ಯಕ್ಷಗಾನಕ್ಕೆ ‌ಕಾಲಮಿತಿ, ಪಾದರಕ್ಷೆ ಕಳಚಿ ಕಟೀಲು ದೇವಿ ಸನ್ನಿಧಾನಕ್ಕೆ ಹೆಜ್ಜೆ ಹಾಕಿದ ಭಕ್ತರು

By Gowthami K  |  First Published Nov 6, 2022, 7:02 PM IST

ಕಟೀಲು ಯಕ್ಷಗಾನ ಮೇಳಗಳಿಗೆ ಕಾಲಮಿತಿ‌ ನಿರ್ಬಂಧ ವಿಧಿಸಿರುವುದನ್ನು ವಿರೋಧಿಸಿ  'ಕಟೀಲಮ್ಮನೆಡೆ ಭಕ್ತರ ನಡೆ' ಜಾಥಾ ನಡೆದಿದೆ. ಕಟೀಲು ದೇವಸ್ಥಾನದ ಆಡಳಿತ ಮಂಡಳಿಯ ನಿರ್ಧಾರಕ್ಕೆ ಭಕ್ತರು ಆಕ್ರೋಶ ಭುಗಿಲೆದ್ದಿದ್ದು, ಆಡಳಿತ ಮಂಡಳಿಯ ನಿರ್ಧಾರ ಖಂಡಿಸಿ ಬರಿಗಾಲಲ್ಲಿ ಪಾದಯಾತ್ರೆ ಮಾಡಿ ದೇವಿಯಲ್ಲಿ ಪ್ರಾರ್ಥನೆ ಮಾಡಿಕೊಳ್ಳಲಾಗಿದೆ.


ಮಂಗಳೂರು (ನ.6): ರಾತ್ರಿ ಧ್ವನಿ ವರ್ಧಕ ನಿರ್ಬಂಧದ ಹಿನ್ನೆಲೆಯಲ್ಲಿ ಯಕ್ಷಗಾನಕ್ಕೆ ‌ಕಾಲಮಿತಿ ತಡೆ ಹಾಕಿರುವ ವಿರುದ್ದ ಯಕ್ಷಗಾನ ಪ್ರಿಯರು ಸಿಟ್ಟಾಗಿದ್ದು,  ಕಟೀಲು ಯಕ್ಷಗಾನ ಮೇಳಗಳಿಗೆ ಕಾಲಮಿತಿ‌ ನಿರ್ಬಂಧ ಹೇರಿರುವ ವಿರುದ್ದ ಅಸಮಾಧಾನ ವ್ಯಕ್ತಪಡಿಸಿ ಕಟೀಲು ದೇವಿಯ ಮೊರೆ ಹೋಗಲು ಯಕ್ಷ ಪ್ರಿಯರು ನಿರ್ಧರಿಸಿ ಇಂದು ಕಟೀಲು ದುರ್ಗಾಪರಮೇಶ್ವರಿ ದೇವಿಯ ಮೊರೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ 'ಕಟೀಲಮ್ಮನೆಡೆ ಭಕ್ತರ ನಡೆ' ಜಾಥಾ ನಡೆದಿದೆ. ಕಟೀಲು ದೇವಸ್ಥಾನದ ಆಡಳಿತ ಮಂಡಳಿಯ ನಿರ್ಧಾರಕ್ಕೆ ಭಕ್ತರು ಆಕ್ರೋಶ ಭುಗಿಲೆದ್ದಿದ್ದು, ಆಡಳಿತ ಮಂಡಳಿಯ ನಿರ್ಧಾರ ಖಂಡಿಸಿ ಪಾದಯಾತ್ರೆ ಹಮ್ಮಿಕೊಂಡಿದ್ದು ಮಂಗಳೂರಿನ ಬಜ್ಪೆಯಿಂದ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದವರೆಗೆ ಸುಮಾರು   ಹತ್ತು ಕಿ.ಮೀ ಪಾದಯಾತ್ರೆ ನಡೆಸಲಾಗಿದೆ. ಐದು ಸಾವಿರಕ್ಕೂ ಹೆಚ್ಚು ಭಕ್ತರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಪಾದರಕ್ಷೆಯನ್ನು ಕಳಚಿ ಕಟೀಲು ದೇವಿ ಭಕ್ತರು ಹೆಜ್ಜೆ ಹಾಕಿದ್ದು, ಈ ಹಿಂದಿನಂತೆ ರಾತ್ರಿಯಿಂದ ಬೆಳಗ್ಗಿನವರೆಗೆ ಹರಕೆಯ ಯಕ್ಷಗಾನ ನಡೆಸುವಂತೆ ಒತ್ತಾಯ ಮಾಡಿದ್ದಾರೆ. ಕಾಲಮಿತಿ ಯಕ್ಷಗಾನ ಪ್ರದರ್ಶನದಿಂದ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತೆ ಎಂಬ ಆರೋಪ ಕೇಳಿಬಂದಿದೆ.

ಸದ್ಯ ಸಂಜೆ 4:30 ರಿಂದ ರಾತ್ರಿ 10 ಗಂಟೆವರೆಗೆ ಯಕ್ಷಗಾನ ಪ್ರದರ್ಶನ ನಡೆಸಲು‌ ಆಡಳಿತ ಮಂಡಳಿ ನಿರ್ಧರಿಸಿದೆ. ಧ್ವನಿವರ್ಧಕ ಬಳಕೆಯ ಬಗ್ಗೆ ಸರ್ಕಾರದ ಮಾರ್ಗಸೂಚಿ ಪಾಲಿಸಲು ಆಡಳಿತ ಮಂಡಳಿ ಮುಂದಾಗಿದೆ. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಧಾರ್ಮಿಕದತ್ತಿ‌ ಇಲಾಖೆಯ ಅಧೀನಕ್ಕೆ ಒಳಪಟ್ಟಿದೆ. ಆಜಾನ್ ವಿವಾದದ ಬಳಿಕ ಧ್ವನಿವರ್ಧಕ ಬಳಕೆಯ ನಿರ್ಬಂಧದ ಮಾರ್ಗಸೂಚಿಯನ್ನು ಸರ್ಕಾರ ಹೊರಡಿಸಿತ್ತು. ಹೀಗಾಗಿ ಯಕ್ಷಗಾನಕ್ಕೆ ‌ಕಾಲಮಿತಿ ನಿಗದಿ  ಮಾಡಲಾಗಿತ್ತು.

Tap to resize

Latest Videos

ಯಕ್ಷಗಾನಕ್ಕೆ ಕಾಲಮಿತಿ, ಕಟೀಲು ದೇವಿಯ ಮೊರೆ ಹೋಗಲು ನಿರ್ಧಾರ, ರಾತ್ರಿ ಪ್ರದರ್ಶನಕ್ಕೆ ಆಗ್ರಹ!

ಯಕ್ಷಗಾನಕ್ಕೆ ‌ಕಾಲಮಿತಿ ನಿಗದಿ ವಿರುದ್ದ ಬೃಹತ್ ಶಕ್ತಿ ಪ್ರದರ್ಶನ ತೋರಲಾಗಿದ್ದು,  ಶ್ರೀ‌ಕಟೀಲು ಯಕ್ಷಸೇವಾ ಸಮನ್ವಯ ಸಮಿತಿ ಹೆಸರಲ್ಲಿ ಬೃಹತ್ ಪಾದಯಾತ್ರೆ ನಡೆಸಲಾಯ್ತು. ಪಾದಯಾತ್ರೆ ಬಳಿಕ ಕಟೀಲು ಅಮ್ಮನಿಗೆ ಪ್ರಾರ್ಥನೆ ಸಲ್ಲಿಸಲಾಯ್ತು.

ಯಕ್ಷಗಾನದಲ್ಲಿ ಕಾಲಮಿತಿ ಪ್ರದರ್ಶನ ಅನಿವಾರ್ಯವೇ?

ರಾತ್ರಿ ಧ್ವನಿವರ್ಧಕ ನಿರ್ಬಂಧ ಹಿನ್ನೆಲೆಯಲ್ಲಿ ಕಟೀಲು ಯಕ್ಷಗಾನ ಮೇಳಗಳಿಗೆ ಕಾಲಮಿತಿ‌ ನಿರ್ಬಂಧ ವಿಧಿಸಲಾಗಿತ್ತು. ಕಾಲಮಿತಿ ನಿಗದಿ ಪಡಿಸಿ ಕಟೀಲು ಯಕ್ಷಗಾನದ ಆಡಳಿತ ಮಂಡಳಿಯೇ ಹಲವು ಸಮಯದ ಹಿಂದೆ ನಿರ್ಧಾರ ಮಾಡಿತ್ತು. ದ.ಕ ಜಿಲ್ಲೆಯ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಿಂದ ಆರು ಯಕ್ಷಗಾನ ಮೇಳಗಳು ಹೊರಡುತ್ತಿದ್ದು, ಸದ್ಯ ಸಂಜೆ  4:30 ರಿಂದ ರಾತ್ರಿ 10 ಗಂಟೆವರೆಗೆ ಮಾತ್ರ ಯಕ್ಷಗಾನ ‌ಪ್ರದರ್ಶನ ನಡೆಸಲಾಗುತ್ತಿದೆ.‌ ಈ ಹಿಂದೆ ರಾತ್ರಿ ಪೂರ್ತಿ ನಡೆಯುತ್ತಿದ್ದ ಯಕ್ಷಗಾನಕ್ಕೆ ಈಗ ಬ್ರೇಕ್ ಹಾಕಲಾಗಿದೆ.

click me!