ಕಾಂಗ್ರೆಸ್‌ ಕಡೆಗೆ ಜೆಡಿಎಸ್ ಮುಖಂಡನ ಒಲ​ವು

By Kannadaprabha News  |  First Published Dec 5, 2020, 3:43 PM IST

ಜೆಡಿಎಸ್ ಮುಖಂಡರೋರ್ವರು ಜೆಡಿಎಸ್‌ನತ್ತ ಒಲವು ತೋರಿಸಿದ್ದಾರೆ.  ಕಾಂಗ್ರೆಸ್‌ಗೆ ಸೆರ್ಪಡೆಗೊಳ್ಳು ಸಿದ್ಧರಾಗಿದ್ದಾರೆನ್ನಲಾಗಿದೆ. 


ಮಡಿ​ಕೇ​ರಿ (ಡಿ.05):  ಕುಶಾಲನಗರ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್‌ ಸದಸ್ಯರು ಬಿಜೆಪಿಗೆ ಬೆಂಬಲ ಸೂಚಿಸಲು ಮಾಜಿ ಸಚಿವ ಜೀವಿಜಯ ಕಾರಣವೆಂದು ಆರೋಪಿಸಿರುವ ಜೆಡಿಎಸ್‌ ಜಿಲ್ಲಾಧ್ಯಕ್ಷ ಕೆ. ಎಂ. ಗಣೇಶ್‌, ಸೂಕ್ತ ಸಮಯದಲ್ಲಿ ಈ ಸಂಬಂಧ ವೀಡಿಯೋ ಬಿಡುಗಡೆಗೊಳಿಸುವುದಾಗಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿ​ಎಸ್‌ ಜಿಲ್ಲಾಧ್ಯಕ್ಷ ಕೆ. ಎಂ. ಗಣೇಶ್‌, ಮಾಜಿ ಸಚಿವ ಜೀವಿಜಯ ಅವರನ್ನು ನಮ್ಮ ನಾಯಕರೆಂದೇ ಭಾವಿಸಿದ್ದೇವು. ಆದರೆ, ಈಗ ಅವರು ಕಾಂಗ್ರೆಸ್‌ನತ್ತ ಮುಖ ಮಾಡುತ್ತಿದ್ದು, ಜೆಡಿಎಸ್‌ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಜೆಡಿಎಸ್‌ ಬಿಜೆಪಿಗೆ ಬೆಂಬಲ ಸೂಚಿಸಲಿದೆ ಎಂಬಂತೆ ಬಿಂಬಿಸಲು ಕುಶಾಲನಗರ ಪ. ಪಂ. ಯಲ್ಲಿ ಜೆಡಿಎಸ್‌ ಸದಸ್ಯರಿಗೆ ಬಿಜೆಪಿಗೆ ಬೆಂಬಲ ಸೂಚಿಸಲು ಜೀವಿಜಯ ಅವರೇ ಹೇಳಿದ್ದಾರೆ. ಈ ಸಂಬಂಧ ವಿಡಿಯೋ ಸಾಕ್ಷಿಗಳು ದೊರೆತಿದ್ದು, ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದರು.

Tap to resize

Latest Videos

ಕಾಂಗ್ರೆಸ್ ಮುಖಂಡರಿಗೆ ಡಿ.ಕೆ.ಶಿವಕುಮಾರ್ ಸವಾಲ್ ...

ಕೊಡಗು ಕಾಂಗ್ರೆಸ್‌ ಒಡೆದ ಮನೆಯಾಗಿದ್ದು, ಮನೆಯೊಂದು ನೂರು ಬಾಗಿಲಾಗಿದೆ.ಜಿಲ್ಲೆಯಲ್ಲಿ ಕಾಂಗ್ರೆಸ್‌ ನಿಷ್ಕಿ್ರಯಗೊಂಡಿದ್ದು, ಪಕ್ಷ ಸಂಘಟಿಸುವ ಶಕ್ತಿಯಿಲ್ಲದೆ ಜೆಡಿಎಸ್‌ ನಾಯಕರನ್ನು ಸೆಳೆಯುತ್ತಾ ಬಂದಿದೆ ಎಂದು ದೂರಿ​ದರು.

ಮಡಿಕೇರಿ ಕ್ಷೇತ್ರದ ಅಧ್ಯಕ್ಷ ಎಚ್‌. ಆರ್‌. ಸುರೇಶ್‌ ಮಾತನಾಡಿ, ಜೆಡಿಎಸ್‌ ಅಧಿಕಾರದಲ್ಲಿದ್ದ ಸಂದರ್ಭ ಕೊಡಗಿಗೆ ನೀಡಿದ ಕೊಡುಗೆಗಳಿಂದ ಗ್ರಾ. ಪಂ. ಚುನಾವಣೆಯಲ್ಲಿ ಕಳೆದ ಬಾರಿಗಿಂತಲೂ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದೇವೆ. ಯಾರು ಪಕ್ಷದಲ್ಲಿ ಇದ್ದರೂ ಹೋದರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸುವುದಾಗಿ ತಿಳಿಸಿದರು.

ಜೆಡಿಎಸ್‌ ರಾಜ್ಯ ಸಂಘಟನಾ ಕಾರ್ಯದರ್ಶಿ ಪಿ.ಎ. ಯೂಸೂಪ್‌, ಜಿಲ್ಲಾ ಉಪಾಧ್ಯಕ್ಷ ಪಾಣತ್ತಲೆ ವಿಶ್ವನಾಥ್‌, ಪ್ರಧಾನ ಕಾರ್ಯದರ್ಶಿ ರಾಜೇಶ್‌, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ವಿಜಯ ಇದ್ದ​ರು.

click me!