ವಿದ್ಯಾರ್ಥಿಗಳ ಜೊತೆ ಜೆಡಿಎಸ್ ಮುಖಂಡ ಹುಟ್ಟುಹಬ್ಬ ಆಚರಣೆ

Published : Jul 19, 2019, 10:47 AM IST
ವಿದ್ಯಾರ್ಥಿಗಳ ಜೊತೆ  ಜೆಡಿಎಸ್ ಮುಖಂಡ ಹುಟ್ಟುಹಬ್ಬ ಆಚರಣೆ

ಸಾರಾಂಶ

ಜೆಡಿಎಸ್‌ ಮುಖಂಡ ಲೋಕೇಶ್ವರ್‌ ತಿಪಟೂರಿನ  ಗಾಂಧಿನಗರದ ಭೋವಿ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡರು. ನಗರದ ಹಲವು ಶಾಲೆಗಳಲ್ಲಿ ಮಕ್ಕಳಿಗೆ ನೋಟ್‌ಪುಸ್ತಕ ಮತ್ತು ಸಿಹಿ ವಿತರಿಸಲಾಯಿತು.

ತುಮಕೂರು(ಜು.19): ಖಾಸಗಿ ಶಾಲೆಯ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಬೇಕು. ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ವಿವಿಧ ಉನ್ನತ ಸ್ಥಾನ ಹಾಗೂ ಹುದ್ದೆಗಳನ್ನು ಅಲಂಕರಿಸಿದ್ದಾರೆಂದು ನಿವೃತ್ತ ಪೊಲೀಸ್‌ ಅಧಿಕಾರಿ ಹಾಗೂ ಜೆಡಿಎಸ್‌ ಮುಖಂಡ ಲೋಕೇಶ್ವರ್‌ ತಿಳಿಸಿದರು.

ತಿಪಟೂರುನಗರದ ಗಾಂಧಿನಗರದ ಭೋವಿ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಮಕ್ಕಳೊಂದಿಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡು ನೋಟ್‌ಪುಸ್ತಕ ಹಾಗೂ ಸಿಹಿ ವಿತರಿಸಿ ಮಾತನಾಡಿದರು.

ಮಕ್ಕಳಲ್ಲಿ ಓದುವ ಛಲ, ಶ್ರದ್ಧೆ ಬೆಳೆಯಲಿ:

ನಾನು ಸಹ ಸರ್ಕಾರಿ ಶಾಲೆಯಲ್ಲಿ ಓದಿ ಕಾಲೇಜು ಉಪನ್ಯಾಸಕನಾಗಿ ಕರ್ತವ್ಯ ನಿರ್ವಹಿಸಿ ನಂತರ ಪೊಲೀಸ್‌ ಅಧಿಕಾರಿಯಾಗಿ ಮುಖ್ಯಮಂತ್ರಿಗಳಿಂದ ಚಿನ್ನದ ಪದಕ ಪಡೆದುಕೊಂಡಿದ್ದೇನೆ. ಮಕ್ಕಳು ಓದುವ ಛಲ, ಪ್ರಾಮಾಣಿಕತೆ, ಶ್ರದ್ಧೆಯನ್ನು ಮೈಗೂಡಿಸಿಕೊಳ್ಳಬೇಕು. ತಂದೆ-ತಾಯಿ, ಗುರು-ಹಿರಿಯರ ಮಾಗದರ್ಶನದಲ್ಲಿ ವಿದ್ಯಾಭ್ಯಾಸ ಪಡೆದು ಉನ್ನತ ಹುದ್ದೆ ಅಲಂಕರಿಸಬೇಕು ಎಂದರು.

ಜೆಡಿಎಸ್‌ ತಾಲೂಕು ಅಧ್ಯಕ್ಷ ಸೊಪ್ಪುಗಣೇಶ್‌, ನಗರಸಭೆ ಸದಸ್ಯರಾದ ಆಸೀಫಾಬಾನು, ಭಾರತಿ, ಜಯರಾಂ, ಎಪಿಎಂಸಿ ನಾಮನಿರ್ದೇಶಿತ ಸದಸ್ಯ ಸಾರ್ಥವಳ್ಳಿ ಶಿವಕುಮಾರ್‌, ನಗರಸಭೆ ಮಾಜಿ ಸದಸ್ಯ ರಾಜಶೇಖರ್‌, ಮುಖಂಡರಾದ ನಾಗರಾಜು, ಮೋಹನ್‌, ಫೈರೋಜ್‌, ಅಕ್ರಂಪಾಷ, ರಾಜೇಶ್‌ ಇದ್ದರು.

ವಿವಿಧೆಡೆ ನೋಟ್‌ಬುಕ್‌, ಸಿಹಿ ವಿತರಣೆ:

ಮಂಜುನಾಥ್‌ ನಗರದ ಹಿರಿಯ ಪ್ರಾಥಮಿಕ ಪಾಠಶಾಲೆ, ಕೆ.ಆರ್‌.ಬಡಾವಣೆಯ ಸರ್ಕಾರ ಪ್ರಾಥಮಿಕ ಪಾಠ ಶಾಲೆ, ರೈಲ್ವೆ ನಿಲ್ದಾಣ ರಸ್ತೆಯ ಪ್ರಾಥಮಿಕ ಶಾಲೆ, ಧೀನದಯಾಳು ಹಿರಿಯ ಪ್ರಾಥಮಿಕ ಶಾಲೆ, ಉರ್ದು ಹಿರಿಯ ಶಾಲೆ ಹಾಗೂ ಸರ್ಕಾರಿ ಹಿರಿಯ ಶಾಲೆ ಗಾಂಧಿನಗರ, ಹಳೇಪಾಳ್ಯ ಮತ್ತು ಗಾಯತ್ರಿ ನಗರದ ಸರ್ಕಾರಿ ಹಿರಿಯ ಶಾಲೆಗಳ ಮಕ್ಕಳಿಗೆ ನೋಟ್‌ಪುಸ್ತಕ ಮತ್ತು ಸಿಹಿ ವಿತರಿಸಲಾಯಿತು.

ಬಿಎಸ್ ವೈ ಸಮ್ಮುಖದಲ್ಲಿ ಶೋಭಾ ಹುಟ್ಟುಹಬ್ಬ ಆಚರಣೆ

PREV
click me!

Recommended Stories

ಬೆಂಗಳೂರು ಅತ್ತಿಗುಪ್ಪೆ ಮೆಟ್ರೋ ಸ್ಟೇಷನ್ ರಸ್ತೆಯಲ್ಲಿ ಅಗ್ನಿ ಅವಘಡ: ನಡುರಸ್ತೆಯಲ್ಲೇ ಭಸ್ಮವಾದ ಕಾರು
ಬೆಂಗಳೂರು ಹೋಟೆಲ್‌ನಲ್ಲಿ ಭರ್ಜರಿ ಪಾರ್ಟಿ, ಪೊಲೀಸ್ ಬಂದಾಕ್ಷಣ ಬಾಲ್ಕನಿಯಿಂದ ಜಿಗಿದ ಯುವತಿ!