ಗಡಿ ಓಪನ್ ಮಾಡಿ ಎಂದ ಕೇರಳ ಸಿಎಂನಿಂದ ಗಡಿ ಮುಚ್ಚೋಕೆ ಸ್ಟ್ರಿಕ್ಟ್ ಆರ್ಡರ್..!

Kannadaprabha News   | Asianet News
Published : Apr 28, 2020, 08:33 AM ISTUpdated : Apr 28, 2020, 01:07 PM IST
ಗಡಿ ಓಪನ್ ಮಾಡಿ ಎಂದ ಕೇರಳ ಸಿಎಂನಿಂದ ಗಡಿ ಮುಚ್ಚೋಕೆ ಸ್ಟ್ರಿಕ್ಟ್ ಆರ್ಡರ್..!

ಸಾರಾಂಶ

ಕೇರಳ ಗಡಿ ಭಾಗದಿಂದ ಕೊರೋನಾ ಸೋಂಕಿತರು ದ.ಕ ಜಿಲ್ಲೆಗೆ ಪ್ರವೇಶಿಸುವುದನ್ನು ತಡೆಯಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಗಡಿ ರಸ್ತೆಯನ್ನು ಬಂದ್‌ ಮಾಡಿತ್ತು. ಇದನ್ನು ವಿರೋಧಿಸಿ ಕೇರಳ ಮುಖ್ಯಮಂತ್ರಿ ಸುಪ್ರೀಂಕೋರ್ಟಿಗೆ ಹೋಗಿದ್ದರು.ಆದರೆ ಈಗ ಅವರೇ ಗಡಿ ರಸ್ತೆ ಬಂದ್‌ ಮಾಡಲು ಸೂಚಿಸಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.  

ಮಂಗಳೂರು(ಏ.28): ಕೇರಳ ಗಡಿ ಭಾಗದಿಂದ ಕೊರೋನಾ ಸೋಂಕಿತರು ದ.ಕ ಜಿಲ್ಲೆಗೆ ಪ್ರವೇಶಿಸುವುದನ್ನು ತಡೆಯಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಗಡಿ ರಸ್ತೆಯನ್ನು ಬಂದ್‌ ಮಾಡಿತ್ತು. ಇದನ್ನು ವಿರೋಧಿಸಿ ಕೇರಳ ಮುಖ್ಯಮಂತ್ರಿ ಸುಪ್ರೀಂಕೋರ್ಟಿಗೆ ಹೋಗಿದ್ದರು.ಆದರೆ ಈಗ ಅವರೇ ಗಡಿ ರಸ್ತೆ ಬಂದ್‌ ಮಾಡಲು ಸೂಚಿಸಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

"

ಕರ್ನಾಟಕ ಮತ್ತು ತಮಿಳುನಾಡು ರಾಜ್ಯದ ಜನರು ಕೇರಳಕ್ಕೆ ಬಾರದಂತೆ ರಾಜ್ಯ ಗಡಿ ಬಂದ್‌ ಮಾಡಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸೋಮವಾರ ಆದೇಶಿಸಿದ್ದಾರೆ.

ಹಜ್‌ ಯಾತ್ರೆಗೆ ಕೂಡಿಟ್ಟ ಹಣದಿಂದ ಬಡವರ ಹೊಟ್ಟೆ ತುಂಬಿಸಿದ ಅಬ್ದುಲ್..!

ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿ ಕೋವಿಡ್‌-19 ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ನಡೆದ ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ಅಧಿಕಾರಿಗಳ ಸಭೆಯಲ್ಲಿ ಈ ಸೂಚನೆ ನೀಡಿದ್ದಾರೆ.

ಖರ್ಜೂರ ಸಾಗಿಸುವ ಕ್ಯಾಂಟರ್‌ನಲ್ಲಿ ಬಂದಿದ್ದ ಸೋಂಕಿತ: ಪೆಟ್ರೋಲ್ ಬಂಕ್‌ನಲ್ಲಿ ಸ್ನಾನ

ಇತ್ತೀಚೆಗೆ ಕರ್ನಾಟಕ ಸರ್ಕಾರ ಅಂತಾರಾಜ್ಯ ಗಡಿ ಬಂದ್‌ ಮಾಡಿರುವ ವಿರುದ್ಧ ಕೇರಳ ಸರ್ಕಾರ ನ್ಯಾಯಾಲಯದ ಮೆಟ್ಟಿಲೇರಿದ್ದು, ಬಳಿಕ ಸ್ಪಷ್ಟಮಾರ್ಗಸೂಚಿ ಅನ್ವಯ ಕೋವಿಡ್‌ ರಹಿತ ತುರ್ತು ಚಿಕಿತ್ಸಾ ರೋಗಿಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಇದೀಗ ಕೇರಳ ಸರ್ಕಾರದ ಆದೇಶದ ಕುರಿತು ಟ್ವೀಟ್‌ ಮಾಡಿರುವ ಶಾಸಕ ವೇದವ್ಯಾಸ ಕಾಮತ್‌, ಕರ್ನಾಟಕ ಹಾಗೂ ತಮಿಳುನಾಡಿನ ಅಂತಾರಾಜ್ಯ ಗಡಿ ರಸ್ತೆಗಳನ್ನು ಬಂದ್‌ ಮಾಡಲು ಆದೇಶಿಸಿರುವುದು ಪಿಣರಾಯಿ ವಿಜಯನ್‌ ಅವರ ದ್ವಿಮುಖ ನೀತಿಯನ್ನು ತೋರಿಸುತ್ತದೆ. ಹಿಂದೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಗಡಿ ರಸ್ತೆಯನ್ನು ಬಂದ್‌ ಮಾಡಿದಾಗ ಕೇರಳ ಮುಖ್ಯಮಂತ್ರಿ ಸುಪ್ರೀಂಕೋರ್ಟಿಗೆ ಹೋಗಿದ್ದರು. ಈಗ ಅವರೇ ಗಡಿ ರಸ್ತೆ ಬಂದ್‌ ಮಾಡಲು ಸೂಚಿಸಿದ್ದಾರೆ ಎಂದು ಟೀಕಿಸಿದ್ದಾರೆ.

PREV
click me!

Recommended Stories

ಹೊಸ ವರ್ಷಕ್ಕೆ ಕೆಲವೇ ಹೊತ್ತಲ್ಲಿ ಶಾಕ್! ಕೊಳ್ಳೇಗಾಲದಲ್ಲಿ ಭೀಕರ ಅಗ್ನಿ ಅವಘಡ; ಬೇಕರಿ ಸೇರಿದಂತೆ ಮೂರು ಅಂಗಡಿಗಳು ಭಸ್ಮ!
ಬೆಂಗಳೂರು ಹೊಸವರ್ಷ ಸಂಭ್ರಮದಲ್ಲಿ ನಶೆ ಏರಿದ ಮಹಿಳೆಯರಿಗೆ ರಾತ್ರಿ ಇಡಿ ಉಚಿತ ಡ್ರಾಪ್