ಇಂದು, ನಾಳೆ, 2024ಕ್ಕೂ ನಮ್ಮದೇ ಸರ್ಕಾರ ಇರುತ್ತದೆ : ನನಗೆ ಅಸಮಾಧಾನ ಇಲ್ಲ

By Suvarna NewsFirst Published Aug 15, 2021, 2:08 PM IST
Highlights
  • ನಮ್ಮ ದೇಶಕ್ಕೆ ವಾಜಪೇಯಿ ಮತ್ತು ನೆಹರು ಅವರು ಹಿರಿಮೆಯ ನಾಯಕರು
  • ಇಬ್ಬರ ಹೆಸರಿನಲ್ಲಿ ನಡೆಯುತ್ತಿರುವ ವಿವಾದಕ್ಕೆ ತೆರೆ ಎಳೆಯಬೇಕಿದೆ 
  • ಚಿತ್ರದುರ್ಗದಲ್ಲಿಂದು ಸಾರಿಗೆ ಸಚಿವ ಬಿ.ಶ್ರಿರಾಮುಲು ಹೇಳಿಕೆ

ಚಿತ್ರದುರ್ಗ (ಆ.15): ನಮ್ಮ ದೇಶಕ್ಕೆ ವಾಜಪೇಯಿ ಮತ್ತು ನೆಹರು ಅವರು ಹಿರಿಮೆಯ ನಾಯಕರು ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು.

ಚಿತ್ರದುರ್ಗದಲ್ಲಿಂದು ಮಾತನಾಡಿದ ಸಾರಿಗೆ ಸಚಿವ ಬಿ.ಶ್ರೀರಾಮುಲು ವಾಜಪೇಯಿ ಮತ್ತು ನೆಹರು ಅವರು ಹಿರಿಮೆಯ ನಾಯಕರು. ಇಬ್ಬರೂ ಪ್ರಧಾನಿ ಆಗಿ ಕಾರ್ಯ‌ ನಿರ್ವಹಿಸಿದ್ದಾರೆ. ಇಬ್ಬರ ಹೆಸರಿನಲ್ಲಿ ನಡೆಯುತ್ತಿರುವ ವಿವಾದಕ್ಕೆ ತೆರೆ ಎಳೆಯಬೇಕಿದೆ ಎಂದು ಹೇಳಿದರು.

ರಾಮುಲು ಡಿಸಿಎಂ ಕನಸಿಗೆ ಅಡ್ಡಗಾಲು ಹಾಕಿದ್ರಾ ಬೆಳಗಾವಿ ಸಾಹುಕಾರ್?

ವಾಜಪೇಯಿ ಅವರು ನೆಹರು ಪುತ್ಥಳಿ ಸ್ಥಳಾಂತರಿಸಿದ್ದನ್ನು ಗಮನಿಸಿದ್ದರು. ವಾಜಪೇಯಿ ಅವರು ನೆಹರು ಪುತ್ಥಳಿಯನ್ನು ಪುನರ್ ಸ್ಥಾಪಿಸಿದ್ದರು.
ಮೊರಾರ್ಜಿ ಸಂಪುಟದಲ್ಲಿ ಸಚಿವರಾಗಿದ್ದಾಗ ವಾಜಪೇಯಿ ಈ ಕ್ರಮ ಕೈಗೊಂಡಿದ್ದರೆಂದರು.

ವಾಜಪೇಯಿ, ನೆಹರು ಬಗ್ಗೆ ಮಾತು ಮಿತಿ ಮೀರುತ್ತಿವೆ. ಯಾರನ್ನು ಬೇಕಾದರೂ ಟೀಕೆ ಮಾಡಬಹುದು ಎಂಬುದು ಸರಿಯಲ್ಲ. ಎರಡೂ ಕಡೆಯೂ ಮಾತನಾಡುವುದು ನಿಲ್ಲಿಸಬೇಕು. ರಾಜಕಾರಣಕ್ಕಾಗಿ ದೊಡ್ಡವರ ಹೆಸರು ಎಳೆದು ತರುವುದು ಸರಿಯಲ್ಲ ಎಂದು ಶ್ರೀರಾಮುಲು ಹೇಳಿದರು. 

ಅಧಿಕಾರ ಕಳೆದುಕೊಂಡವರು ಹಗಲುಗನಸು ಕಾಣುತ್ತಿದ್ದಾರೆ. ತಮ್ಮ ಸರ್ಕಾರ ಬರುತ್ತದೆ ಎಂದು ಅವರು ಭಾವಿಸಿದ್ದಾರೆ. ಪರೋಕ್ಷವಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಇವತ್ತು, ನಾಳೆ ಮತ್ತು 2024ಕ್ಕೂ ನಮ್ಮದೇ ಸರ್ಕಾರ ಇರುತ್ತದೆ. ಖಾತೆ ಬಗ್ಗೆ ನನಗೆ ಯಾವುದೇ ಅಸಮಾಧಾನ ಇಲ್ಲ. ಪಕ್ಷ ನೀಡಿದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸುತ್ತೇನೆ ಎಂದು ರಾಮುಲು ಹೇಳಿದರು.  

ಸಚಿವರ ಸಭೆಗೆ ಶಾಸಕ ತಿಪ್ಪಾರೆಡ್ಡಿ ಗೈರು ವಿಚಾರದ ಬಗ್ಗೆಯೂ ಮಾತನಾಡಿದ ಶ್ರೀರಾಮುಲು ಇದರ ಬಗ್ಗೆ ಅವರನ್ನೆ ಕೇಲಿ ಎಂದು ಮುಗುಳ್ನಕ್ಕರು.

click me!