ಕೇರಳದ ಕಣ್ಣೂರಿನಿಂದ ಸುಟ್ಟಗಾಯಗಳೊಂದಿಗೆ ಬಂದಿದ್ದ ಆಂಬ್ಯುಲೆಸ್ಸ್‌ನ್ನು ಕರ್ನಾಟಕ ಪೊಲೀಸರು ವಾಪಸ್ ಕಳುಹಿಸಿದ್ದಾರೆ. ಗಾಯಾಳು ಕಣ್ಣೂರು ನಿವಾಸಿ ಆದಿತ್ಯ (11) ಎಂಬವರನ್ನು ವಾಪಸ್ಸು ಕಳುಹಿಸಲಾಗಿದೆ.
ಮಂಗಳೂರು(ಏ.08): ಕೇರಳದ ಕಣ್ಣೂರಿನಿಂದ ಸುಟ್ಟಗಾಯಗಳೊಂದಿಗೆ ಬಂದಿದ್ದ ಆಂಬ್ಯುಲೆಸ್ಸ್‌ನ್ನು ಕರ್ನಾಟಕ ಪೊಲೀಸರು ವಾಪಸ್ ಕಳುಹಿಸಿದ್ದಾರೆ. ಗಾಯಾಳು ಕಣ್ಣೂರು ನಿವಾಸಿ ಆದಿತ್ಯ (11) ಎಂಬವರನ್ನು ವಾಪಸ್ಸು ಕಳುಹಿಸಲಾಗಿದೆ.
ಕೇರಳ ಮುಖ್ಯಮಂತ್ರಿ ಕರ್ನಾಟಕದ ಮುಖ್ಯ ಕಾರ್ಯದರ್ಶಿಗಳ ಜತೆಗೆ ಮಾತುಕತೆ ನಡೆಸಿದ್ದಾರೆ. ಇದರಿಂದಾಗಿ ತುರ್ತು ಚಿಕಿತ್ಸೆಗೆ ಆ್ಯಂಬುಲೆಸ್ಸ್ ಬಿಡಬಹುದು ಎಂದು ತಿಳಿಸಿದ್ದು, ಅದಕ್ಕಾಗಿ ಕಾಸರಗೋಡು ಜಿಲ್ಲಾಧಿಕಾರಿ ಹಾಗೂ ಆರೋಗ್ಯ ಅಧಿಕಾರಿಗಳ ಪತ್ರ ಹಿಡಿದುಕೊಂಡು ದೂರದ ಕಣ್ಣೂರಿನಿಂದ ಆ್ಯಂಬುಲೆಸ್ಸ್ ಮೂಲಕ ಪ್ರಯಾಣ ಬೆಳೆಸಿದ್ದರು.
ಕೇರಳ ಗಡಿಭಾಗ ತೆರವು: ಡಿಸಿಪಿ ಸ್ಥಳಕ್ಕೆ ಭೇಟಿ
ಆದರೆ ಬೆಳಗ್ಗೆ 11 ರ ವೇಳೆಗೆ ಗಡಿಭಾಗ ತಲಪಾಡಿಯತ್ತ ಆ್ಯಂಬುಲೆಸ್ಸ್ ತಲುಪಿತ್ತು. ಆದರೆ ಸುಪ್ರೀಂ ತೀರ್ಪು ಆ ವೇಳೆ ಬಂದಿರಲಿಲ್ಲ. ದ.ಕ ಜಿಲ್ಲಾಡಳಿತದ ನಿರ್ದೇಶನ ಇದ್ದರಿಂದ ಆ್ಯಂಬುಲೆಸ್ಸ್ ಬಿಡಲು ಅಸಾಧ್ಯ ಎಂದು ಪೊಲೀಸರು ಹಾಗೂ ಆರೋಗ್ಯ ಇಲಾಖೆ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಬಾಲಕನಿದ್ದ ಆ್ಯಂಬುಲೆಸ್ಸ್‌ನ್ನು ವಾಪಸ್ ಕಳುಹಿಸಲಾಯಿತು.