ಕೋಟೆನಾಡಿಗೆ ಚಪ್ಪಲಿ ಹಾಕದೇ ಬರಿಗಾಲಲ್ಲಿ ಬಂದು ಹೋದ ಕಿಚ್ಚ ಸುದೀಪ್, ಕಾರಣ ಏನು ಗೊತ್ತಾ?

Published : Oct 13, 2026, 11:06 PM IST
Kiccha Sudeep

ಸಾರಾಂಶ

ಕಿಚ್ಚ ಸುದೀಪ್ ಅವರು ಇವತ್ತು ಕೋಟೆನಾಡು ಚಿತ್ರದುರ್ಗಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರು ಬರಿಗಾಲಲ್ಲಿ ಆಗಮಿಸಿದ್ದರು. ಅದಕ್ಕೆ ಕಾರಣ ಇದೆ.

ಚಿತ್ರದುರ್ಗ (ಅಕ್ಟೋಬರ್ 13): ಮದಕರಿ ನಾಯಕ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ (Kiccha Sudeep) ಅವರು ಇವತ್ತು ಚಿತ್ರದುರ್ಗಕ್ಕೆ ಆಗಮಿಸಿದ್ದರು. ವಿಶೇಷ ಅಂದರೆ ಅವರು ಬರಿಗಾಲಲ್ಲೇ ಕೋಟೆ ನಾಡಿಗೆ ಎಂಟ್ರಿ ಆಗಿರೋದು ಅಭಿಮಾನಿಗಳ ಗಮನ ಸೆಳೆಯಿತು. ಹೆಲಿಕಾಪ್ಟರ್‍‌ನಿಂದ ಇಳಿದು ಬರೀಗಾಲಲ್ಲೇ ನಡೆದುಕೊಂಡು ಹೋಗುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬರೀಗಾಲಲ್ಲಿ ಬಂದಿದ್ದೇಕೆ ಕಿಚ್ಚ?

ಅಂದಹಾಗೆ ಸುದೀಪ್ ಅವರು ಬರಿಗಾಲಲ್ಲಿ ಬಂದಿರೋದಕ್ಕೆ ಪ್ರಮುಖ ಕಾರಣ ಇದೆ. ನಾಡಿನೆಲ್ಲೆಡೆ ನವರಾತ್ರಿಯ ಸಂಭ್ರಮ ಜೋರಾಗಿದೆ. ಸುದೀಪ್ ನವರಾತ್ರಿಯ ವ್ರತ ಮಾಡುತ್ತಿದ್ದು, ಉಪವಾಸದಲ್ಲಿದ್ದರು. ಹೀಗಾಗಿ ಚಿತ್ರದುರ್ಗದ ಎಸ್‌ಜೆಎಂ ಹೆಲಿಪ್ಯಾಡ್‌ಗೆ ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಅವರು, ಬರಿಗಾಲಲ್ಲೇ ಕೆಳಗಿಳಿದರು. ನಂತರ ಬರಿಗಾಲಲ್ಲೇ ನಡೆದುಕೊಂಡು ಕಾರ್ಯಕ್ರಮದ ವೇದಿಕೆಗೆ ತೆರಳಿದ್ದಾರೆ.

ಸುದೀಪ್ ನವರಾತ್ರಿ ಸಂಭ್ರಮದಲ್ಲಿ (Navratri Festival) ಬರಿಗಾಲಲ್ಲಿ ಓಡಾಡೋದು ಇದು ಹೊಸದಲ್ಲ. ಈ ಹಿಂದೆಯೂ ಕೂಡ ಅವರು ಇದೇ ವಿಚಾರಕ್ಕೆ ಸುದ್ದಿ ಆಗಿದ್ದರು. ಬಿಗ್‌ ಬಾಸ್ (Bigg Boss) ರಿಯಾಲಿಟಿ ಶೋನ ವಾರದ ಕತೆ ಕಿಚ್ಚನ ಜೊತೆಯ ಎಪಿಸೋಡ್‌ಗೆ ಒಮ್ಮೆ ಬರಿಗಾಲಲ್ಲಿ ಬಂದು ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಕೆಲವು ಮಾಹಿತಿಗಳ ಪ್ರಕಾರ ಸುದೀಪ್.. ನವರಾತ್ರಿಯಲ್ಲಿ ಸುದೀಪ್, 9 ದಿನವೂ ಒಂದು ಹೊತ್ತ ಮಾತ್ರ ಊಟ ಮಾಡುತ್ತಾರೆ. ಶೂಟಿಂಗ್ ಸಮಯದಲ್ಲೂ ಕಠಿಣ ವ್ರತ ಮಾಡುತ್ತಾರೆ. ಈ ವರ್ಷವೂ ತಮ್ಮ ಭಕ್ತಿಯ ಆರಾಧನೆಯನ್ನು ಮುಂದುವರಿಸಿದ್ದಾರೆ ಎಂದು ಅಭಿಮಾನಿಗಳು ಮಾತನ್ನಾಡಿಕೊಳ್ಳುತ್ತಿದ್ದಾರೆ.

ಚಿತ್ರದುರ್ಗದಲ್ಲಿ ಅಭಿಮಾನಿಗಳಿಗೆ ಹಬ್ಬ

ಇನ್ನು, ಚಿತ್ರದುರ್ಗದಲ್ಲಿ ಸುದೀಪ್ ಅವರನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಸುದೀಪ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮತ್ತು ಅವರನ್ನು ಹತ್ತಿರದಿಂದ ಕಾಣಲು ಮುಗಿಬಿದ್ದಿದ್ದಾರೆ. ಆಗ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣ ಆಗಿತ್ತು. ನೂಕು-ನುಗ್ಗಲು ಉಂಟಾದ ಹಿನ್ನೆಲೆಯಲ್ಲಿ ಪೊಲೀಸರು ಅಭಿಮಾನಿಗಳ ನಿಯಂತ್ರಿಸಲು ಹರಸಾಹಸ ಪಟ್ಟರು. ವೇದಿಕೆ ಮೇಲೆ ಜಮಾಯಿಸಿದ್ದ ಫ್ಯಾನ್ಸ್‌ನ ಕಂಟ್ರೋಲ್‌ಗೆ ತೆಗೆದುಕೊಳ್ಳುವುದು ತುಂಬಾ ಕಷ್ಟ ಆಯಿತು. ಇದರ ಮಧ್ಯೆ ನೆಚ್ಚಿನ ನಟನನ್ನು ಹತ್ತಿರದಿಂದ ಕಣ್ತುಂಬಿಕೊಂಡು ಫ್ಯಾನ್ಸ್ ತುಂಬಾ ಖುಷಿಪಟ್ಟರು.

ಇನ್ನು, ಕಾರ್ಯಕ್ರಮದಲ್ಲಿ ಮಾತನ್ನಾಡಿರುವ ಸುದೀಪ್.. ನೀವೆಲ್ಲ ಹೇಗಿದ್ದೀರಿ ಎಂದು ಕೇಳುತ್ತ ಮಾತನ್ನ ಆರಂಭಿಸಿದರು. ಇನ್ನು ಕಳೆದ ಬಾರಿ ಬಂದಿದ್ದ ಘಟನೆಯನ್ನೂ ಸ್ಮರಿಸಿದರು. ನಾನು ಚಿತ್ರದುರ್ಗಕ್ಕೆ ಕರೆದಾಗ ತಾವು ಯಾವತ್ತೂ ತಪ್ಪಿಸಿಕೊಳ್ಳುವುದಿಲ್ಲ. ಆಗಾಗ ನಿಮ್ಮನ್ನು ನೋಡಲು ಬರುತ್ತೇನೆ. ನೀವೆಲ್ಲರೂ ಚೆನ್ನಾಗಿರಬೇಕು ಎಂದು ಆಶಿಸುತ್ತೇನೆ ಎಂದು ಶುಭ ಹಾರೈಸಿದರು.

ಕಾರ್ಯಕ್ರಮಕ್ಕೆ ಬರುವುದಕ್ಕೂ ಮೊದಲು ಸುದೀಪ್ ಬಸವಮೂರ್ತಿ ಮಾದಾರ ಚನ್ನಯ್ಯ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರ್ಶೀವಾದ ಪಡೆದರು. ಮಾದಾರ ಚನ್ನಯ್ಯ ಸ್ವಾಮೀಜಿಗಳು ಸುದೀಪ್ ಅವರನ್ನು ಅಭಿನಂದಿಸಿ ಕೆಲಕಾಲ ಅವರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಶಾಸಕ ರಾಜುಗೌಡ ಸೇರಿದಂತೆ ಹಲವು ಗಣ್ಯರ ಉಪಸ್ಥಿತರಿದ್ದರು.

PREV
Read more Articles on
click me!

Recommended Stories

ಅಭಿಮಾನಿಯ ಕಪಾಳಕ್ಕೆ ಬಾರಿಸಿದ ಕಿಚ್ಚ ಸುದೀಪ್ ಅವರ ಗನ್‌ಮ್ಯಾನ್ - ವಿಡಿಯೋ
Yakshagana: ಕಾಂತಾರ ಬೆನ್ನಲ್ಲೇ ಹಿಂದಿ ಭಾಷಿಕರ ಮನಸೆಳೆದ ಕನ್ನಡಿಗರ ಯಕ್ಷಗಾನ!