ಸುಪ್ರೀಂ ಕೋರ್ಟ್ ತೀರ್ಪಿನಂತೆ ಜಿಲ್ಲಾಡಳಿತ ಆದೇಶದನ್ವಯ ಷರತ್ತಿನ ಮೇಲೆ ಆಂಬ್ಯುಲೆನ್ಸ್ ಸಂಚರಿಸಲು ಅನುಮತಿ ನೀಡಲಾಗಿದೆ. ಗಡಿಭಾಗ ತೆರವು ಕುರಿತು ಪೊಲೀಸರಿಗೆ ಮಾಹಿತಿ ನೀಡುವ ಸಲುವಾಗಿ ಡಿಸಿಪಿ ಅರುಣಾಂಶು ಗಿರಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ನೀಡಿದ್ದಾರೆ.
ಮಂಗಳೂರು(ಏ.08): ಸುಪ್ರೀಂ ಕೋರ್ಟ್ ತೀರ್ಪಿನಂತೆ ಜಿಲ್ಲಾಡಳಿತ ಆದೇಶದನ್ವಯ ಷರತ್ತಿನ ಮೇಲೆ ಆಂಬ್ಯುಲೆನ್ಸ್ ಸಂಚರಿಸಲು ಅನುಮತಿ ನೀಡಲಾಗಿದೆ. ಗಡಿಭಾಗ ತೆರವು ಕುರಿತು ಪೊಲೀಸರಿಗೆ ಮಾಹಿತಿ ನೀಡುವ ಸಲುವಾಗಿ ಡಿಸಿಪಿ ಅರುಣಾಂಶು ಗಿರಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ನೀಡಿದ್ದಾರೆ.
ಆಂಬ್ಯುಲೆನ್ಸ್ ಬಂದಾಗ ಹೆಲ್ಮೆಟ್ ಮಾಸ್ಕ್ ಧರಿಸಿರುವ 18 ಮಂದಿ ಪೊಲೀಸರು ಕೇರಳದಿಂದ ಬರುವ ರೋಗಿಗಳ ಜತೆಗೆ ಆರೋಗ್ಯ ಅಧಿಕಾರಿಗಳ ಜೊತೆಗೆ ಪರಿಶೀಲನೆ ವೇಳೆ ಭಾಗವಹಿಸಲಿದ್ದಾರೆ. ಡಿಸಿಪಿಯವರ ಜತೆಗೆ ಕೋವಿಡ್ 19 ನಿಗ್ರಹ ಪಡೆಯ ವಿಶೇಷ ಆರೋಗ್ಯ ಅಧಿಕಾರಿ ಡಾ.ಭುಜಂಗ ಶೆಟ್ಟಿ ಹಾಗೂ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ರಾಜೇಶ್ವರಿ ಉಪಸ್ಥಿತರಿದ್ದರು.
ಬ್ರ್ಯಾಂಡೆಡ್ ವಸ್ತುಗಳೇ ಬೇಕೆಂದು ಕ್ವಾರಂಟೈನ್ ಕುಟುಂಬಗಳ ಕಿರಿಕ್
ತೀರ್ಪು ಸಮಂಜಸವಲ್ಲ : ಜಿ.ಪಂ ಸದಸ್ಯ
ಸುಪ್ರೀಂ ಕೋರ್ಟ್ ತೀರ್ಪಿನಿಂದ ಕಾಸರಗೋಡು ಭಾಗದವರಿಗೆ ಸಹಕಾರಿ ಆಗಲು ಅಸಾಧ್ಯ. ಕಾಸರಗೋಡು ಆಸ್ಪತ್ರೆಯಿಂದ ಅನುಮತಿ ಪಡೆದು ರೋಗಿಗಳನ್ನು ಕರೆತರುವುದು ಅಸಾಧ್ಯ. ತುರ್ತು ಸಂದರ್ಭದಲ್ಲಿ ಸರಕಾರಿ ಆಸ್ಪತ್ರೆಯಿಂದ ಪತ್ರ ಪಡೆದು ತರುವುದು ಹೇಗೆ ಸಾಧ್ಯ? ಅಲ್ಲದೆ ಸೀಮಿತ ಆಂಬ್ಯುಲೆನ್ಸ್ ಇರುವ ಕಾಸರಗೋಡು ಸರಕಾರಿ ಆಸ್ಪತ್ರೆಗಳಿಂದ ರೋಗಿಗಳನ್ನು ತರುವುದು ಅಸಾಧ್ಯದ ಮಾತು. ತೀರ್ಪು ಸಮಂಜಸ ಆಗಿಲ್ಲ. ಈ ನಿಟ್ಟಿನಲ್ಲಿ ಇಂದು ಮತ್ತೆ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಲಿದ್ದೇವೆ .