'ಪ್ರತ್ಯೇಕ ಕರ್ನಾಟಕ ರಾಷ್ಟ್ರ ಮಾಡಿದ್ರೆ ನೆಮ್ಮದಿಯಿಂದ ಇರ್ತೀವಿ'..!

By Kannadaprabha News  |  First Published Dec 24, 2019, 9:05 AM IST

ಪ್ರತ್ಯೇಕ ಕರ್ನಾಟಕ ರಾಷ್ಟ್ರ ಮಾಡಿದರೆ ನಾವೆಲ್ಲರೂ ನೆಮ್ಮದಿಯಿಂದ ಇರುತ್ತೇವೆ ಎಂದು ನ್ಯೂ ಇಂಡಿಯನ್‌ ಕಾಂಗ್ರೆಸ್‌ ಪಾರ್ಟಿಯ ಅಧ್ಯಕ್ಷ ಅಯೂಬ್‌ ಖಾನ್‌ ಹೇಳಿದ್ದಾರೆ. ಕನ್ನಡ ರಾಷ್ಟ್ರೀಯ ಭಾಷೆಯಾಗಲಿ ಎಂದು ಅವರು ಕೋರಿದ್ದಾರೆ. 


ಮೈಸೂರು(ಡಿ.24): ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ತಂದು ಜನರ ನೆಮ್ಮದಿ ಹಾಳು ಮಾಡುತ್ತಿರುವ ಕೇಂದ್ರ ಸರ್ಕಾರ ಈ ವಿವಾದದಿಂದ ಕರ್ನಾಟಕದ ನೆಮ್ಮದಿ ಹಾಳು ಮಾಡಬಾರದು. ಪ್ರತ್ಯೇಕ ಕರ್ನಾಟಕ ರಾಷ್ಟ್ರ ಮಾಡಿದರೆ ನಾವೆಲ್ಲರೂ ನೆಮ್ಮದಿಯಿಂದ ಇರುತ್ತೇವೆ ಎಂದು ನ್ಯೂ ಇಂಡಿಯನ್‌ ಕಾಂಗ್ರೆಸ್‌ ಪಾರ್ಟಿಯ ಅಧ್ಯಕ್ಷ ಅಯೂಬ್‌ ಖಾನ್‌ ಹೇಳಿದ್ದಾರೆ

ಕೇಂದ್ರ ಬಿಜೆಪಿ ಸರ್ಕಾರ ಮುಸಲನ್ಮಾನರ ವಿರೋಧಿಯಂತೆ ನಡೆದುಕೊಳ್ಳುತ್ತಿದೆ. ಮತ ಬ್ಯಾಂಕ್‌ ರಾಜಕಾರಣದಿಂದ ಸಿಎಎ ಮತ್ತು ಎನ್‌ಆರ್‌ಸಿ ಜಾರಿಗೊಳಿಸಿದೆ. ಈ ದೇಶದ ದಲಿತರು ಮತ್ತು ಮುಸ್ಲಿಮರ ನೆಮ್ಮದಿಗೆ ಭಂಗ ತರುವಂತ ಕೆಲಸ ನಡೆಯುತ್ತಿವೆ. ಈ ದೇಶದಲ್ಲಿ ಹೊರಗಿನವರ ದಾಳಿ ನಡೆದಾಗಲೆಲ್ಲ ದಲಿತರು ಮತ್ತು ಮುಸ್ಲಿಮರು ಎದೆಕೊಟ್ಟು ಪ್ರಾಣಬಿಟ್ಟಿದ್ದಾರೆ. ಈಗ ಆ ಸಮುದಾಯಗಳನ್ನು ನಾಶಪಡಿಸುವ ಹುನ್ನಾರ ನಡೆಯುತ್ತಿದೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದ್ದಾರೆ.

Latest Videos

undefined

'ಕಾಂಗ್ರೆಸ್‌ ಸರ್ಕಾರದ ರಾಜ್ಯಗಳಲ್ಲೇಕೆ ಗಲಭೆ ಇಲ್ಲ..'?

ಅತಿ ಕಡಿಮೆ ಜನಸಂಖ್ಯೆಯುಳ್ಳ ವ್ಯಾಟಿಕನ್‌ ಸಿಟಿಯ ಜನ ಸಂಖ್ಯೆ ಕೇವಲ 1000. 11,1052 ಮಂದಿ ಇರುವ ತುವಲು, ಮತ್ತು ಮೋನಾಕೋ ರಾಷ್ಟ್ರದ ಜನಸಂಖ್ಯೆ 30645. ಹೀಗಾಗಿ 6 ಕೋಟಿಗೂ ಅಧಿಕ ಜನಸಂಖ್ಯೆಯುಳ್ಳ ಕರ್ನಾಟಕವನ್ನು ಪ್ರತ್ಯೇಕ ರಾಷ್ಟ್ರವೆಂಬುದಾಗಿ ಘೋಷಿಸಬೇಕು. ಕನ್ನಡ ರಾಷ್ಟ್ರೀಯ ಭಾಷೆಯಾಗಲಿ ಎಂದು ಅವರು ಕೋರಿದ್ದಾರೆ.

ಮೈಸೂರು: JDS ಮುಖಂಡ BJPಗೆ ಸೇರ್ಪಡೆ

click me!