ಕೊಡಗು ಭಾರೀ ಮಳೆ ಕೈಹಿಡಿದ ಕಾವೇರಿ: ಹಾರಂಗಿ ಜಲಾಶಯ ಬಹುತೇಕ ಭರ್ತಿ, ನಾಳೆ ನದಿಗೆ ನೀರು ಬಿಡುಗಡೆ!

Published : Jul 24, 2026, 04:14 PM IST
Harangi Dam Kodagu

ಸಾರಾಂಶ

ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಾರಂಗಿ ಜಲಾಶಯವು ಭರ್ತಿಯಾಗುವ ಹಂತ ತಲುಪಿದೆ. ಹೆಚ್ಚಿದ ಒಳಹರಿವಿನಿಂದಾಗಿ, ನಾಳೆ ಮಧ್ಯಾಹ್ನ ನದಿಗೆ ಸುಮಾರು 5,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದು, ಕಾವೇರಿ ನದಿ ಪಾತ್ರದ ಜನರಿಗೆ ಮುನ್ನೆಚ್ಚರಿಕೆ ನೀಡಿದ್ದಾರೆ.

ಕೊಡಗು (ಜು.24): ಕೊಡಗು ಜಿಲ್ಲೆಯ ಕಾವೇರಿ ಜಲಾನಯನ ಪ್ರದೇಶಗಳಲ್ಲಿ (Catchment Areas) ಸುರಿಯುತ್ತಿರುವ ಭಾರೀ ಮಳೆಯಿಂದಾಗಿ (Heavy Rains) ಕುಶಾಲನಗರದಲ್ಲಿರುವ ಪ್ರಸಿದ್ಧ ಹಾರಂಗಿ ಜಲಾಶಯ (Harangi Reservoir) ಬಹುತೇಕ ಭರ್ತಿಯಾಗುವ ಹಂತ ತಲುಪಿದೆ. ಜಲಾಶಯಕ್ಕೆ ಒಳಹರಿವು ಗಣನೀಯವಾಗಿ ಹೆಚ್ಚಿರುವುದರಿಂದ, ನಾಳೆ ಮಧ್ಯಾಹ್ನ 2 ಗಂಟೆಗೆ ನದಿಗೆ ನೀರು ಬಿಡುಗಡೆ ಮಾಡಲು ಜಲಾಶಯದ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಜಲಾಶಯಕ್ಕೆ ಭಾರೀ ಒಳಹರಿವು (Inflow Rises)

ಕೊಡಗಿನ ಬೆಟ್ಟಗುಡ್ಡಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಹಾರಂಗಿ ಜಲಾಶಯಕ್ಕೆ ಪ್ರಸ್ತುತ 4,500 ಕ್ಯೂಸೆಕ್ (Cusecs) ನೀರು ಹರಿದುಬರುತ್ತಿದೆ. ಇದರಿಂದಾಗಿ ಜಲಾಶಯದ ನೀರಿನ ಮಟ್ಟ ವೇಗವಾಗಿ ಏರಿಕೆಯಾಗುತ್ತಿದೆ.

ಹಾರಂಗಿ ಜಲಾಶಯದ ಇಂದಿನ ನೀರಿನ ಮಟ್ಟ (Harangi Dam Water Level Details):

  • ಗರಿಷ್ಠ ಮಟ್ಟ (Maximum Level): 2,859 ಅಡಿಗಳು (Feet)
  • ಇಂದಿನ ನೀರಿನ ಮಟ್ಟ (Present Water Level): 2,856 ಅಡಿಗಳು
  • ಪ್ರಸ್ತುತ ಒಳಹರಿವು (Inflow): 4,500 ಕ್ಯೂಸೆಕ್
  • ನದಿಗೆ ಹರಿಸಲಿರುವ ನೀರು (Expected Outflow): ಸುಮಾರು 5,000 ಕ್ಯೂಸೆಕ್

ಜಲಾಶಯದಲ್ಲಿ ಈಗಾಗಲೇ 2,856 ಅಡಿ ನೀರು ಸಂಗ್ರಹವಾಗಿದ್ದು, ಗರಿಷ್ಠ ಮಟ್ಟ ತಲುಪಲು ಇನ್ನು ಕೇವಲ 3 ಅಡಿ ಮಾತ್ರ ಬಾಕಿಯಿದೆ. ಸುರಕ್ಷತೆಯ ದೃಷ್ಟಿಯಿಂದ ಅಧಿಕಾರಿಗಳು ನಾಳೆ ಮಧ್ಯಾಹ್ನದಿಂದಲೇ ಸುಮಾರು 5,000 ಕ್ಯೂಸೆಕ್ ನೀರನ್ನು ನದಿಗೆ ಹರಿಸಲು ಸಜ್ಜಾಗಿದ್ದಾರೆ. ಹಾರಂಗಿ ಜಲಾಶಯದಿಂದ ನದಿಗೆ ನೀರು ಹರಿಸಲಿರುವ ಹಿನ್ನೆಲೆಯಲ್ಲಿ ಹಾರಂಗಿ ನೀರಾವರಿ ಇಲಾಖೆಯ (Irrigation Department) ಅಧಿಕಾರಿಗಳು ಕಾವೇರಿ ನದಿ ಪಾತ್ರದ ಜನರಿಗೆ ಮುನ್ನೆಚ್ಚರಿಕೆ ಸಂದೇಶ ನೀಡಿದ್ದಾರೆ.

ಅಧಿಕಾರಿಗಳ ಸೂಚನೆ:

'ಕಾವೇರಿ ನದಿ ಪಾತ್ರದಲ್ಲಿರುವ ಹಾಗೂ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಸಾರ್ವಜನಿಕರು ತಕ್ಷಣವೇ ಜಾಗರೂಕರಾಗಿರಬೇಕು. ನದಿಯತ್ತ ತೆರಳದಂತೆ ಹಾಗೂ ತಮ್ಮ ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯುವಂತೆ ಸೂಚಿಸಲಾಗಿದೆ. ಅಗತ್ಯ ಬಿದ್ದಲ್ಲಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಲು ಸಿದ್ಧರಿರಬೇಕು. ಹಾರಂಗಿ ಜಲಾಶಯ ಭರ್ತಿಯಾಗುತ್ತಿರುವುದು ಕೊಡಗು ಹಾಗೂ ಮೈಸೂರು ಭಾಗದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ್ದು, ಕಾವೇರಿ ಕೊಳ್ಳದ ಜಲಾಶಯಗಳ ನೀರಿನ ಮಟ್ಟದಲ್ಲೂ ಏರಿಕೆಯಾಗುವ ನಿರೀಕ್ಷೆಯಿದೆ.

PREV
Read more Articles on
click me!

Recommended Stories

ದೇಶದಲ್ಲೇ ಅತ್ಯಂತ ಜನಪ್ರಿಯ ಇಂಟರ್‌ಸಿಟಿ ಮಾರ್ಗವಾಗಿ ಹೊರಹೊಮ್ಮಿದ ಬೆಂಗಳೂರು-ಮೈಸೂರು
ಒಂದು ಹುಡುಗಿ ಕತೆ.. ಬೆಳಗಾವಿಯಲ್ಲಿ ಎರಡು ಗ್ರಾಮಗಳ ಯುವಕರಿಂದ ನಡು ರಸ್ತೆಯಲ್ಲಿ ಹೊಡೆದಾಟ..!