ಶ್ರೀಕೃಷ್ಣದೇವರಾಯ ವಿವಿ ವಿದ್ಯಾರ್ಥಿ, ಸಿಬ್ಬಂದಿ​ಗೆ ಶುಕ್ರವಾರ ಖಾದಿ ಉಡುಪು ಕಡ್ಡಾಯ

By Kannadaprabha News  |  First Published Aug 16, 2021, 7:01 AM IST
  • ವೋಕಲ್‌ ಫಾರ್‌ ಲೋಕಲ್‌ ಎಂಬ ಪ್ರಧಾನಿಯವರ ಮಹತ್ವಾಕಾಂಕ್ಷೆಯ ಘೋಷಣೆ
  • ಶ್ರೀಕೃಷ್ಣ ದೇವ​ರಾಯ ವಿಶ್ವವಿದ್ಯಾಲಯ ಮತ್ತು ಅಧೀನದ ಎಲ್ಲ ಕಾಲೇಜು ವಿದ್ಯಾರ್ಥಿ, ಸಿಬ್ಬಂದಿಗೆ ಪ್ರತಿ ಶುಕ್ರವಾರ ದೇಸಿ ಖಾದಿ ಪೋಷಾಕು ಕಡ್ಡಾಯ

ಬಳ್ಳಾರಿ (ಆ.16): ವೋಕಲ್‌ ಫಾರ್‌ ಲೋಕಲ್‌ ಎಂಬ ಪ್ರಧಾನಿಯವರ ಮಹತ್ವಾಕಾಂಕ್ಷೆಯ ಘೋಷಣೆಗೆ ಪೂರಕವಾಗಿ ಸ್ಥಳೀಯ ಉದ್ಯಮಗಳಿಗೆ ಪ್ರೊತ್ಸಾಹ ನೀಡಲು ಶ್ರೀಕೃಷ್ಣ ದೇವ​ರಾಯ ವಿಶ್ವವಿದ್ಯಾಲಯ ಮತ್ತು ಅಧೀನದ ಎಲ್ಲ ಕಾಲೇಜು ವಿದ್ಯಾರ್ಥಿ, ಸಿಬ್ಬಂದಿಗೆ ಪ್ರತಿ ಶುಕ್ರವಾರ ದೇಸಿ ಖಾದಿ ಪೋಷಾಕು ಕಡ್ಡಾಯಗೊಳಿಸಲಾಗಿದೆ.

ಲಾಕ್‌ಡೌನ್‌ ಎಫೆಕ್ಟ್‌: ಆರ್ಥಿಕ ಸಂಕಷ್ಟದಲ್ಲಿ ಖಾದಿ ಉತ್ಪಾದನಾ ಕೇಂದ್ರಗಳು

Tap to resize

Latest Videos

undefined

75ನೇ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ಭಾನುವಾರ ವಿಶ್ವವಿದ್ಯಾಲಯದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿದ ವಿಶ್ವವಿದ್ಯಾಲಯದ ಕುಲಪತಿ ಪೊ›. ಸಿದ್ದು ಪಿ. ಆಲಗೂರ ಅವರು ಈ ಘೋಷಣೆ ಮಾಡಿದ್ದಾರೆ.

ಸ್ವಾತಂತ್ರ್ಯೋತ್ಸವದ ವಿಶೇಷವಾಗಿ ವಿಶ್ವವಿದ್ಯಾಲಯದಲ್ಲಿ ಖಾದಿ ಬಟ್ಟೆಗಳ ಮಾರಾಟ ಮಳಿಗೆಗಳನ್ನೂ ತೆರೆಯಲಾಗಿತ್ತು. ದೇಸಿ ಉತ್ಪನ್ನಗಳಿಗೆ ಉತ್ತೇಜನ ನೀಡಲು ವಿಶ್ವವಿದ್ಯಾಲಯದ ಸಿಬ್ಬಂದಿ ಬಟ್ಟೆಖರೀದಿಸಿದರು. ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ನೂತನ ವೆಬ್‌ಸೈಟ್‌ ಅವತರಣಿಕೆಯನ್ನು ಕುಲಪತಿ ಉದ್ಘಾಟನೆ ಮಾಡಿದರು.

click me!