ಅಡುಗೆ ಅನಿಲ ಸೋರಿಕೆಯಿಂದ ಮನೆಗೆ ಬೆಂಕಿ

By Kannadaprabha NewsFirst Published Sep 23, 2020, 9:59 AM IST
Highlights

ಅಡುಗೆ ಅನಿಲ ಸೋರಿಕೆಯಾಗಿ ಸಂಪೂರ್ಣ ಮನೆ ಹಾಗೂ ಅನೇಕ ವಸ್ತುಗಳು ಸುಟ್ಟು ಕರಕಲಾಗಿವೆ.

ಗುಬ್ಬಿ (ಸೆ.23): ಅಡುಗೆ ಅನಿಲ ಸೋರಿಕೆಯಿಂದ ಹಬ್ಬಿದ ಬೆಂಕಿ ಕ್ಷಣಾರ್ಧದಲ್ಲಿ ಮನೆಯಲ್ಲಿನ ಗೃಹೋಪಯೋಗಿ ವಸ್ತುಗಳನ್ನು ಸುಟ್ಟು ಕರಕಲಾಗಿಸಿದ ಘಟನೆ ಮಂಗಳವಾರ ಪಟ್ಟಣದ ಸಿಡಿಲು ಬಸವೇಶ್ವರ ದೇವಾಲಯದ ಬಳಿ ನಡೆದಿದೆ.

ಶಿಕ್ಷಕ ನಿಂಗಣ್ಣ ಅವರ ಮನೆಯಲ್ಲಿ ಬೆಳಿಗ್ಗೆ ಎಂದಿನಂತೆ ಅಡುಗೆ ಸಿದ್ದ ಪಡಿಸುತ್ತಿದ್ದ ಸಂದರ್ಭದಲ್ಲಿ ಸಿಲೆಂಡರ್‌ ಮೂಲಕ ಅನಿಲ ಸೋರಿಕೆಯಾಗಿ ಬೆಂಕಿ ಕೆನ್ನಾಲಿಗೆ ಅಡುಗೆಮನೆಯನ್ನು ಪಸರಿಸಿದೆ. ನಂತರ ಶಿಕ್ಷಕ ನಿಂಗಣ್ಣ ಸಿಲೆಂಡರ್‌ ಹೊರ ತರುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲ್ಲ. ಕ್ಷಣಾರ್ಧದಲ್ಲಿ ಮನೆಯ ಹೊರಾಂಡಕ್ಕೂ ಹಬ್ಬಿದ ಬೆಂಕಿಗೆ ಟಿವಿ, ಫ್ರಿಡ್ಜ್‌, ಬೀರು ಕೂಡಾ ಆಹುತಿಯಾಗಿದೆ. ಬೀರುವಿನಲ್ಲಿದ್ದ 10 ಸಾವಿರ ನಗದು ಹಣದ ಜತೆ ಬೆಲೆಬಾಳುವ ವಸ್ತ್ರಗಳು ಸುಟ್ಟು ಕರಕಲಾಗಿದೆ.

ಗೃಹಿಣಿಯ ಕೊಂದು ಚಿನ್ನಾಭರಣ ದೋಚಿದ್ದ ಆರೋಪಿಗಳಿಗೆ ಗುಂಡು ...

ಶಿಕ್ಷಕ ನಿಂಗಣ್ಣ ಮತ್ತು ಪುತ್ರ ಇಬ್ಬರೇ ಮನೆಯಲ್ಲಿ ಅಡುಗೆ ಕೆಲಸಕ್ಕೆ ಮುಂದಾಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಲಕ್ಷಾಂತರ ರೂಗಳ ನಷ್ಟಸಂಭವಿಸಿದೆ ಎಂದು ತಿಳಿದು ಬಂದಿದೆ. ಅದೃಷ್ಟವಶಾತ್‌ ಸಿಲಿಂಡೆರ್‌ ಸ್ಪೋಟವಾಗಿಲ್ಲ. ಯಾವುದೇ ಪ್ರಾಣಾಪಾಯವಾಗಿಲ್ಲ. ಭಾರಿ ಅನಾಹುತಕ್ಕೆ ಮುನ್ನಾ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವ ಕೆಲಸ ಮಾಡಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡರು.

click me!