
ಬೆಂಗಳೂರು (ಅ.28) ಕರ್ನಾಟಕದಲ್ಲಿ ಪರೀಕ್ಷಾ ಅಕ್ರಮ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. KPSC ಪರೀಕ್ಷಾ ಅಕ್ರಮದ ಕೋಲಾಹಲ ಇನ್ನು ತಣ್ಣಗಾಗಿಲ್ಲ. ತನಿಖೆ, ಹೋರಾಟ, ಪ್ರತಿಭಟನೆಗಳು ಒಂದಡೆಯಾದರೆ, ಮತ್ತೊಂದೆಡೆ KEA ಪರೀಕ್ಷೆಯಲ್ಲೂ ಅಕ್ರಮ ಆರೋಪ ಕೇಳಿಬಂದಿದೆ. KEA ಪರೀಕ್ಷಾ ವ್ಯವಸ್ಥೆಯ ಪಾರದರ್ಶಕತೆ ಬಗ್ಗೆ ಅಭ್ಯರ್ಥಿಗಳು ಪ್ರಶ್ನಿಸಿದ್ದಾರೆ. ಅಭ್ಯರ್ಥಿಯ ಅಂಕಗಳ ವ್ಯತ್ಯಾಸದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಕೆಲ ಅಂಕಗಳು, ಅಭ್ಯರ್ಥಿಗಳ ಫಲಿತಾಂಶಗಳನ್ನು ಮುಂದಿಟ್ಟು ಇವೆಲ್ಲಾ ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಅಭ್ಯರ್ಥಿಗಳು ಮುಂದಿಟ್ಟಿದ್ದಾರೆ.
ಇದೇ ವರ್ಷ ನಡೆದ ಪಿಯುಸಿ ಪರೀಕ್ಷೆಯಲ್ಲಿ ಶೇ.49 ಅಂಕಗಳೊಂದಿಗೆ ಉತ್ತೀರ್ಣನಾಗಿದ್ದ ಅಭ್ಯರ್ಥಿಯೊಬ್ಬರು, KSRP ಪರೀಕ್ಷೆಯಲ್ಲಿ ಪಡೆದಿದ್ದು ಕೇವಲ 25 ಅಂಕ ಮಾತ್ರ. ಆದರೆ ಗ್ರಾಮ ಲೆಕ್ಕಾಧಿಕಾರಿ ಪರೀಕ್ಷೆಯಲ್ಲಿ ಬರೋಬ್ಬರಿ 151 ಅಂಕ ಪಡೆದಿರುವುದಾಗಿ ಉಲ್ಲೇಖಿಸಲಾಗಿದೆ. ಕಠಿಣ ಪ್ರಶ್ನೆಪತ್ರಿಕೆ ಎನ್ನಲಾದ VAO ಪರೀಕ್ಷೆಯಲ್ಲಿ ಇಷ್ಟೊಂದು ಅಂಕ ಹೇಗೆ ಎಂದು ಅಭ್ಯರ್ತಿಗಳು ಪ್ರಶ್ನಿಸಿದ್ದಾರೆ.
ವಿಲೇಜ್ ಅಕೌಂಟ್ ಹುದ್ದೆಗೆ 200 ಅಂಕಗಳಿಗೆ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಅಭ್ಯರ್ಥಿ 151 ಅಂಕಗಳಿಸಿದ್ದಾನೆ. ಪೋಲಿಸ್ ಕಾನ್ ಸ್ಟೇಬಲ್ ಹುದ್ದೆ 100 ಅಂಕಗಳಿಗೆ ನಡೆದ ಪರೀಕ್ಷೆಯಲ್ಲಿ 25 ಅಂಕ ಗಳಿಸಿದ್ದಾನೆ. ಇಷ್ಟೊಂದು ವ್ಯತ್ಯಾಸ ಹೇಗೆ ಎಂದು ಅಭ್ಯರ್ಥಿಗಳು ಪ್ರಶ್ನಿಸಿದ್ದಾರೆ.
31ನೇ ವಯಸ್ಸಿನಲ್ಲಿ ಪಿಯುಸಿ ಪಾಸಾದ ಶಂಕರ್ ಬನ್ನೂರು ಅಂಕಗಳೇ ಈಗ ಅನುಮಾನಕ್ಕೆ ಕಾರಣವಾಗಿದೆ. 2026 ಸೆಪ್ಟೆಂಬರ್ 20ರಂದು ನಡೆದ KSRP ಪರೀಕ್ಷೆಯಲ್ಲಿ 100ಕ್ಕೆ ಕೇವಲ 25 ಅಂಕ, ಗೊತ್ತಿಲ್ಲದ ಪ್ರಶ್ನೆಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ಅಭ್ಯರ್ಥಿ ಟಿಕ್ ಮಾಡಿದ್ದರು. 2026 ಅಕ್ಟೋಬರ್ 4ರಂದು ನಡೆದ VAO ಪರೀಕ್ಷೆಯಲ್ಲಿ ಮಾತ್ರ ಭರ್ಜರಿ ಅಂಕಗಳಿಕೆ ಮಾಡಿದ್ದಾರೆ. 200 ಅಂಕಗಳ VAO ಪರೀಕ್ಷೆಯಲ್ಲಿ 150ಕ್ಕೂ ಅಧಿಕ ಅಂಕ ಪಡೆದಿರುವ ಆರೋಪ ಕೇಳಿಬಂದಿದೆ. 500 ಹುದ್ದೆಗಳ ನೇಮಕಾತಿಗಾಗಿ ನಡೆದ VAO ಪರೀಕ್ಷೆಯ ಅಂಕಗಳೇ ಅಕ್ರಮದ ಆರೋಪಕ್ಕೆ ಕಾರಣವಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಬೆಳಗ್ಗೆ, ಮಧ್ಯಾಹ್ನದ ಪರೀಕ್ಷೆಗೂ ಒಬ್ಬರೇ ಮೇಲ್ವಿಚಾರಕನಾಗಿ ಕಾರ್ಯನಿರ್ವಹಿಸಿದ್ದರು. ಎರಡೂ ಅವಧಿಯ ಪರೀಕ್ಷೆಗಳಿಗೆ ಒಂದೇ ಸಹಿ ಹಾಕಲಾಗಿದೆ. KSRP ಪರೀಕ್ಷೆಯಲ್ಲಿ ಕಡಿಮೆ ಅಂಕ.. VAO ಪರೀಕ್ಷೆಯಲ್ಲಿ 150ಕ್ಕೂ ಅಧಿಕ ಅಂಕ ಹೇಗೆ ಎಂದು ಅಭ್ಯರ್ಥಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ಹಾವೇರಿ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಪರೀಕ್ಷಾ ಅಕ್ರಮದಲ್ಲಿ ಹಲವು ಅಭ್ಯರ್ಥಿಗಳು ಭಾಗಿಯಾಗಿದ್ದಾರೆ ಎಂಬ ಆರೋಪವನ್ನು ಅಭ್ಯರ್ಥಿಗಳು ಮುಂದಿಟ್ಟಿದ್ದಾರೆ. ಹೀಗಾಗಿ KEA ಪರೀಕ್ಷೆಯ ಪಾರದರ್ಶಕತೆ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿದೆ. KPSC ಮಾದರಿಯಲ್ಲೇ KEA ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ ಎಂದು ಆರೋಪ ಬಲಗೊಳ್ಳುತ್ತಿದೆ. ಪರೀಕ್ಷಾ ಅಕ್ರಮದ ಆರೋಪದ ಬಗ್ಗೆ ಸಮಗ್ರ ತನಿಖೆಗೆ ಆಗ್ರಹ ಹೆಚ್ಚಾಗಿದೆ.
ರಾಜ್ಯದಲ್ಲಿ KPSC ಅಕ್ರಮದ ತನಿಖೆ ತೀವ್ರಗತಿಯಿಂದ ನಡೆಯುತ್ತಿದೆ. ಇಡಿ ಅಧಿಕಾರಿಗಳಿಂದ ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಜೊತೆಗೆ ಇನ್ನೊಂದು ಪರೀಕ್ಷೆ ಅಕ್ರಮದ ತನಿಖೆ ನಡೆಯುತ್ತಿದೆ. ವಾಣಿಜ್ಯ ಇಲಾಖೆಯ ಐವತ್ತು ಕೈಗಾರಿಕಾ ವಿಸ್ತಾರಣಾಧಿಕಾರಿ (RPC) ನೇಮಕಾತಿ ಪ್ರಕರಣವೂ ತನಿಖೆ ಮಾಡಲಾಗುತ್ತಿದೆ. ವಿಧಾನ ಸೌಧ ಪೊಲೀಸ್ ಠಾಣೆಯಲ್ಲಿ ಈ ಕುರಿಕು ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆಯನ್ನು ಇಡಿ ಅಧಿಕಾರಿಗಳು ನಡೆಸುತ್ತಿದ್ದಾರೆ. ಸಾಹುಕಾರ್ ಮಗಳು ಸುಮಾ ಸಾಹುಕಾರ್ ವಿರುದ್ದ ಕೇಸ್ ದಾಖಲಾಗಿತ್ತು. ಕಡಿಮೆ ಆದಾಯದ ಇನ್ ಕಮ್ ಸರ್ಟಿಫಿಕೇಟ್ ನೀಡಿದ್ದ ಕೇಸ್ ಕುರಿತು ಇಡಿ ತನಿಖೆ ನಡೆಸುತ್ತಿದೆ. 3B ಮೀಸಾತಿ ಅಡಿಯಲ್ಲಿ ಸುಮಾ ಸಾಹುಕಾರ್ ಪರೀಕ್ಷೆಗೆ ಹಾದರಾಗಿದ್ದರು. 2024 ರಲ್ಲಿ ನೋಟಿಫಿಕೇಷನ್ ನೀಡಲಾಗಿತ್ತು. 2025ರ ಜುಲೈ ನಲ್ಲಿ ಪರೀಕ್ಷೆ ನಡೆಸಿ 2026 ಫೆಬ್ರವರಿ ಯಲ್ಲಿ ಅರ್ಹತಾ ಪಟ್ಟಿ ಬಿಡುಗಡೆ ಆಗಿತ್ತು. ಜಾತಿ ಮತ್ತು ಆದಾಯ ಪ್ರಮಾಣ ಪತ್ರದಲ್ಲಿ 40,000 ರೂಪಾಯಿ ಆದಾಯ ಎಂದು ನಮೂದು ಮಾಡಿದ್ದರು. ಪರಿಶೀಲನೆ ವೇಳೆ ಅರ್ಜಿದಾರ ತಂದೆಗೆ ತಿಂಗಳಿಗೆ 2019 ರಿಂದ 2,05,100 ಇತ್ತು ಯ 2021 ರ ನಂತ್ರ 2,25,000 ರೂ ಸಂಬಳ ಇತ್ತು. ಜೊತೆಗೆ ರಾಜ್ಯಪಾಲರಿಗೆ ಸಲ್ಲಿರುವ ಆದಾಯ ಮಿತಿಗಿಂತ ಹೆಚ್ಚಿನ ಸ್ಥಿರ ಹೊಂದಿರುವುದು ತನಿಖೆ ವೇಳೆ ಪತ್ತೆಯಾಗಿತ್ತು. 3bಯಲ್ಲಿ ಪರೀಕ್ಷೆ ಬರೆಯಲು ಆರರಿಂದ ಎಂಟು ಲಕ್ಷ ಅದಾಯ ಹೊಂದಿರಬಹುದು..ಆದ್ರೆ ಹೆಚ್ಚಿನ ಅದಾಯ ಇದ್ದರೂ ಸಹ ನಕಲಿ ಜಾತಿ ಮತ್ತು ಅದಾಯ ಪತ್ರ ನೀಡಿರುವುದು ತನಿಖರ ವೇಳೆ ಪತ್ತೆಯಾಗಿತ್ತು. 2022 ರಿಂದ ಇದುವರೆಗೆ ಆಗಿರುವ ನೇಮಕಾತಿ ವೇಳೆ ಹಲವಾರು ಅಕ್ರಮ ನಡೆದಿರುವುದು ತನಿಖೆ ವೇಳೆ ಪತ್ತೆಯಾಗಿದೆ.