ಕೋಲಾರ (ಜು.30): ರಾಜ್ಯದ ಬಗ್ಗೆ ಕೋಡಿ ಮಠದ ಸ್ವಾಮೀಜಿ ಮತ್ತೆ ಆತಂಕಕಾರಿ ಭವಿಷ್ಯ ನುಡಿದಿದ್ದಾರೆ.
ಕೋಲಾರ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿಂದು ಭವಿಷ್ಯ ನುಡಿದ ಕೋಡಿ ಮಠದ ಶ್ರೀ ಶಿವಾನಂದ ಶ್ರೀಗಳು ಮುಂದಿನ ಕಾರ್ತಿಕ ಮಾಸದವರೆಗೆ ಜಲಗಂಡಾತರ ಇದೆ ಎಂದು ಎಚ್ಚರಿಸಿದ್ದಾರೆ.
ಕೋಡಿ ಶ್ರೀಗಳಿಂದ ಆಘಾತಕಾರಿ ಭವಿಷ್ಯ : ಸಂಕ್ರಾಂತಿ ಒಳಗೆ ಬಹುದೊಡ್ಡ ಅವಘಡ
ಕೊರೋನ ಇನ್ನೂ ಹೆಚ್ಚಾಗಲಿದೆ. ದೈವಕೃಪೆಯಿಂದ ಒಳ್ಳೆಯ ದಿನಗಳು ಬರಲಿವೆ. ಅಶುಭ ನುಡಿಗಳು ಈಗ ಬೇಡ. 'ಕುಂಭದಲ್ಲಿ ಗುರುಗೃಹ ಅಂದ್ರೆ ತುಂಬುವವು ಕೆರೆ ಕಟ್ಟೆ' ಜಲಗಂಡಾಂತರ ಇನ್ನೂ ಇದೆ ಎಂದು ಸ್ವಾಮೀಜಿ ನುಡಿದಿದ್ದಾರೆ.
ನೂತನ ಸಿಎಂ ಬಗ್ಗೆ ಈಗಲೇ ಏನನ್ನು ಹೇಳಬಾರದು. ಅವರ ಬಗ್ಗೆ ಏನನ್ನು ಅಶುಭ ನುಡಿಯಬಾರದು. ಕಾರ್ತಿಕ ಮಾಸ ಕಳೆಯಲಿ ಈ ಬಗ್ಗೆಯೂ ಭವಿಷ್ಯ ನುಡಿಯುತ್ತೇನೆ ಎಂದು ಆತಂಕದ ಸೂಚನೆಯನ್ನೆ ಕೋಡಿ ಮಠದ ಸ್ವಾಮೀಜಿ ನೀಡಿದರು.