ಸಂವಿಧಾನ ಬಾಹಿರವಾಗಿ ಜಯ ಮೃತ್ಯುಂಜಯ ಸ್ವಾಮಿಜಿ ಮೀಸಲಾತಿ ಇತ್ತಾಯ ಮಾಡುತ್ತಿದ್ದಾರೆ ಅಂತಾ ರಾಜ್ಯ ಕಾಯಕ ಸಮಾಜಗಳ ಒಕ್ಕೂಟದ ಅಧ್ಯಕ್ಷ, ಪರಿಷತ್ ಮಾಜಿ ಸದಸ್ಯ ಕೆಸಿ ಪುಟ್ಟ ಸಿದ್ದಶೆಟ್ಟಿ ಆರೋಪಿಸಿದರು.
ವರದಿ: ಗಿರೀಶ್ ಕುಮಾರ್, ಗದಗ
ಗದಗ (ಏ.07): ಪಂಚಮಸಾಲಿ ಸಮಾಜ (Panchamasali Community) ಸಾಮಾಜಿಕವಾಗಿ ಪ್ರಬಲವಾಗಿದ್ದು, ಈಗಾಗಲೇ 3Bಯಡಿ ಶೇಕಡಾ 5 ಮೀಸಲಾತಿ ಪಡೆಯುತ್ತಿದೆ. ಹೀಗಾಗಿ ಪಂಚಮಸಾಲಿ ಸಮುದಾಯಕ್ಕೆ ಯಾವುದೇ ಕಾರಣಕ್ಕೂ 2A ಮೀಸಲಾತಿ (2A Reservation) ನೀಡಕೂಡದು. ಸಂವಿಧಾನ ಬಾಹಿರವಾಗಿ ಜಯ ಮೃತ್ಯುಂಜಯ ಸ್ವಾಮಿಜಿ (Jaya Mruthyunjaya Swamiji) ಮೀಸಲಾತಿ ಇತ್ತಾಯ ಮಾಡುತ್ತಿದ್ದಾರೆ ಅಂತಾ ರಾಜ್ಯ ಕಾಯಕ ಸಮಾಜಗಳ ಒಕ್ಕೂಟದ ಅಧ್ಯಕ್ಷ, ಪರಿಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ದ ಶೆಟ್ಟಿ (KC Puttasiddashetty) ಆರೋಪಿಸಿದರು.
undefined
ಗದಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಂದಾಗಿದ್ದ ಪಂಚಮಸಾಲಿ ಸಮಾಜವನ್ನ ಸ್ವಾಮಿಗಳು ಮೂರು ಭಾಗ ಮಾಡಿದ್ದಾರೆ.. ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮಿಗಳೇ ಮೀಸಲಾತಿ ಕೂಗು ಸರಿಯಲ್ಲ ಅಂತಾ ನಮ್ಮೆದುರು ಹೇಳಿದ್ದಾರೆ. ಆದರೆ, ಜಯಮೃತ್ಯುಂಜಯ ಸ್ವಾಮಿಗಳು ಸಂವಿಧಾನದ ಆಶಯದ ವಿರುದ್ಧ ಮೀಸಲಾತಿ ಪಟ್ಟು ಹಿಡಿದಿದ್ದಾರೆ. ಸಮಾಜದ ದಾರಿ ತಪ್ಪಿಸುತ್ತಿರುವ ಸ್ವಾಮಿಗಳು ಪೀಠತ್ಯಾಗ ಮಾಡಬೇಕು ಅಂತಾ ಕೆಸಿ ಪುಟ್ಟ ಸಿದ್ದಶೆಟ್ಟಿ ಹರಿಹಾಯ್ದರು.
ಸಿದ್ದರಾಮಯ್ಯನವರೇ ನಿಮ್ಮಂತ ನಾಯಕರೇ ಹೀಗೆ ಮಾತನಾಡಿದರೆ ಹೇಗೆ?: ಶಾಸಕ ಅರವಿಂದ ಬೆಲ್ಲದ
ಈ ಹಿಂದೆ ಸಮಾಜಕ್ಕೆ ಮೀಸಲಾತಿಯೇ ಬೇಡ ಅಂತಾ ಪಂಚಮಸಾಲಿ ಸಮಾಜ ವಾದಿಸಿದ್ದಿದೆ. ಹೀಗಿದ್ದರೂ ಸಮಾಜಕ್ಕೆ 3B ಮೀಸಲಾತಿ ಸಿಕ್ಕಿದೆ. ಶ್ರೀಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮಂಡಳ ಆಯೋಗ, ಹಾವನೂರು ಆಯೋಗ, ದ್ವಾರಕಾನಾಥ್ ಆಯೋಗದ ವರದಿಯಲ್ಲಿ ಪಂಚಮಸಾಲಿ ಸಮಾಜ ಹಿಂದುಳಿದಿದೆ ಅಂತಾ ಉಲ್ಲೇಖಿಸಿಲ್ಲ. ಶಾಲೆಯಲ್ಲಿ ಹೆಸರು ನೋಂದಾಯಿಸುವಾಗ ವೀರಶೈವ ಲಿಂಗಾಯತ ಅಂತಾ ಬರೆಸಿದ್ದಾರೆ. ಈಗ ಪಂಚಮಸಾಲಿ ಸಮಾಜಕ್ಕೆ ಪ್ರತ್ಯೇಕ ಮೀಸಲಾತಿ ಯಾಕೆ ಅಂತಾ ಅವ್ರು ಪ್ರಶ್ನಿಸಿದರು. ಸಮಾಜದ ಸ್ವಾಸ್ಥ್ಯ ಹಾಳು ಮಾಡಲು ವೀರಶೈವ ಲಿಂಗಾಯತ ಉಪಜಾತಿಯಾಗಿರುವ ಪಂಚಮಸಾಲಿಗರನ್ನ ಎತ್ತಿಕಟ್ಟಿದ್ದಾರೆ. ಅಲ್ಲದೇ ಪ್ರಚೋದನಕಾರಿ ಭಾಷಣ ಮಾಡಿ ಸರ್ಕಾರಕ್ಕೆ ಧಮ್ಕಿ ಹಾಕಿದ್ದಾರೆ. ಗಡುವು ನೀಡಿದ್ದಾರೆ. ಹೀಗಾಗಿ ಪಂಚಮಸಾಲಿ ಮೀಸಲಾತಿ ಹೋರಾಟವನ್ನ ಒಕ್ಕೂಟ ಪ್ರಬಲವಾಗಿ ವಿರೋಧಿಸುತ್ತದೆ ಎಂದರು.
ಪಂಚಮಸಾಲಿ 2A ಮೀಸಲಾತಿಯಿಂದ ಕಾಯಕ ಸಮಾಜಕ್ಕೆ ಅನ್ಯಾಯ: ಪಂಚಮಸಾಲಿ ಸಮಾಜವನ್ನ 2 A ಮೀಸಲಾತಿಗೆ ಸೇರಿಸಿದ್ರೆ, ಈಗಾಗಲೆ 2A ಪಟ್ಟಿಯಲ್ಲಿರುವ 107 ಸಣ್ಣಪುಟ್ಟ ಸಮುದಾಯಕ್ಕೆ ತೊಂದರೆಯಾಗಲಿದೆ.. ಜಮೀನು ಇಲ್ಲದೇ ಕಾಯಕವನ್ನೇ ನಂಬಿಕೊಂಡಿರುವ ಸಮಾಜಗಳವು.. ಒಳಮೀಸಲಾತಿ ಇರದ ಕಾರಣ ಅಲ್ಲಿಯೂ ಕೆಲವೇ ಕೆಲ ಸಮಾಜಗಳಿಗೆ ಮೀಸಲಾತಿ ತಲುಪುತ್ತಿದೆ. ಹೀಗಿರುವಾಗಿ ಪ್ರಬಲ ಸಾಮಾಜ 2A ಮೀಸಲಾತಿ ಸೇರುವುದು ಸಲ್ಲ ಎಂದು ಪ್ರತಿಪಾದಿಸಿದರು. ರಾಜ್ಯ ಹಿಂದುಳಿದ ಆಯೋಗ ಎದುರು ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಬೇಡ ಅನ್ನೋ ವಾದ ಮಂಡಿಸಲಾಗಿದೆ.. ಪ್ರಭಾವಿ ಸಚಿವರು ಶಾಸಕರು ಸಮಾಜದಲ್ಲಿದ್ದಾರೆ. ಶಿಕ್ಷಣ ಸಂಸ್ಥೆಯ ಮಾಲೀಕರು, ಬೃಹತ್ ಉದ್ಯಮೆದಾರರು, ಜಮೀನು ಒಡೆತನ ಹೊಂದಿದವರಿದ್ದಾರೆ. ಹೀಗಾಗಿ ಮೀಸಲಾತಿ ವಿಚಾರ ಸರಿಯಲ್ಲ ಅಂತಾ ಪುಟ್ಟ ಸಿದ್ದಶೆಟ್ಟಿ ಹೇಳಿದರು.
Bengaluru: ಹಣಕ್ಕಾಗಿ ಮಗನಿಗೆ ಬೆಂಕಿ ಇಟ್ಟ ಕ್ರೂರಿ ತಂದೆ: ಚಿಕಿತ್ಸೆ ಫಲಿಸದೆ ಮಗ ಸಾವು
ಸರ್ಕಾರಕ್ಕೆ ಅಂತಿಮ ಗಡುವು ನೀಡಿರುವ ಜಯ ಮೃತ್ಯುಂಜಯ ಶ್ರೀ: ‘ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಕಲ್ಪಿಸುವ ಸಂಬಂಧ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಮಾರ್ಚ್ 31ರೊಳಗೆ ವರದಿ ಪಡೆದು, ಏಪ್ರಿಲ್ 14ರಂದು ಮೀಸಲಾತಿ ಘೋಷಣೆ ಮಾಡಬೇಕೆಂದು ಪಂಚಮಸಾಲಿ ಸಮಾಜ ಸರ್ಕಾರಕ್ಕೆ ಅಂತಿಮ ಗಡುವು ನೀಡಿದೆ. ಮುಂದಿನ ಹೋರಾಟದ ರೂಪುರೇಷೆ ಸಿದ್ಧಗೊಳಿಸುದಾಗಿಯೂ ಸ್ವಾಮಿಗಳು ಹೇಳಿದ್ದಾರೆ. ಮುಖ್ಯಮಂತ್ರಿಗಳು ಮೌನ ವಹಿಸಿದ್ದು, ಶ್ರೀಗಳಲ್ಲಿ ಅಸಮಾಧಾನ ತರಿಸಿದೆ.