ಕರ್ನಾಟಕ ಸ್ಥಳೀಯ ಸಂಸ್ಥೆಗಳ ಎಲೆಕ್ಷನ್: ಕೈ ಮೇಲುಗೈ, ಬಿಜೆಪಿ, ಜೆಡಿಎಸ್‌ಗೆ ಹಿನ್ನಡೆ

By Web DeskFirst Published May 31, 2019, 8:49 PM IST
Highlights

ರಾಜ್ಯದಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರ ಇದ್ಧರೂ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎರಡೂ ಪಕ್ಷಗಳ ಅಭ್ಯರ್ಥಿಗಳು ಸ್ವತಂತ್ರವಾಗಿ ಸ್ಪರ್ಧಿಸಿದ್ದವು. ಈ ಪೈಕಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದು, ಜೆಡಿಎಸ್  ಅಸ್ತಿತ್ವಕ್ಕಾಗಿ ತಿಣುಕಾಡುವಂತಾಗಿದೆ. ಇನ್ನು ಬಿಜೆಪಿಗೆ ಮುಖಭಂಗ ಅನುಭವಿಸಿದೆ.

ಬೆಂಗಳೂರು, [ಮೇ.31]: ಲೋಕ ಸಮರದ ಬಳಿಕ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಸದ್ದು ಜೋರಾಗಿದ್ದು, 19 ಪಟ್ಟಣ ಪಂಚಾಯಿತಿ, 30 ಪುರಸಭೆ ಹಾಗೂ 7 ನಗರಸಭೆಗಳು ಸೇರಿ 56 ಸಂಸ್ಥೆಗಳಿಗೆ ನಡೆದ ಚುನಾವಣಾ ಫಲಿತಾಂಶ ಹೊರ ಬಿದ್ದಿದೆ. 

ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಜನ ಬೆಂಬಲ ಗಳಿಸಿದ್ದ ಬಿಜೆಪಿ ಲೋಕಲ್ ವಾರ್‌ನಲ್ಲಿ ಮುಗ್ಗರಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರ ಇದ್ಧರೂ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧಿಸಿದ್ದವು. ಇದರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಕಡೆಗಳಲ್ಲಿ ಗೆಲುವು ಸಾಧಿಸಿದ್ದಾರೆ. ಇನ್ನು ಜೆಡಿಎಸ್  ಅಸ್ತಿತ್ವಕ್ಕಾಗಿ ಪರದಾಡುವಂತಾಗಿದೆ.

ಲೋಕ ಸಮರದ ಬಳಿಕ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಸದ್ದು ಜೋರಾಗಿದ್ದು, 19 ಪಟ್ಟಣ ಪಂಚಾಯಿತಿ, 30 ಪುರಸಭೆ ಹಾಗೂ 7 ನಗರಸಭೆಗಳು ಸೇರಿ 56 ಸಂಸ್ಥೆಗಳಿಗೆ ನಡೆದ ಚುನಾವಣಾ ಫಲಿತಾಂಶ ಹೊರ ಬಿದ್ದಿದೆ. 

ಪಟ್ಟಣ ಪಂಚಾಯಿತಿ ಫಲಿತಾಂಶ
ಪಟ್ಟಣ ಪಂಚಾಯಿತಿ ಫಲಿತಾಂಶದ ಒಟ್ಟು ಚಿತ್ರಣ ನೋಡೋದಾದರೆ, 19 ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿಗೆ 8 ಸ್ಥಾನ ಲಭಿಸಿದರೆ, ಕಾಂಗ್ರೆಸ್ ಗೆ 03, ಇತರರಿಗೆ 08 ಸ್ಥಾನಗಳು ಸಿಕ್ಕಿವೆ. ಆದ್ರೆ  ಜೆಡಿಎಸ್ ಮಾತ್ರ ಶೂನ್ಯ ಸಂಪಾದನೆ ಮಾಡಿದೆ.

ಪುರಸಭೆ ಫಲಿತಾಂಶ
30  ಪುರಸಭೆಗಳಲ್ಲಿ ಬಿಜೆಪಿ 05 ಸ್ಥಾನ ಸಿಕ್ಕರೆ, ಕಾಂಗ್ರೆಸ್  13 ಸ್ಥಾನ ಗಳಿಸಿದೆ. ಹಾಗೇಯೇ ಜೆಡಿಎಸ್ 2 ಸ್ಥಾನಕ್ಕೆ ತೃಪ್ತಿ ಪಟ್ಟರೆ, ಇತರೆಗೆ 10 ಸ್ಥಾನಗಳು ದಕ್ಕಿವೆ.

ನಗರಸಭೆ ಫಲಿತಾಂಶ
 7 ನಗರಸಭೆಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಶೂನ್ಯ ಸಾಧನೆ ಮಾಡಿದ್ರೆ, ಕಾಂಗ್ರೆಸ್ಗೆ 2 ಸ್ಥಾನ, ಇತರರು 5 ಸ್ಥಾನ ಪಡೆದಿದ್ದಾರೆ. ಒಟ್ಟು 56 ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 13 ಸ್ಥಾನ ಲಭಿಸಿದರೆ, ಕಾಂಗ್ರೆಸ್ ಗೆ 18, ಜೆಡಿಎಸ್ ಗೆ 02 ಸ್ಥಾನಗಳು ಸಿಕ್ಕಿವೆ. ಇನ್ನು ಪಕ್ಷೇತರರು 23 ಸ್ಥಾನ ಪಡೆದಿದ್ದಾರೆ.

ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿಯ ಒಟ್ಟು 1,221 ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 366 ಸೀಟ್ ಗಳಿಸಿದರೆ, ಕಾಂಗ್ರೆಸ್  509, ಜೆಡಿಎಸ್ 174 ಹಾಗೂ ಇತರೆ 172 ಕಡೆಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಈ ಮಧ್ಯೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎರಡು ವಾರ್ಡ್ ಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಒಂದು ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.

ಒಟ್ಟಾರೆ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ಸಂಖ್ಯಾಬಲ ಹಾಗೂ ವಾರ್ಡ್ ಗಳಲ್ಲಿನ ಮೇಲುಗೈ ನೋಡಿದರೆ ಕಾಂಗ್ರೆಸ್ ಉತ್ತಮ ಫಲಿತಾಂಶ ಪಡೆದಿದೆ,

 

click me!