ಹಾಲು ಉತ್ಪಾದಕರು ಸಾಕಾಣಿಕೆ ಮಾಡುವ ಹಸುಗಳ ವಿಮೆಯನ್ನು ಮಾಡಿಸುವ ಮೂಲಕ ಹಸುಗಳು ಮೃತಪಟ್ಟಲ್ಲಿ ವಿಮಾ ಪರಿಹಾರ ಹಣವನ್ನು ಪಡೆದು ಮತ್ತೊಂದು ಹಸುವನ್ನು ಖರೀದಿಸಿ ಹಾಲನ್ನು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ನೀಡುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಲಾಗುವಂತೆ ಕೊಚಿಮುಲ್ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ಮಾಲೂರು (ಸೆ.03): ಹಾಲು ಉತ್ಪಾದಕರು ಸಾಕಾಣಿಕೆ ಮಾಡುವ ಹಸುಗಳ ವಿಮೆಯನ್ನು ಮಾಡಿಸುವ ಮೂಲಕ ಹಸುಗಳು ಮೃತಪಟ್ಟಲ್ಲಿ ವಿಮಾ ಪರಿಹಾರ ಹಣವನ್ನು ಪಡೆದು ಮತ್ತೊಂದು ಹಸುವನ್ನು ಖರೀದಿಸಿ ಹಾಲನ್ನು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ನೀಡುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಲಾಗುವಂತೆ ಕೊಚಿಮುಲ್ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ಪಟ್ಟಣದ ಶಿಬಿರ ಕಚೇರಿಯ ಸಭಾಂಗಣದಲ್ಲಿ ಮೃತಪಟ್ಟರಾಸುಗಳಿಗೆ ಒಕ್ಕೂಟದಿಂದ ವಿಮಾ ಪರಿಹಾರ ಹಣ ಹಾಗೂ ಗಾಯಗೊಂಡ ಹಾಲು ಉತ್ಪಾದಕರಿಗೆ ಪರಿಹಾರದ ಹಣದ ಚೆಕ್ಕುಗಳನ್ನು ವಿತರಿಸಿ ಮಾತನಾಡಿದ ಅವರು, ಹಾಲು ಉತ್ಪಾದಕರು ತಾಲೂಕಿನಲ್ಲಿ 40,000 ಹಸುಗಳನ್ನು ಸಾಕಾಣಿಕೆ ಮಾಡಿ ಹಾಲು ಉತ್ಪಾದನೆ ಮಾಡುತ್ತಿದ್ದು ಕೇವಲ 20 ಸಾವಿರ ಹಸುಗಳಿಗೆ ಮಾತ್ರ ವಿಮೆ ಮಾಡಿಸಿಕೊಂಡಿದ್ದಾರೆ ಹಾಲು ಉತ್ಪಾದಕರು ಕಡ್ಡಾಯವಾಗಿ ವಿಮೆ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
undefined
ಕನಕಪುರದಲ್ಲಿ ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಚಿಂತನೆ: ಸಚಿವ ಶರಣ ಪ್ರಕಾಶ್ ಪಾಟೀಲ್
ಒಕ್ಕೂಟದಿಂದ .200 ಕೋಟಿ ಠೇವಣಿ: ಹಾಲಿನ ದರ ಹೆಚ್ಚಳ, ಸವಲತ್ತುಗಳನ್ನು ನೀಡುವಲ್ಲಿ ರಾಜ್ಯದ ಎಲ್ಲ ಒಕ್ಕೂಟಗಳಲ್ಲಿ ಕೋಲಾರ ಒಕ್ಕೂಟವು ಪ್ರಥಮ ಸ್ಥಾನದಲ್ಲಿದೆ. ಸಂಘಗಳು ಲಾಭದಲ್ಲಿದ್ದು, ಹಾಲು ಉತ್ಪಾದಕರಿಗೆ ಬೋನಸ್ ನೀಡುತ್ತಿವೆ. 14 ಒಕ್ಕೂಟಗಳ ಪೈಕಿ ಕೋಲಾರ ಒಕ್ಕೂಟವು 200 ಕೋಟಿ ರು.ಗಳ ಠೇವಣಿಯನ್ನು ಇರಿಸಿದೆ. ಎಂವಿಕೆ ಗೋಲ್ಡನ್ ಡೇರಿ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು. ಚಿಂತಾಮಣಿ ಬಳಿ ಐಸ್ ಕ್ರೀಮ್ ಫ್ಯಾಕ್ಟರಿ ಮಾಡಲು ಆಡಳಿತ ಮಂಡಳಿ ತೀರ್ಮಾನಿಸಿದೆ. ಮಾಲೂರು ತಾಲೂಕಿನಲ್ಲಿ 44 ಬಿಎಂಸಿಗಳಲ್ಲಿ ಸೋಲಾರ್ ಪ್ಲಾಂಟ್ ಮಾಡಲು ನಿರ್ಧರಿಸಿದ್ದು, ಬಿಎಂಸಿಗಳಿಗೆ ಈಗಾಗಲೇ ಸೋಲಾರ್ ಪ್ಲಾಂಟ್ ಅಳವಡಿಸಲು ತಲಾ 10.5 ಲಕ್ಷ ರೂಗಳನ್ನು ಒಕ್ಕೂಟವು ಸಂಘಗಳಿಗೆ ನೀಡಿದೆ ಎಂದರು.
ಸಂಸದರಿಂದ ಸಲ್ಲದ ಆರೋಪ: ಎರಡು ಜಿಲ್ಲೆಯ ನಾಯಕರು ಆಡಳಿತ ಮಂಡಳಿ ಸಹಕಾರದಿಂದ ಉತ್ತಮ ಆಡಳಿತ ನೀಡಲಾಗುತ್ತಿದೆ. ಆದರೆ ಶಾಸಕರು ಈ ಭಾಗದ ಸಂಸದರು ತಮ್ಮ ಮೇಲೆ ಇಲ್ಲಸಲ್ಲದ ಆರೋಪಗಳು ಮಾಡಿ ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಮುಂಬರುವ ದಿನಗಳಲ್ಲಿ ರಾಜಕೀಯ ಭವಿಷ್ಯ ಇಲ್ಲ ಎಂದರು.
ಮಳೆಗಾಗಿ ಮಕ್ಕಳಿಗೆ ಮದುವೆ: ಹಳೆಯ ಸಂಪ್ರದಾಯದ ಮೊರೆ ಹೋದ ಗ್ರಾಮಸ್ಥರು
ಕಾರ್ಯಕ್ರಮದಲ್ಲಿ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಾ.ಲೋಹಿತ್, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ವಿ ಮುನೇಗೌಡ, ಕೆಪಿಸಿಸಿ ಸದಸ್ಯ ಅಂಜನಿ ಸೋಮಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜಿ.ಮಧುಸೂದನ್, ಪುರಸಭಾ ಸದಸ್ಯ ಮುರುಳಿಧರ್, ಶಿವಾರಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನೇಗೌಡ, ಶಿಬಿರ ಕಚೇರಿಯ ವಿಸ್ತರಣಾಧಿಕಾರಿಗಳಾದ ಆರ್.ನಾರಾಯಣಸ್ವಾಮಿ, ಕರಿಯಪ್ಪ, ಶಿವಕುಮಾರ್, ಮನೋಹರ ರೆಡ್ಡಿ, ಹುಲ್ಲೂರಪ್ಪ, ವೆಂಕಟೇಶ್, ದ್ಯಾಪಸಂದ್ರ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ನಾರಾಯಣಗೌಡ, ಇನ್ನಿತರರು ಹಾಜರಿದ್ದರು.