತಪಟ್ಟ ಸಂದರ್ಭದಲ್ಲಿ ಅವರ ನಾಮನಿರ್ದೇಶಿತರಿಗೆ 1 ಕೋಟಿ ರು. ವಿಮಾ ಪರಿಹಾರ ಮೊತ್ತ ದೊರೆಯುವಂತೆ ಮಾಡಲಾಗುತ್ತದೆ.

ಡೆಬಿಟ್‌ ಕಾರ್ಡ್‌ 15 ಲಕ್ಷ ರು. ಪರಿಹಾರ

ಇನ್ನು, ಶಾಶ್ವತ ಮತ್ತು ಭಾಗಶಃ ಅಂಗವಿಕಲತೆ ಹೊಂದಿದ ನೌಕರರ ಪೈಕಿ 25 ಸಾವಿರ ರು.ಗಿಂತ ಕಡಿಮೆ ವೇತನ ಪಡೆಯುವವರಿಗೆ 1 ಕೋಟಿ ರು. ವಿಮೆ ಮತ್ತು ಡೆಬಿಟ್‌ ಕಾರ್ಡ್‌ ಮೂಲಕ 4 ಲಕ್ಷ ರು. ಹಾಗೂ 25 ಸಾವಿರ ರು.ಗಿಂತ ಹೆಚ್ಚಿನ ವೇತನ ಪಡೆಯುವವರಿಗೆ 1 ಕೋಟಿ ರು. ವಿಮೆ ಜತೆಗೆ ಡೆಬಿಟ್‌ ಕಾರ್ಡ್‌ 15 ಲಕ್ಷ ರು. ಪರಿಹಾರ ನೀಡಲಾಗುತ್ತದೆ.

ನೂತನ ಒಡಂಬಡಿಕೆಗೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಘುನಂದ ಮೂರ್ತಿ ಹಾಗೂ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಪ್ರಧಾನ ವ್ಯವಸ್ಥಾಪಕ ಎಚ್‌.ಟಿ. ವಾಸಪ್ಪ ಅವರು ಸಹಿ ಹಾಕಿದರು. ಬಿಎಂಟಿಸಿ ನಿರ್ದೇಶಕ ಅಬ್ದುಲ್‌ ಅಹದ್‌, ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಪಿ.ವೈ. ನಾಯಕ್‌ ಇತರರಿದ್ದರು.

PREV
Read more Articles on
click me!

Recommended Stories

ಆಂಧ್ರದಲ್ಲಿ ‘ಯಲಹಂಕ ಪ್ಯಾಲೇಸ್‌’ ಫೈಟ್‌! ಬೆಂಗಳೂರಿನ ಆಸ್ತಿಗಾಗಿ ಅಣ್ಣ-ತಂಗಿ ಫೈಟ್
ಸ್ಟಿಂಗ್‌ ಹಿಂದಿನ ಮಾಸ್ಟರ್ ಮೈಂಡ್ ಯಾರು? 2023ರ ವಿಡಿಯೋ ಈಗ ಬಿಟ್ಟಿದ್ದೇಕೆ ಅನ್ನೋದು ಗೊತ್ತಾಗಲೇಬೇಕು: ಯತೀಂದ್ರ ಬಿಗಿಪಟ್ಟು