ರಾಜ್ಯದ ನಾಲ್ವರು ಸಚಿವರು ರಾಜೀನಾಮೆ ನೀಡಬೇಕು. ನುಡಿದಂತೆ ನಡೆದುಕೊಳ್ಳದ ನಾಲ್ವರು ತಕ್ಷಣ ತಮ್ಮ ಸ್ಥಾನ ತೊರೆಯಬೇಕೆನ್ನುವ ಆಗ್ರಹ ಕೇಳಿ ಬಂದಿದೆ.
ಕೊಳ್ಳೇಗಾಲ (ಏ.08): ಕರ್ನಾಟಕ ಸರ್ಕಾರದ ನಾಲ್ಕು ಪ್ರಭಾವಿ ಸಚಿವರು ಪ್ರಮಾಣ ವಚನ ಸ್ವೀಕರಿಸುವ ವೇಳೆ ಪ್ರತಿಜ್ಞಾವಿಧಿ ಸ್ವೀಕರಿಸಿದಂತೆ ನಡೆದುಕೊಳ್ಳದೆ ಸಂವಿಧಾನದ ಆಶಯ ಗಾಳಿಗೆ ತೂರಿದ್ದಾರೆ. ಜಾತಿ ಮೀಸಲಾತಿಗಾಗಿ ಸರ್ಕಾರ ಹಾಗೂ ಮುಖ್ಯಮಂತ್ರಿ ಮುಂದೆ ಒತ್ತಡ ಹೇರುತ್ತಿದ್ದಾರೆ. ಸರ್ಕಾರ ಸಹಾ ಇದಕ್ಕೆ ಸೊಪ್ಪು ಹಾಕುತ್ತಿದೆ. ಹಾಗಾಗಿ, ನಾಲ್ಕು ಮಂದಿ ಸಚಿವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್‌ನ ಮಾಜಿ ಸದಸ್ಯರೂ, ಕಾಯಕ ಸಮಾಜಗಳ ರಾಜ್ಯಾಧ್ಯಕ್ಷ ಕೆ ಸಿ ಪುಟ್ಟಸಿದ್ಧ ಶೆಟ್ಟಿಆಗ್ರಹಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೀಸಲಾತಿ ಎಂಬುದು ಸಮಾಜಿಕ ಪಿಡುಗು, ಅಂತಹ ಸಾಮಾಜಿಕ ಪಿಡುಗಿಗೆ ಪಂಚಮಸಾಲಿ ಹೋರಾಟ ಮಾಡುತ್ತಿದ್ದಾರೆ. ಅವರ ಹೋರಾಟ ಈಗ ತಣ್ಣಗಾಗಿದೆ. ಇದಕ್ಕೂ ಮುನ್ನ ಸರ್ಕಾರದ ಪ್ರಭಾವಿ ಸಚಿವರಾದ ಮುರುಗೇಶ್ ನಿರಾಣಿ, ಸಿ ಸಿ ಪಾಟೀಲ್, ಅಶೋಕ್, ಅಶ್ವಥ್ ನಾರಾಯಣ ಅವರು ತಾವು ಪ್ರಮಾಣ ವಚನ ಸ್ವೀಕರಿಸುವ ವೇಳೆ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದು, ಜನಾಂಗದ ಪರವಾಗಿ ಮೀಸಲಾತಿಗಾಗಿ ಒತ್ತಡ ಹೇರುವ ಮೂಲಕ ತದ್ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಹಾಗಾಗಿ, ಇವರಿಗೆ ನೈತಿಕತೆ ಇದ್ದರೆ ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.
undefined
ವಿಧಾನಸಭೆಯ ಹೊರಗಡೆ ಸಂಘಟಿತರಾಗಿ ಬೇಡಿಕೆಗಾಗಿ ಧ್ವನಿ ಎತ್ತುತ್ತಿದ್ದೇವೆ. ಆದರೆ, ಸಚಿವರ ಈ ಕಾರ್ಯ ವೈಖರಿಯಿಂದಾಗಿ ಮಡಿವಾಳ, ಸವಿತಾ ಸಮಾಜ, ಗಾಣಿಗಶೆಟ್ಟಿ, ವಿಶ್ವಕರ್ಮ, ಉಪ್ಪಾರ, ಬಳೆಶೆಟ್ಟಿ, ಕುಂಬಾರ, ಈಡಿಗ ಯಾದವ, ಸೋಲಿಗ, ಆದಿವಾಸಿಗಳು, ದೇವಾಂಗ ಸೇರಿದಂತೆ ಹಲವು ಸಮುದಾಯ ಇಂದು ತಬ್ಬಲಿಗಳಾಗಿವೆ. ಜೊತೆಗೆ ಕೊರಮ, ಮೇದರು, ಬಡಗಿಗಳು, ಕಮ್ಮಾರರು ಸಹ ಇಂದು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಸರ್ಕಾರದ ಆಡಳಿತದಲ್ಲಿ ಸಿಎಂ ಕುಟುಂಬದವರ ಹಸ್ತಕ್ಷೇಪ: ಸಚಿವ ಸೋಮಶೇಖರ್ ಪ್ರತಿಕ್ರಿಯೆ ...
ಪ್ರವರ್ಗ- 2 ಎ ರಲ್ಲಿ 102ಜಾತಿ, ಪ್ರವರ್ಗ-91ರಲ್ಲಿ 95 ಜಾತಿಗಳಿದ್ದು, ಒಟ್ಟು 197ಜಾತಿ ಸಮಾಜದ ಬಂಧುಗಳಿದ್ದಾರೆ. ಈಗ ಪಂಚಮಸಾಲಿ ಸಮಾಜ, ಸವಾರಿ ಮಾಡಲು ಹೊರಟಿದೆ. ಇದನ್ನ ನಾವು ಖಂಡಿಸುತ್ತೆವೆ. ಕಳೆದ ಮಾ.18ರಲ್ಲಿ ಸಿ.ಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದು, ಅವರಿಗೂ ಮನದಟ್ಟು ಮಾಡಿಕೊಡಲಾಗಿದೆ. ಪಂಚಮಸಾಲಿಗಳಿಗೆ ಸೊಪುತ್ರ್ಪ ಹಾಕಬೇಡಿ, ಇದು ಸಂವಿಧಾನದ ಆಶಯಕ್ಕೆ ವಿರುದ್ಧ ವಾಗಲಿದೆ ಎಂಬ ಸಂದೇಶ ಸಹಾ ರವಾನಿಸಲಾಗಿದೆ ಎಂದರು.
ಪಂಚಮಸಾಲಿಗಳ ಚಳುವಳಿ ಈಗ ತಣ್ಣಗಾಗಿದೆ. ಈಗ ರಚಿಸಿರುವ ಉನ್ನತ ಸಮಿತಿ ಕಣ್ಣೊರೆಸುವ ನಾಟಕ, ಯಡಿಯೂರಪ್ಪ ಅವರನ್ನು ವಶೀಕರಣ ಮಾಡಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು. ಸರ್ಕಾರಗಳು ಈಗಿರುವ ಶೇ. 50ರ ಮೀಸಲಾತಿಯನ್ನು ಶೇ.73ಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು, ತಮಿಳುನಾಡು, ಮಹಾರಾಷ್ಟ್ರದಂತೆ ಮೀಸಲಾತಿ ಪ್ರಮಾಣ ಹೆಚ್ಚಿಸಿ ಎಂದು ಒತ್ತಾಯಿಸಿದರು. ಮೀಸಲಾತಿ ಜಾರಿಯಲ್ಲೂ ಸರ್ಕಾರ, ಸಮಾಜ ತುಳಿಯುವ ಕೆಲಸ ಮಾಡುತ್ತಿದೆ ಎಂದರು.