Kolar ಗೋಮಾತೆ ಸಂರಕ್ಷಣೆಯೇ ನಮ್ಮ ಗುರಿ - ಚವಾಣ್

By Kannadaprabha News  |  First Published Nov 29, 2022, 6:00 AM IST

ಗೋ ಮಾತೆಯನ್ನು ಸಂರಕ್ಷಿಸುವುದು ಮತ್ತು ಯಾವುದೇ ಹಸು ಕಸಾಯಿಖಾನೆ ಪಾಲಾಗದಂತೆ ನೋಡಿಕೊಳ್ಳುವುದು ಸರ್ಕಾರ ಮತ್ತು ಇಲಾಖೆಯ ಗುರಿಯಾಗಿದೆ ಎಂದು ಪಶು ಸಂಗೋಪನಾ ಸಚಿವ ಫ್ರಭು.ಬಿ.ಚವ್ಹಾಣ್‌ ಹೇಳಿದರು.


ಮಾಲೂರು ( ನ. 29) : ಗೋ ಮಾತೆಯನ್ನು ಸಂರಕ್ಷಿಸುವುದು ಮತ್ತು ಯಾವುದೇ ಹಸು ಕಸಾಯಿಖಾನೆ ಪಾಲಾಗದಂತೆ ನೋಡಿಕೊಳ್ಳುವುದು ಸರ್ಕಾರ ಮತ್ತು ಇಲಾಖೆಯ ಗುರಿಯಾಗಿದೆ ಎಂದು ಪಶು ಸಂಗೋಪನಾ ಸಚಿವ ಫ್ರಭು.ಬಿ.ಚವ್ಹಾಣ್‌ ಹೇಳಿದರು.

ತಾಲೂಕಿನ ಶ್ರೀ ರಾಮಚಂದ್ರಪುರ ಮಠದ (Sri Ramachandrapura Mutt) ಯಲ್ಲಿ ಗೋಪೂಜೆ ಮಾಡಿ, ಬಳಿಕ ತಾಲೂಕಿನ ಇರಬನಹಳ್ಳಿ ಮತ್ತು ಅಂಗ ಶೆಟ್ಟಿಹಳ್ಳಿ ಗ್ರಾಮಗಳಿಗೆ ಭೇಟಿ ಮಾಡಿ ಚರ್ಮ ಗಂಟು ಕಾಯಿಲೆಯ ಕುರಿತು ಚರ್ಚಿಸಿ ಮಾತನಾಡಿದ ಅವರುವು ಬೇರೆ ರಾಜ್ಯಗಳಾದ ರಾಜಸ್ಥಾನ (Rajsthan) , ಗುಜರಾತ್‌, ಮಹರಾಷ್ಟ್ರದಿಂದ ಹೆಚ್ಚಾಗಿ ಬರುತ್ತಿದ್ದು, ಇಲಾಖೆಯ ಭಾಷೆಯಲ್ಲಿ ಇದು ಎಲ್‌ ಎಸ್‌ ಡಿ ಕಾಯಿಲೆಯಾಗಿದೆ. ಸರ್ಕಾರದ ಜತೆ ಮಾತನಾಡಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ, ಚುಚ್ಚುಮದ್ದನ್ನು ರಾಜ್ಯ, ಜಿಲ್ಲಾ, ತಾಲೂಕು ಮತ್ತು ಪ್ರತಿ ಗ್ರಾಮಕ್ಕೂ ತಲುಪುವಂತೆ ಏರ್ಪಾಟು ಮಾಡಲಾಗಿದೆ ಎಂದರು.

Latest Videos

undefined

ರಾಜ್ಯದಲ್ಲಿ 10,413 ಗೋವುಗಳು ಮೃತಪಟ್ಟಿವೆ. ಉಳಿದಂತೆ ಹಲವಾರು ಗೋವುಗಳು ಚೇತರಿಸಿಕೊಂಡಿದೆ. ತಾಲೂಕಿನಲ್ಲಿ 63 ಗೋವುಗಳು ಮೃತಪಟ್ಟಿದ್ದು, 95 ಗೋವುಗಳಿಗೆ ಕಾಯಿಲೆ ಹಬ್ಬಿದ್ದು, 893 ಗೋವುಗಳು ಚೇತರಿಸಿಕೊಂಡಿದೆ. ಶೇ.5ರಷ್ಟು ಚೇತರಿಕೆ ಕಂಡು ಬಂದಿದೆ. ಸಿಎಂ, ಇಲಾಖೆ ಸೇರಿಕೊಂಡು ಎಲ್‌ಎಸ್‌ಡಿ, ಎಫ್‌ ಎಂ ಡಿ ಚುಚ್ಚುಮದ್ದುಗಳನ್ನು ಒದಗಿಸಲಾಗಿದೆ. ಪಶುಇಲಾಖೆಯ ವೈದ್ಯರು ಸಮರ್ಪಕವಾಗಿ ಕಾರ್ಯ ನಿರ್ವಹಿಸಿ ಮತ್ತಷ್ಟು ಹತೋಟಿಗೆ ತರಬೇಕಾಗಿದೆ. ಮನೆ ಅಥವಾ ಗ್ರಾಮದಲ್ಲಿ ಚರ್ಮ ಗಂಟು ಕಾಯಿಲೆ ಕಂಡು ಬಂದಲ್ಲಿ ವೈದ್ಯರಿಗೆ, ಸಹಾಯ ಕೇಂದ್ರಕ್ಕೆ, ಸಹಾಯವಾಣಿ 1962ಕ್ಕೆ ಕರೆ ಮಾಡಿದರೆ ವೈದ್ಯರು ಗ್ರಾಮಕ್ಕೆ ಭೇಟಿ ನೀಡಿ ಚಿಕಿತ್ಸೆ ನೀಡುತ್ತಾರೆ ಎಂದು ಹೇಳಿದರು.

ಗೋಹತ್ಯೆ ನಿಷೇಧದ ಬಳಿಕ 100 ಮಿತಿಯ ಗೋಶಾಲೆಗಳನ್ನು ತೆರೆಯಲಾಗಿದ್ದು, ರಾಜ್ಯದಲ್ಲಿ 30 ಸಾವಿರಕ್ಕಿಂತ ಹೆಚ್ಚು ಗೋವುಗಳ ರಕ್ಷಣೆಯಾಗಿದ್ದು, ಹೆಚ್ಚುವರಿ ಗೋವುಗಳನ್ನುಬೇರೆ ಗೋಶಾಲೆಗಳಿಗೆ ರವಾನೆ ಮಾಡಲಾಗುತ್ತಿದೆ. ಸರ್ಕಾರದಿಂದ 100 ಗೋಶಾಲೆಗಳನ್ನು ತೆರೆದು, 100 ಗೋವುಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಪ್ರಯೋಗಾಲಯ, ಸಹಾಯವಾಣಿ ಸೇರಿದಂತೆ ಗೋವುಗಳ ರಕ್ಷಣೆಗೆ ಸರ್ಕಾರ ಸಿದ್ದ. ನಮ್ಮ ಸರ್ಕಾರದ ಸಂಕಲ್ಪ ಗೋಮಾತೆಯ ರಕ್ಷಣೆ ಮತ್ತು ಕಸಾಯಿಖಾನೆಗೆ ತೆರಳದಂತೆ ನೋಡಿಕೊಳ್ಳುವುದಕ್ಕಾಗಿ ರಾಜ್ಯದಲ್ಲಿ ಗೋಹತ್ಯೆ ಜಾರಿ ಮಾಡಲಾಗಿದೆ ಎಂದರು.

ತಾಲೂಕು ಸೇರಿದಂತೆ ರಾಜ್ಯದಲ್ಲಿ ಪಶು ಇಲಾಖೆಯ ವೈದ್ಯರು ಮತ್ತು ಸಿಬ್ಬಂದಿಯ ಕೊರತೆಯಿದ್ದು, 400ಸ್ಥಾನಗಳನ್ನು ಭರ್ತಿ ಮಾಡಲು ಮುಂದಾದಾಗ ಕೆಲವರು ನ್ಯಾಯಾಲಯದ ಮೋರೆ ಹೋಗಿರುವುದರಿಂದ ನ.29ರಂದು ನ್ಯಾಯಾಲಯವು ಪ್ರಕರಣವನ್ನು ಕೈಗೆತ್ತಿಕೊಂಡು ತೀರ್ಪು ನೀಡಲಿದೆ. ಸರ್ಕಾರದ ಪರವಾಗಿ ಜಯ ಸಿಕ್ಕುವ ಭರವಸೆಯಿದೆ. ಯಾವುದೇ ಸರ್ಕಾರ ಹಸು ಖರೀದಿಸಲು ಹಣ ನೀಡುತ್ತಿರಲಿಲ್ಲ, ಬಿಜೆಪಿ ಸರ್ಕಾರ ಹಸು ಖರೀದಿಸಲು ಕೈಲಾದಷ್ಟುಹಣ ನೀಡುತ್ತಿದ್ದು, 50ಲಕ್ಷ ಚುಚ್ಚುಮದ್ದು ಕೊರತೆಯಿದೆ. ತಾಲೂಕಿನಲ್ಲಿ 1ಲಕ್ಷಕ್ಕೂ ಹೆಚ್ಚು ಲೀಟರ್‌ ಹಾಲು ಉತ್ಪಾದನೆಯಾಗುತ್ತಿದ್ದು, ಪ್ರಸ್ತುತ ಕುಂಠಿತವಾಗಿರುವುದು ಗಮನಕ್ಕೆ ಬಂದಿದೆ. ರಾಜ್ಯದಲ್ಲೂ ಹಾಲು ಉತ್ಪಾದನೆ ಕುಂಠಿತವಾಗಲು ಮುಖ್ಯ ಕಾರಣ ಎಫ್‌ಎಂಡಿ ಚುಚ್ಚುಮದ್ದು ನೀಡಿದ್ದು, ನ.24ರಂದು ಪೂರ್ಣಗೊಂಡ ಬಳಿಕ 10ರಿಂದ 15ದಿನಗಳ ಕಾಲ ಉತ್ಪಾದನೆ ಕುಂಠಿತವಾಗುತ್ತದೆ. ನಿರ್ವಹಣಾ ಗೋಶಾಲಾ ಯೋಜನೆ, ಕುರಿಗಳಿಗೆ ಎನ್‌ಸಿಟಿಸಿ ಯೋಜನೆ, ಪ್ರಾಣಿ ಸಹಾಯವಾಣಿ, ಜಿಲ್ಲೆಗಳಲ್ಲಿ ಗೋಶಾಲೆ, ಅಂಬ್ಯುಲೆನ್ಸ್‌ ವ್ಯವಸ್ಥೆ ಪ್ರತಿ ತಾಲೂಕಿಗೆ ನೀಡುವಂತಹ ಹೊಸ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆ.

ಪಶು ಇಲಾಖೆಯ ವಿಶೇಷಾಧಿಕಾರಿ ಡಾ.ಜಯಪ್ರಕಾಶ್‌, ಡಾ.ಭಾಸ್ಕರ್‌ನಾಯಕ್‌, ಜಿಲ್ಲಾ ಉಪನಿರ್ದೇಶಕ ಗಂಗಾತುಳಸಿರಾಮಯ್ಯ, ಸಹಾಯಕ ನಿದೆಶೕಶಕ ಡಾ.ವಿ.ನಾರಾಯಣಸ್ವಾಮಿ, ಪಶು ವೈದ್ಯಾಧಿಕಾರಿ ಡಾ.ಕೆ.ಸುಬ್ರಮಣಿ, ಗೋಶಾಲೆಯ ಅರವಿಂದಶರ್ಮಾ, ಕೃಷ್ಣಭಟ್‌, ಶಿವಕುಮಾರ್‌, ಅನಂತ್‌ ಇದ್ದರು. 

click me!