ರೈತರಿಗೆ ಸಂತಸದ ಸುದ್ದಿ, ಪಶು ಆಹಾರ ಬೆಲೆ ಇಳಿಕೆ..!

Kannadaprabha News   | Asianet News
Published : Feb 01, 2020, 11:39 AM IST
ರೈತರಿಗೆ ಸಂತಸದ ಸುದ್ದಿ, ಪಶು ಆಹಾರ ಬೆಲೆ ಇಳಿಕೆ..!

ಸಾರಾಂಶ

ಹೈನುಗಾರರಿಗೆ ಕೆಎಂಎಫ್ ಸಂತಸದ ಸುದ್ದಿ ಕೊಟ್ಟಿದೆ. ರಾಜ್ಯದ ಹಾಲು ಉತ್ಪಾದಕ ರೈತರಿಗೆ ಹಾಲು ಉತ್ಪಾದನೆ ವೆಚ್ಚ ಕಡಿಮೆ ಮಾಡುವ ಸಲುವಾಗಿ ಪಶು ಆಹಾರದ ಮಾರಾಟ ಬೆಲೆಯನ್ನು ಕಡಿಮೆ ಮಾಡಲಾಗಿದೆ.

ಬೆಂಗಳೂರು(ಫೆ.01): ರಾಜ್ಯದ ಹಾಲು ಉತ್ಪಾದಕ ರೈತರಿಗೆ ಹಾಲು ಉತ್ಪಾದನೆ ವೆಚ್ಚ ಕಡಿಮೆ ಮಾಡುವ ಸಲುವಾಗಿ ಪಶು ಆಹಾರದ ಮಾರಾಟ ಬೆಲೆಯನ್ನು ಪ್ರತಿ ಟನ್‌ಗೆ 500 ರು. ಕಡಿಮೆ ಮಾಡಲಾಗುವುದು ಎಂದು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕ ಹಾಲು ಮಹಾಮಂಡಳಿಯು 5 ಪಶು ಆಹಾರ ಘಟಕಗಳಿಂದ ತಿಂಗಳಿಗೆ ಸರಾಸರಿ 52 ಸಾವಿರ ಟನ್‌ ಪಶು ಆಹಾರವನ್ನು ಉತ್ಪಾದನೆ ಮಾಡಿ ಹಾಲು ಉತ್ಪಾದಕರಿಗೆ ಮಾರಾಟ ಮಾಡುತ್ತಿದೆ. ಪ್ರಸ್ತುತ ರೈತರಿಗೆ ಹಾಲು ಉತ್ಪಾದನೆ ವೆಚ್ಚ ತಗ್ಗಿಸಿ ಉತ್ಪಾದನೆ ಹೆÜಚ್ಚಳಕ್ಕೆ ಪ್ರೋತ್ಸಾಹಿಸಲು ಫೆ.1 ರಿಂದ ಜಾರಿಗೆ ಬರುವಂತೆ ಪ್ರತಿ ಟನ್‌ಗೆ ಶಾಶ್ವತವಾಗಿ 500 ರು. ಕಡಿಮೆ ಮಾಡಲಾಗುವುದು ಎಂದು ತಿಳಿಸಿದರು.

ಬಿಎಸ್‌ವೈ ದ್ವೇಷದ ರಾಜಕಾರಣ: ಸಿಎಂ ವಿರುದ್ಧ ಡಿಕೆಶಿ ಆಕ್ರೋಶ

ಅಲ್ಲದೆ, ಫೆಬ್ರುವರಿ ಹಾಗೂ ಮಾಚ್‌ರ್‍ ತಿಂಗಳಲ್ಲಿ ಪ್ರತಿ ಟನ್‌ಗೆ 500 ರು. ಹೆಚ್ಚುವರಿ ರಿಯಾಯಿತಿಯನ್ನು ಸಹ ನೀಡಲು ನಿರ್ಧರಿಸಲಾಗಿದೆ. ಇದರಿಂದ ಈ ತಿಂಗಳುಗಳಲ್ಲಿ ಪ್ರತಿ ಟನ್‌ಗೆ 1 ಸಾವಿರ ರು. ಬೆಲೆ ಕಡಿಮೆ ಮಾಡಿದಂತಾಗಲಿದೆ. ಬೆಲೆ ಇಳಿಕೆಯಿಂದ ಕರ್ನಾಟಕ ಹಾಲು ಮಹಾಮಂಡಳಿಯು ಪ್ರತಿ ತಿಂಗಳು 5 ಕೋಟಿ ರು. ಮೊತ್ತದ ಲಾಭವನ್ನು ರಾಜ್ಯ ರೈತರಿಗೆ ನೀಡಿದಂತಾಗಲಿದೆ ಎಂದು ಮಾಹಿತಿ ನೀಡಿದರು.

1 ವರ್ಷದಲ್ಲಿ ಸಮಗ್ರ ಬದಲಾವಣೆ

ಕೆಎಂಎಫ್‌ ಅಧ್ಯಕ್ಷ ಹುದ್ದೆಗೆ ಎಷ್ಟುಸಮಯ ಕೊಟ್ಟರೂ ಸಾಕಾಗುವುದಿಲ್ಲ. ಮುಂದಿನ ಒಂದು ವರ್ಷದಲ್ಲಿ ಕೆಎಂಎಫ್‌ನಲ್ಲಿ ಆಮೂಲಾಗ್ರ ಬದಲಾವಣೆ ತರುತ್ತೇವೆ. ಕೆಎಂಎಫ್‌ನ ಪ್ರಕ್ರಿಯೆಗಳನ್ನೆಲ್ಲಾ ಆನ್‌ಲೈನ್‌ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಸದ್ಯದಲ್ಲೇ ಮಾಹಿತಿ ಒದಗಿಸಲಾಗುವುದು ಎಂದು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!