ಆಡಳಿತವೇ ನಿಧಿಗಾಗಿ ಶೋಧ ನಡೆಸಿ ಬರಿಗೈಯಲ್ಲಿ ವಾಪಾಸದ ಘಟನೆ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದಲ್ಲಿ ಬುಧವಾರ ನಡೆದಿದೆ. ಕನ್ಯಾಡಿ ಗ್ರಾಮದ ಪಣೆತ್ತಡಿ ಆನಂದ ಶೆಟ್ಟಿಎಂಬವರ ಜಮೀನಿನಲ್ಲಿ ನಿಧಿ ಲಭಿಸಿರುವ ಬಗ್ಗೆ ವದಂತಿಗಳು ಎದ್ದಿತ್ತು.
ಬೆಳ್ತಂಗಡಿ(ಜು.23): ಆಡಳಿತವೇ ನಿಧಿಗಾಗಿ ಶೋಧ ನಡೆಸಿ ಬರಿಗೈಯಲ್ಲಿ ವಾಪಾಸದ ಘಟನೆ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದಲ್ಲಿ ಬುಧವಾರ ನಡೆದಿದೆ. ಕನ್ಯಾಡಿ ಗ್ರಾಮದ ಪಣೆತ್ತಡಿ ಆನಂದ ಶೆಟ್ಟಿಎಂಬವರ ಜಮೀನಿನಲ್ಲಿ ನಿಧಿ ಲಭಿಸಿರುವ ಬಗ್ಗೆ ವದಂತಿಗಳು ಎದ್ದಿತ್ತು.
ಈ ವಿಷಯವಾಗಿ ಅಲ್ಲಿನ ಸ್ಥಳೀಯರು ಜಾಗದ ವಿಡಿಯೋ ಮಾಡಿ ಅಧಿಕಾರಿಗಳಿಗೆ ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ತಹಸೀಲ್ದಾರ್ ಸಮ್ಮುಖದಲ್ಲಿ ಶೋಧ ಕಾರ್ಯವು ತಾಲೂಕಿನ ನಡ ಗ್ರಾ.ಪಂ. ವ್ಯಾಪ್ತಿಯ ಬರಾಯ ಕನ್ಯಾಡಿ ಗ್ರಾಮದ ಪಣೆತ್ತಡಿಯಲ್ಲಿ ನಡೆಯಿತು.
ಪೇಜಾವರ ಶ್ರೀಗಳನ್ನು ಮುದ್ದಾಡಿದ ಪುಟ್ಟ ಕರು
ಆದರೆ ನಿಧಿಯ ಯಾವುದೇ ಕುರುಹುಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಬರಿಗೈಯಲ್ಲಿ ವಾಪಸಾಗಿದ್ದಾರೆ. ಇಲ್ಲಿ ನಿಧಿ ಇರುವ ಬಗ್ಗೆ ದೂರು ಬಂದ ಹಿನ್ನೆಲೆ ಕಾರ್ಯಾಚರಣೆ ನಡೆಸಿದ್ದೇವೆ. ಆದರೆ ನಿಧಿ ಲಭ್ಯವಾಗಿಲ್ಲ ಎಂದು ತಹಸೀಲ್ದಾರ್ ಸ್ಪಷ್ಟನೆ ನೀಡಿದ್ದಾರೆ. ಪೊಲೀಸರೂ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಸ್ಥಳದಲ್ಲಿ ತಾಳೆಮರವಿದ್ದು, ಅದನ್ನು ತೆರವುಗೊಳಿಸುವಾಗ ಮಣ್ಣು ಕುಸಿತಗೊಂಡಿತ್ತು. ಇಲ್ಲಿ ಯಾವುದೇ ನಿಧಿ ಇಲ್ಲ ಎಂದು ಜಮೀನಿನ ಯಜಮಾನ ಆನಂದ ಶೆಟ್ಟಿಮೊದಲೇ ತಿಳಿಸಿದ್ದರು.