ಕರ್ನಾಟಕದ ಸರಕು ವಾಹನಗಳಿಗೆ ಕೇರಳ ಪ್ರವೇಶ ತಡೆ

Kannadaprabha News   | Asianet News
Published : Jul 23, 2020, 09:35 AM IST
ಕರ್ನಾಟಕದ ಸರಕು ವಾಹನಗಳಿಗೆ ಕೇರಳ ಪ್ರವೇಶ ತಡೆ

ಸಾರಾಂಶ

ಕರ್ನಾಟಕದ ಸರಕು ವಾಹನಗಳಿಗೆ ಕಾಸ​ರ​ಗೋಡು ಜಿಲ್ಲೆಗೆ ಪ್ರವೇಶ ನಿಬಂಧಿ​ಸಿ ಕಾಸ​ರ​ಗೋಡು ಜಿಲ್ಲಾ​ಧಿ​ಕಾರಿ ಡಾ.ಸ​ಜಿತ್‌ ಬಾಬು ಆದೇಶ ಹೊರ​ಡಿ​ಸಿ​ದ್ದಾ​ರೆ. ಕರ್ನಾಟಕದಿಂದ ವಾಹನಗಳಲ್ಲಿ ಬರುವ ಸರಕನ್ನು ಗಡಿಯಲ್ಲಿ ಕಾಸರಗೋಡಿನ ವಾಹನಗಳಿಗೆ ತುಂಬಿಸಬೇಕು.

ಮಂಗಳೂರು(ಜು.23): ಕರ್ನಾಟಕದ ಸರಕು ವಾಹನಗಳಿಗೆ ಕಾಸ​ರ​ಗೋಡು ಜಿಲ್ಲೆಗೆ ಪ್ರವೇಶ ನಿಬಂಧಿ​ಸಿ ಕಾಸ​ರ​ಗೋಡು ಜಿಲ್ಲಾ​ಧಿ​ಕಾರಿ ಡಾ.ಸ​ಜಿತ್‌ ಬಾಬು ಆದೇಶ ಹೊರ​ಡಿ​ಸಿ​ದ್ದಾ​ರೆ. ಕರ್ನಾಟಕದಿಂದ ವಾಹನಗಳಲ್ಲಿ ಬರುವ ಸರಕನ್ನು ಗಡಿಯಲ್ಲಿ ಕಾಸರಗೋಡಿನ ವಾಹನಗಳಿಗೆ ತುಂಬಿಸಬೇಕು.

ಸರಕು ತರುವ ಕಾಸರಗೋಡಿನ ವಾಹನ ಚಾಲಕ, ಸಿಬ್ಬಂದಿ ವಾರಕ್ಕೊಮ್ಮೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೊಳಗಾಗಿ ಕೋವಿಡ್‌ ಲಕ್ಷಣ ಹೊಂದಿಲ್ಲ ಎಂದು ಸರ್ಟಿಫಿಕೇಟ್‌ ಪಡೆಯಬೇಕು ಎಂದು ಸೂಚಿಸಿದ್ದಾರೆ.

ತಹಸೀಲ್ದಾರ್‌ ನೇತೃತ್ವದಲ್ಲಿ ನಿಧಿ ಶೋಧ..!

ತರಕಾರಿ, ಹಣ್ಣು ಹಂಪಲು ಮತ್ತು ಮೀನು ಹೇರಿಕೊಂಡು ಬರುವ ವಾಹನಗಳಲ್ಲಿನ ಸರಕುಗಳನ್ನು ಗಡಿ ಪ್ರದೇಶಗಳಲ್ಲಿ ಕೇರ​ಳದ ವಾಹನಗಳಿಗೆ ಹಸ್ತಾಂತರಿಸಬೇಕು. ಮಾಸ್ಕ್, ಗ್ಲೌಸ್‌, ಸ್ಯಾನಿಟೈಸರ್‌ ಕಡ್ಡಾಯವಾಗಿ ಬಳಸಿ, ನಿಬಂಧನೆ ಪಾಲಿಸಿ ಸರಕನ್ನು ಹಸ್ತಾಂತರಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿ​ಸಿ​ದ್ದಾ​ರೆ.

PREV
click me!

Recommended Stories

ಶಾಮನೂರು ಶಿವಶಂಕರಪ್ಪ ನಿಧನ: ಇಂದು ಕಲಾಪ ಮುಂದೂಡುವ ಸಾಧ್ಯತೆ
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!