Vijayapura: ಮೂವರ ಮಕ್ಕಳೊಂದಿಗೆ ಮಹಿಳೆಯ ಅಪಹರಣ ಪ್ರಕರಣ: ಕೃತ್ಯದ ಹಿಂದೆ ಲವ್ ಜಿಹಾದ್ ಷಡ್ಯಂತ್ರ ಆರೋಪ!

By Suvarna News  |  First Published Jun 3, 2024, 9:16 PM IST

ಪಟ್ಟಣದ ಹಿಂದೂ ಸಮುದಾಯದ ಚಂದ್ರಭಾಗ ವಿಠ್ಠಲ ಹುಗ್ಗೆನವರ, ಆಕೆಯ ಮಕ್ಕಳಾದ ಪ್ರಥಮ, ಸಜನಿ, ಸಾನ್ವಿ ಎನ್ನುವವರ ಅಪಹರಣವಾಗಿದೆ. ಪ್ರಕರಣವಾಗಿ ಒಂದು ವರ್ಷವಾಗುತ್ತಿದ್ದರೂ ಅಪಹೃತರನ್ನು ಪತ್ತೆ ಮಾಡುವಲ್ಲಿ ಪೊಲೀಸ ಇಲಾಖೆ ವಿಫಲವಾಗಿದೆ ಎಂದರು.


ವಿಜಯಪುರ (ಜೂ.03): ಜಿಲ್ಲೆಯ ಕೊಲ್ಹಾರ ಪಟ್ಟಣದ ವಿವಾಹಿತ ದಲಿತ ಮಹಿಳೆ ಚಂದ್ರಭಾಗ ಹುಗ್ಗೆನವರ ಹಾಗೂ ಅವಳ ಮೂವರು ಮಕ್ಕಳನ್ನು ಮುಸ್ಲಿಂ ಸಮಾಜದ ಅಬ್ದುಲಗಫಾರ ಕಲಾದಗಿ ಎಂಬ ಯುವಕನೂರ್ವ ಅಪಹರಿಸಿರುವುದರ ಹಿಂದೆ ಲವ್ ಜಿಹಾದ್ ಷಡ್ಯಂತ್ರ ಎದ್ದು ಕಾಣುತ್ತಿದೆ ಎಂದು ಆರೋಪಿಸಿ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಆಕ್ರೋಶ ವ್ಯಕ್ತಪಡಿಸಿದರು.

ಲವ್ ಜಿಹಾದ್ ಆರೋಪ ; ಹಿಂದೂಪರ  ಸಂಘಟನೆ ಮುಖಂಡರ ಭೇಟಿ: ಕೊಲ್ಹಾರ ಪಟ್ಟಣದಲ್ಲಿ ಹಿಂದೂಪರ ಸಂಘಟನೆಯ ಮುಖಂಡರ ನಿಯೋಗದೊಂದಿಗೆ ಅಪಹರಣಕ್ಕೊಳಗಾದ ಮಹಿಳೆಯ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಟ್ಟಣದ ಹಿಂದೂ ಸಮುದಾಯದ ಚಂದ್ರಭಾಗ ವಿಠ್ಠಲ ಹುಗ್ಗೆನವರ, ಆಕೆಯ ಮಕ್ಕಳಾದ ಪ್ರಥಮ, ಸಜನಿ, ಸಾನ್ವಿ ಎನ್ನುವವರ ಅಪಹರಣವಾಗಿದೆ. ಪ್ರಕರಣವಾಗಿ ಒಂದು ವರ್ಷವಾಗುತ್ತಿದ್ದರೂ ಅಪಹೃತರನ್ನು ಪತ್ತೆ ಮಾಡುವಲ್ಲಿ ಪೊಲೀಸ ಇಲಾಖೆ ವಿಫಲವಾಗಿದೆ ಎಂದರು.

Tap to resize

Latest Videos

ಪೊಲೀಸರಿಂದ ಬೆದರಿಕೆ ಆರೋಪ: ಅಪಹೃತರ ಕುಟುಂಬಸ್ಥರು ನ್ಯಾಯ ಕೇಳಿ ಕೊಲ್ಹಾರ ಠಾಣೆಗೆ ಬಂದರೆ ಪಿಎಸ್ಐ ನೊಂದವರಿಗೆ ನ್ಯಾಯ ಕೊಡಿಸುವುದು ಬಿಟ್ಟು ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಪೊಲೀಸರು ವಾರದಲ್ಲೇ ಅಪಹರಣ ಕೃತ್ಯದ ಹಿಂದಿರುವ ಶಕ್ತಿಗಳನ್ನ ಪತ್ತೆ ಹಚ್ಚದಿದ್ದರೆ ಹಿಂದೂ ಸಂಘಟನೆಗಳೆಲ್ಲಾ ಬೀದಿಗಿಳಿದು ಹೋರಾಟ ಮಾಡಲಿದೆ. ಅದರಿಂದಾಗುವ ಪರಿಣಾಮಕ್ಕೆ ಕೊಲ್ಹಾರ ಪಿಎಸ್ಐ, ಸಿಪಿಐ ಹೊಣೆಯಾಗಲಿದ್ದಾರೆ. ಅಲ್ಲದೇ ಕೃತ್ಯದ ಹಿಂದೆ ಪಟ್ಟಣದ ಎಂ.ಆರ್ ಕಲಾದಗಿ ಎನ್ನುವ ವ್ಯಕ್ತಿ ಹಾಗೂ ಇನ್ನು ಕೆಲವರು ಪ್ರಚೋದನೆ ನೀಡಿರುವ ಮಾಹಿತಿ ದೊರಕಿದ್ದು ಎಂ.ಆರ್ ಕಲಾದಗಿ ಎನ್ನುವ ವ್ಯಕ್ತಿ ಪದೇ ಪದೇ ಹಿಂದೂ ಸಮಾಜವನ್ನ ಕೆಣಕುವ ಕೆಲಸ ಮಾಡುತ್ತಿದ್ದು ಹಿಂದೂ ಸಮಾಜ ಆತನಿಗೆ ಪ್ರತ್ಯುತ್ತರ ನೀಡಲಿದೆ ಎಂದು ಗಂಗಾಧರ ಕುಲಕರ್ಣಿ ಎಚ್ಚರಿಕೆ ನೀಡಿದರು.

ಸಚಿವ ನಾಗೇಂದ್ರ ರಾಜೀನಾಮೆಗೆ ಗಡುವು ನೀಡಿದ ಮಾಜಿ ಸಚಿವ ಶ್ರೀರಾಮುಲು!

ನಮಗೆ ಹಣ ಬೇಡ, ಮಹಿಳೆ- ಮಕ್ಕಳು ಬೇಕು: ಅಪಹೃತ ಚಂದ್ರಭಾಗ ಹುಗ್ಗೆನವರ ಚಿಕ್ಕಪ್ಪ ಸಿಂಧೂರ ಬ್ಯಾಲ್ಯಾಳ ಮಾತನಾಡಿ, ನಮ್ಮ ಅಣ್ಣನ ಮಗಳ ಹಾಗೂ ಮೊಮ್ಮಕ್ಕಳ ಅಪಹರಣವಾಗಿದೆ. ಮುಸ್ಲಿಂ ಸಮುದಾಯದ ಅಬ್ದುಲಗಫಾರ ಕಲಾದಗಿ ಎನ್ನುವ ಯುವಕ ಅಪಹರಿಸಿದ್ದು, ಈ ಬಗ್ಗೆ ದೂರ ನೀಡಲಾಗಿಯು ಕೂಡ ಪ್ರಯೋಜನವಾಗಿಲ್ಲ. ಪೊಲೀಸ ಅಧಿಕಾರಿಗಳು ಯುವಕನ ಸಂಬಂಧಿ ಎಂ.ಆರ್ ಕಲಾದಗಿ ಅವರಿಂದ ದುಡ್ಡು ಕೊಡಿಸುತ್ತೇವೆ ಎಂದು ಹೇಳುತ್ತಿದ್ದಾರೆ. ನಮಗೆ ದುಡ್ಡು ಬೇಡ, ನಮ್ಮ ಮಗಳು ಹಾಗೂ ಮೊಮ್ಮಕ್ಕಳು ಬೇಕು ಎಂದ ಅಳಲು ತೋಡಿಕೊಂಡರು. ಈ ವೇಳೆ ವಿವಿಧ ಹಿಂದೂ ಸಂಘಟನೆಗಳ‌ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.

click me!