ಕಾಫಿನಾಡಿಗೂ ಲಗ್ಗೆ ಇಟ್ಟ ಮಂಗನ ಕಾಯಿಲೆ : ಪಾಸಿಟಿವ್ ಪತ್ತೆ !

Suvarna News   | Asianet News
Published : Jan 24, 2020, 10:10 AM ISTUpdated : Jan 24, 2020, 10:15 AM IST
ಕಾಫಿನಾಡಿಗೂ ಲಗ್ಗೆ ಇಟ್ಟ ಮಂಗನ ಕಾಯಿಲೆ : ಪಾಸಿಟಿವ್ ಪತ್ತೆ !

ಸಾರಾಂಶ

ಕಾಫಿ ನಾಡಿನಲ್ಲೂ ಕೂಡ ಇದೀಗ ಮಂಗನ ಕಾಯಿಲೆ ಪತ್ತೆಯಾಗಿದೆ. ಉಣ್ಣೆಗಳ ಪರೀಕ್ಷೆ  ನಡೆಸಿದ್ದು, ಪಾಸಿಟಿವ್ ಪತ್ತೆಯಾಗಿದೆ.

ಚಿಕ್ಕಮಗಳೂರು [ಜ.24]:  ಶಿವಮೊಗ್ಗ ಜಿಲ್ಲೆಯ ಹಲವೆಡೆ ಕಂಡು ಬಂದಿದ್ದ ಕೆಎಫ್ ಡಿ ವೈರಸ್ ಇದೀಗ ಕಾಫಿನಾಡು ಚಿಕ್ಕಮಗಳೂರಿಗೂ ಲಗ್ಗೆ ಇಟ್ಟಿದೆ. 

ಕೊಪ್ಪ ತಾಲೂನಿಕ ಜಯಪುರ ಸಮೀಪದ ಶಾಂತಿ ಗ್ರಾಮದಲ್ಲಿ ಉಣ್ಣೆಗಳಲ್ಲಿ ಮಂಗನ ಕಾಯಿಲೆ ವೈರಸ್ ಪತ್ತೆಯಾಗಿದೆ. 

ಜನವರಿ 9 ರಂದು ಪ್ರಾಣಿಗಳ ಉಣ್ಣೆಗಳ ಪರೀಕ್ಷೆ ನಡೆಸಲಾಗಿದ್ದು, ಉಣ್ಣೆಗಳಲ್ಲಿ ಪಾಸಿಟಿವ್ ಕಂಡು ಬಂದಿದೆ. 

ಮಂಗ​ನ​ಕಾ​ಯಿಲೆ ಲಸಿಕೆ : ತಪ್ಪುಕಲ್ಪನೆ ಬೇಡ...

ಶಿವಮೊಗ್ಗದ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದ್ದು, ಈ ವೆಳೆ ಮಂಗನ ಕಾಯಿಲೆ ವೈರಸ್ ಪತ್ತೆಯಾಗಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. 

ಕಳೆದ ವರ್ಷ ಜಿಲ್ಲೆಯಲ್ಲಿ 35 ಮಂಗಗಳು ಸಾವನ್ನಪ್ಪಿದ್ದು, ಇದರಲ್ಲಿ 18 ಮಂಗಳ ಅಂಗಾಂಗ ಪರೀಕ್ಷೆ ನಡೆಸಿದ್ದು, ಒಂದು ಮಂಗದ ದೇಹದಲ್ಲಿ  ವೈರಸ್ ಪತ್ತೆಯಾಗಿತ್ತು. 

ಇನ್ನು 2019ರಲ್ಲಿ ಕೊಪ್ಪದ ಜಯಪುರದ ಹಾಡುಗಾರ ಗ್ರಾಮದಲ್ಲಿ ಓರ್ವ ವ್ಯಕ್ತಿಗೆ ಮಂಗನ ಕಾಯಿಲೆ ಕಂಡು ಬಂದಿತ್ತು. 

ತೀವ್ರವಾಗಿ ಹರಡುತ್ತಿದೆ ಮಂಗನ ಕಾಯಿಲೆ ಸೋಂಕು...

ಕೆಎಫ್ ಡಿ ವೈರಸ್  ಪತ್ತೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆ ತರಿಕೇರೆ, ಮೂಡಿಗೆರೆ, ಕೊಪ್ಪ ತಾಲೂಕಿನ ಹಲವು ಗ್ರಾಮದಲ್ಲಿ ಜನರಿಗೆ ಜೌಷಧಿ ನೀಡುತ್ತಿದೆ. 

ವೈದಾಧಿಕಾರಿಗಳು, ಜಿಲ್ಲಾ ವಿಚಕ್ಷಣ ಅಧಿಕಾರಿ ಮಂಜುನಾಥ ನೇತೃತ್ವದ ತಂಡದಿಂದ ಮಂಗನ ಕಾಯಿಲೆ ಬಗ್ಗೆ ಮೂಡಿಸಲಾಗುತ್ತಿದೆ.

PREV
click me!

Recommended Stories

'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ
ಮೈಸೂರಿನ ಪುಟ್ಟ ರಾಜಕುಮಾರನ ಹುಟ್ಟುಹಬ್ಬ: ವಿಶೇಷ ಫೋಟೊಗಳನ್ನು ಶೇರ್ ಮಾಡಿದ ಮಹಾರಾಣಿ